Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 128:3 - ಕನ್ನಡ ಸತ್ಯವೇದವು J.V. (BSI)

3 ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅಂತಃಪುರದಲ್ಲಿರುವ ನಿನ್ನ ಹೆಂಡತಿಯು, ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ಎಣ್ಣೇಮರದ ಸಸಿಗಳ ಹಾಗೆ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ I ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು. ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು. ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು, ಓಲಿವ್ ಮರಗಳ ಸಸಿಗಳ ಹಾಗೆ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 128:3
11 ತಿಳಿವುಗಳ ಹೋಲಿಕೆ  

ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ತಂಪಿನಿಂದ ಫಲವತ್ತಾಗಿಯೂ ಪೊದೆಯಾಗಿಯೂ ಬೆಳೆದಿತ್ತು.


ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.


ನೀನು ಹುಟ್ಟು ಕಾಡುಮರದಿಂದ ಕಡಿದು ತೆಗೆಯಲ್ಪಟ್ಟು ನಿನಗೆ ಸಂಬಂಧಪಡದ ಊರು ಮರದಲ್ಲಿ ಕಸಿಕಟ್ಟಿಸಿಕೊಂಡವನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ.


ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮಾನನಾಗಿದ್ದಾನೆ, ಒರತೆಯ ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿದ್ದಾನೆ.


ಯೆಹೋವನು ನಿನಗೆ ಸುಂದರಫಲದಿಂದ ಅಂದವಾದ ಹಚ್ಚನೆಯ ಒಲೀವಮರವೆಂದು ಹೆಸರಿಟ್ಟಿದ್ದನು; ಆ ಮರಕ್ಕೆ ಬೆಂಕಿಯಿಕ್ಕಿ ಬಲು ಧಗಧಗಿಸುವಂತೆ ಮಾಡಿದ್ದಾನೆ; ಅದರ ರೆಂಬೆಗಳು ಮುರಿದುಹೋಗಿವೆ.


ಯೌವನಸ್ಥರಾದ ನಮ್ಮ ಗಂಡುಮಕ್ಕಳು ಹೊರವಾಗಿ ಬೆಳೆದಿರುವ ಸಸಿಗಳಂತಿರುವರು; ಹೆಣ್ಣುಮಕ್ಕಳು ಅರಮನೆಯಲ್ಲಿರುವ ವಿಚಿತ್ರವಾಗಿ ಕೆತ್ತಿದ ಮೂಲೆಗಂಬದಂತಿರುವರು.


ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು. ಊರುಬಾಗಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ ಅಂಥವರು ಅಪಮಾನಹೊಂದುವದಿಲ್ಲ.


ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದರು. ಅವರು ಒಟ್ಟಿಗೆ ನೂರ ಐವತ್ತು ಮಂದಿ. ಎಲ್ಲರೂ ಬೆನ್ಯಾಮೀನ್ಯರು.


ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು