Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 144:4 - ಕನ್ನಡ ಸತ್ಯವೇದವು J.V. (BSI)

4 ಮನುಷ್ಯನು ಬರೀ ಉಸಿರೇ; ಅವನ ಜೀವಕಾಲವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಮನುಷ್ಯನು ಬರೀ ಉಸಿರೇ, ಅವನ ಜೀವಕಾಲವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಮಾನವನು ಕೇವಲ ಉಸಿರಿಗೆ ಸಮಾನ I ಮರೆಯಾಗುವ ನೆರಳು ಅವನ ಜೀವನ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಮನುಷ್ಯರು ಕೇವಲ ಉಸಿರೇ. ಅವರ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಮನುಷ್ಯನು ಕೇವಲ ಉಸಿರಿನಂತಿದ್ದಾನೆ; ಅವನ ದಿವಸಗಳು ಅಳಿದು ಹೋಗುವ ನೆರಳಿನ ಹಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 144:4
16 ತಿಳಿವುಗಳ ಹೋಲಿಕೆ  

ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿದ ಹುಲ್ಲಿನಂತಿದ್ದೇನೆ.


ಸಂಜೆಯ ನೆರಳಿನಂತೆ ಗತಿಸಿಹೋಗುತ್ತಿದ್ದೇನೆ; ಗಾಳಿಯು ಬಡಕೊಂಡುಹೋಗುವ ವಿುಡಿತೆಯಂತಿದ್ದೇನೆ.


ನಾವಾದರೋ ನಿನ್ನೆ ಹುಟ್ಟಿದವರು, ನಮಗೆ ಏನೂ ತಿಳಿಯದು; ಭೂಲೋಕದಲ್ಲಿನ ನಮ್ಮ ದಿನಗಳು ನೆರಳಿನಂತಿವೆಯಷ್ಟೆ.


ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ ಎಂದು ಪ್ರಸಂಗಿಯು ಹೇಳುತ್ತಾನೆ.


ನಾವು ಸಾಯುವವರು; ನೆಲದ ಮೇಲೆ ಚೆಲ್ಲಲ್ಪಟ್ಟು ತಿರಿಗಿ ಕೂಡಿಸಲ್ಪಡಲಾರದ ನೀರಿನಂತಿದ್ದೇವೆ. ಮನುಷ್ಯರ ಪ್ರಾಣವನ್ನು ತೆಗೆಯುವದಕ್ಕೆ ದೇವರಿಗೆ ಇಷ್ಟವಿಲ್ಲ; ತಳ್ಳಲ್ಪಟ್ಟವನು ತಿರಿಗಿ ತನ್ನ ಬಳಿಗೆ ಬರುವ ಹಾಗೆ ಆತನು ಸದುಪಾಯಗಳನ್ನು ಕಲ್ಪಿಸುವವನಾಗಿರುತ್ತಾನೆ.


ಆದರೆ ದುಷ್ಟನಿಗೆ ಮೇಲಾಗದು, ನೆರಳಿನಂತಿರುವ ಅವನ ದಿನಗಳು ಹೆಚ್ಚುವದಿಲ್ಲ; ಅವನು ದೇವರಿಗೆ ಹೆದರುವವನಲ್ಲವಷ್ಟೆ.


ಲೋಕದಲ್ಲಿ ನಡೆಯುವ ಕೆಲಸಗಳನ್ನೆಲ್ಲಾ ನೋಡಿದ್ದೇನೆ; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ.


ಪ್ರಸಂಗಿಯು ಹೀಗೆ ಹೇಳುತ್ತಾನೆ - ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ!


ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ ಎಂಥಾ ವ್ಯರ್ಥಕ್ಕಾಗಿಯೇ ಮನುಷ್ಯರನ್ನು ನಿರ್ಮಿಸಿದ್ದೀ ಎಂದೂ ಜ್ಞಾಪಿಸಿಕೋ.


ನರರು ಬರೀ ಉಸಿರೇ; ನರಾಧಿಪತಿಗಳು ಬರೀ ಮಾಯವೇ. ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಲಘು.


ನೀನು ನರನನ್ನು ಪಾಪದ ನಿವಿುತ್ತ ಗದರಿಸಿ ಶಿಕ್ಷಿಸುವಾಗ ಅವನ ಚೆಲುವಿಕೆಯು ನುಸಿಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ. ಮನುಷ್ಯನೆಂಬವನು ಬರೀ ಉಸಿರೇ. ಸೆಲಾ.


ನಾವು ನಿನ್ನ ದೃಷ್ಟಿಯಲ್ಲಿ ಪರದೇಶಿಗಳೂ ನಮ್ಮ ಪಿತೃಗಳೆಲ್ಲರಂತೆ ಪ್ರವಾಸಿಗಳೂ ಆಗಿದ್ದೇವೆ, ನಮ್ಮ ಆಯುಷ್ಕಾಲವು ನೆರಳಿನಂತಿದೆ; ನಮಗೆ ಯಾವ ನಿರೀಕ್ಷೆಯೂ ಇಲ್ಲ.


ದೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನಿಂದಾದ [ಶರೀರಗಳೆಂಬ] ಮನೆಗಳೊಳಗೆ ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪುಕಂಡುಹಿಡಿಯಬೇಕಲ್ಲವೇ. ಅವರು ದೀಪದ ಹುಳದಂತೆ ಅಳಿದು ಹೋಗುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು