Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 134:3 - ಕನ್ನಡ ಸತ್ಯವೇದವು J.V. (BSI)

3 ಭೂಮ್ಯಾಕಾಶಗಳನ್ನು ಉಂಟುಮಾಡಿದ ಯೆಹೋವನು ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಭೂಮ್ಯಾಕಾಶಗಳನ್ನು ಉಂಟುಮಾಡಿದ ಯೆಹೋವನು, ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಹರಸಲಿ ಸಿಯೋನಿನಿಂದ ನಿಮ್ಮನು I ಭೂಮ್ಯಾಕಾಶಗಳ ಸೃಜಿಸಿದಾತನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೆಹೋವನು ನಿಮ್ಮನ್ನು ಚೀಯೋನಿನಿಂದ ಆಶೀರ್ವದಿಸಲಿ. ಆತನು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ ಯೆಹೋವ ದೇವರು, ಚೀಯೋನಿನೊಳಗಿಂದ ನಿಮ್ಮನ್ನು ಆಶೀರ್ವದಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 134:3
13 ತಿಳಿವುಗಳ ಹೋಲಿಕೆ  

ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ; ಜೀವಮಾನವೆಲ್ಲಾ ಯೆರೂಸಲೇವಿುನ ಸೌಭಾಗ್ಯವನ್ನು ನೋಡುವವನಾಗು.


ಭೂಮ್ಯಾಕಾಶಗಳನ್ನು ಉಂಟುಮಾಡಿದ ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವದು.


ಆಮೇಲೆ ಇಸ್ರಾಯೇಲ್ ಜನವೆಲ್ಲಾ ರಕ್ಷಣೆಹೊಂದುವದು. ಇದಕ್ಕೆ ಆಧಾರವಾಗಿ ಶಾಸ್ತ್ರದಲ್ಲಿ - ಬಿಡಿಸುವವನು ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆಮಾಡುವನು.


ಯೆರೂಸಲೇವಿುನಲ್ಲಿ ವಾಸಿಸುವ ಯೆಹೋವನ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯಾಹುವಿಗೆ ಸ್ತೋತ್ರ!


ತನ್ನ ಪರಿಶುದ್ಧ ನಿವಾಸದಿಂದ ನಿನಗೆ ಸಹಾಯಮಾಡಲಿ; ಚೀಯೋನಿನಿಂದ ನಿನಗೆ ಆಧಾರ ದಯಪಾಲಿಸಲಿ.


ಯೆಹೋವನು ನಿನ್ನ ರಾಜದಂಡದ ಆಳಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು.


ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ದುರವಸ್ಥೆಯಿಂದ ತಪ್ಪಿಸಿದಾಗ ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು; ಇಸ್ರಾಯೇಲ್ಯರು ಹರ್ಷಿಸುವರು.


ಆಗ ಬೋವಜನು ಬೇತ್ಲೆಹೇವಿುನಿಂದ ಹೊಲಕ್ಕೆ ಬಂದು ಕೊಯ್ಯುವವರಿಗೆ - ಯೆಹೋವನು ನಿಮ್ಮ ಸಂಗಡ ಇರಲಿ ಅಂದನು. ಅವರು - ಯೆಹೋವನು ನಿನ್ನನ್ನು ಆಶೀರ್ವದಿಸಲಿ ಎಂದು ಹರಸಿದರು.


ನೀನು ಸಮರ್ಪಿಸಿದ ನೈವೇದ್ಯಗಳು ಆತನ ನೆನಪಿಗೆ ಬರಲಿ; ನೀನು ಮಾಡಿದ ಸರ್ವಾಂಗಹೋಮಗಳು ಆತನಿಗೆ ಮೆಚ್ಚಿಕೆಯಾಗಲಿ. ಸೆಲಾ.


ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.


ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ; ಆತನ ಕೃಪೆಯು ಶಾಶ್ವತವಾದದ್ದು.


ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ. ಆಕಾಶಮಂಡಲವನ್ನು ಹರವಿ ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ ಮನುಷ್ಯನೊಳಗೆ ಜೀವಾತ್ಮವನ್ನು ಸೃಷ್ಟಿಸುವ ಯೆಹೋವನು ಇಂತೆನ್ನುತ್ತಾನೆ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು