Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 11:1 - ಕನ್ನಡ ಸತ್ಯವೇದವು J.V. (BSI)

1 ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಾನು ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ. ನೀವು, “ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ” ಎಂದು ಹೇಳುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ನಾನು ಆಶ್ರಯಿಸಿಕೊಂಡಿರಲು ಪ್ರಭುವನು I ನೀವು ಹೇಳುವುದೆಂತು ನನಗೀ ಮಾತನು: II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ. ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರಲ್ಲಿ ನಾನು ಆಶ್ರಯಿಸಿದ್ದೇನೆ. ಹಾಗಾದರೆ, “ಒಂದು ಪಕ್ಷಿಯಂತೆ ನಿನ್ನ ಪರ್ವತಕ್ಕೆ ಹಾರಿ ಹೋಗು,” ಎಂದು ನೀವು ನನಗೆ ಹೇಗೆ ಹೇಳುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 11:1
21 ತಿಳಿವುಗಳ ಹೋಲಿಕೆ  

ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಮಾಡುವದೇನು?


ನನಗೆ ಆಶಾಭಂಗಪಡಿಸಬೇಡ. ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ.


ಅನಂತರ ದಾವೀದನು ಅರಣ್ಯದಲ್ಲಿರುವ ಆಯಾ ಆಶ್ರಯಗಿರಿಗಳಲ್ಲಿ ಇರುತ್ತಿದ್ದು ಕಡೆಗೆ ಜೀಫ್ ಅರಣ್ಯದ ಪರ್ವತ ಪ್ರಾಂತಕ್ಕೆ ಬಂದು ಅಲ್ಲಿ ವಾಸಮಾಡಿದನು. ಸೌಲನು ದಿನಂಪ್ರತಿಯೂ ಅವನನ್ನು ಹುಡುಕುತ್ತಿದ್ದರೂ ದೇವರು ಇವನ ಕೈಗೆ ಒಪ್ಪಿಸಲಿಲ್ಲ.


ಅದೇ ಗಳಿಗೆಯಲ್ಲಿ ಕೆಲವು ಮಂದಿ ಫರಿಸಾಯರು ಹತ್ತಿರ ಬಂದು ಆತನಿಗೆ - ನೀನು ಇಲ್ಲಿಂದ ಹೊರಟುಹೋಗು, ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ ಎಂದು ಹೇಳಲು


ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ ಪಕ್ಷಿಯು ಹಾರಿಹೋಗುವ ಹಾಗೂ ತಪ್ಪಿಸಿಕೋ.


ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು.


ಕೂಷ್ಯಲೂಬ್ಯರ ಸೈನ್ಯವು ಅಪರಿವಿುತ ರಥಾಶ್ವಬಲಗಳುಳ್ಳ ಮಹಾಸೈನ್ಯವಲ್ಲವೋ! ನೀನು ಯೆಹೋವನ ಮೇಲೆ ಆತುಕೊಂಡದರಿಂದ ಆತನು ಅದನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟನು.


ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ.


ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಯಾಕಂದರೆ ನಿನ್ನ ಮರೆಹೊಗುವವರನ್ನು ನೀನು ಕೈಬಿಡುವವನಲ್ಲ.


ಯೆಹೋವನೇ, ನನ್ನ ದೇವರೇ, ನಿನ್ನ ಮರೆಹೊಕ್ಕಿದ್ದೇನೆ; ಹಿಂದಟ್ಟುವವರೆಲ್ಲರಿಂದ ತಪ್ಪಿಸಿ ನನ್ನನ್ನು ಕಾಪಾಡು.


ಆಸನು ತನ್ನ ದೇವರಾದ ಯೆಹೋವನಿಗೆ - ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ ನಿನ್ನ ಹೊರತು ರಕ್ಷಕನಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು. ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾ ಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು ಎಂದು ಮೊರೆಯಿಡಲು


ಬೇಗ ಹೋಗು, ನಿಲ್ಲಬೇಡ ಎಂದು ಕೂಗಿ ಹೇಳಿದನು. ಹುಡುಗನು ಬಾಣಗಳನ್ನು ಕೂಡಿಸಿಕೊಂಡು ಯಜಮಾನನ ಬಳಿಗೆ ಬಂದನು.


ದಾವೀದನು ತನ್ನ ಮನಸ್ಸಿನಲ್ಲಿ - ನಾನು ಇಲ್ಲಿದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಮಡಿಯಲೇಬೇಕು. ಆದದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವದೇ ಉತ್ತಮ. ಆಮೇಲೆ ಸೌಲನು ಇಸ್ರಾಯೇಲ್‍ಪ್ರಾಂತಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು, ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು ಅಂದುಕೊಂಡು


ಅನಂತರ ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್‍ದೇಶದ ವಿುಚ್ಪೆ ಎಂಬಲ್ಲಿಗೆ ಕರಕೊಂಡು ಹೋಗಿ ಅಲ್ಲಿನ ಅರಸನನ್ನು - ದೇವರು ನನಗೆ ಮಾರ್ಗತೋರಿಸುವವರೆಗೂ ನನ್ನ ತಂದೆತಾಯಿಗಳು ನಿನ್ನ ಬಳಿಯಲ್ಲಿರುವದಕ್ಕೆ ಅಪ್ಪಣೆಯಾಗಬೇಕೆಂದು ಬೇಡಿಕೊಂಡು ಅವರನ್ನು ಅವನ ಬಳಿಯಲ್ಲಿ ಬಿಟ್ಟನು.


ಸೌಲನು ಕೂಡಲೆ ದೂತರನ್ನು ಕರಿಸಿ - ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕೆಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ - ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ನಾಳೆ ಬೆಳಿಗ್ಗೆ ಹತನಾಗುವಿ ಎಂದು ಹೇಳಿ


ನಾನು - ನನ್ನಂಥ ಪುರುಷನು ಓಡಿಹೋಗುವದು ಯೋಗ್ಯವೋ? ಇದಲ್ಲದೆ ನನ್ನಂಥವನು ಪ್ರಾಣ ರಕ್ಷಣೆಗಾಗಿ ಪವಿತ್ರಸ್ಥಾನವನ್ನು ಪ್ರವೇಶಿಸುವನೇ? ನಾನು ಬರುವದಿಲ್ಲ ಎಂದು ಉತ್ತರಕೊಟ್ಟೆನು.


ಇಲ್ಲವಾದರೆ ನನಗೆ ರಕ್ಷಕನಿಲ್ಲವೆಂದು ತಿಳಿದು ಶತ್ರುವು ಸಿಂಹದಂತೆ ಮೇಲೆ ಬಿದ್ದು ನನ್ನನ್ನು ಹರಿದುಬಿಟ್ಟಾನು.


ನಾವು ಶೂರರು, ಯುದ್ಧಪ್ರವೀಣರಾದ ಪರಾಕ್ರಮಶಾಲಿಗಳು ಎಂದು ನೀವು ಅಂದುಕೊಳ್ಳುವದು ಹೇಗೆ? ಮೋವಾಬು ಹಾಳಾಗಿದೆ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು