Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 109:13 - ಕನ್ನಡ ಸತ್ಯವೇದವು J.V. (BSI)

13 ಅವನ ಸಂತತಿಯು ನಿರ್ಮೂಲವಾಗಲಿ. ಎರಡನೆಯ ತಲೆಯಲ್ಲಿಯೇ ಅದು ನಿರ್ನಾಮವಾಗಿ ಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವನ ಸಂತತಿಯು ನಿರ್ಮೂಲವಾಗಲಿ; ಎರಡನೆಯ ತಲೆಯಲ್ಲಿಯೇ ಅದು ನಿರ್ನಾಮವಾಗಿ ಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅವನನ್ನು ಸಂಪೂರ್ಣವಾಗಿ ನಾಶಮಾಡು. ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 109:13
17 ತಿಳಿವುಗಳ ಹೋಲಿಕೆ  

ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ; ದುಷ್ಟರ ನಾಮವು ನಿರ್ನಾಮ.


ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವದು.


ಅವನಿಗೆ ಸ್ವಜನರಲ್ಲಿ ಮಗನಾಗಲಿ ಮೊಮ್ಮಗನಾಗಲಿ ಇರುವದಿಲ್ಲ, ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವದಿಲ್ಲ.


ಯೆಹೋವನು ಇಂತೆನ್ನುತ್ತಾನೆ - ಇವನನ್ನು ಮಕ್ಕಳಿಲ್ಲದವನು, ವ್ಯರ್ಥಜನ್ಮದವನು ಎಂದು ಪಟ್ಟಿಯಲ್ಲಿ ಬರೆಯಿರಿ; ಇವನ ಸಂತಾನದಲ್ಲಿ ಇನ್ನು ಮೇಲೆ ಯಾವನೂ ದಾವೀದನ ಸಿಂಹಾಸನದಲ್ಲಿ ಕೂತು ಯೆಹೂದವನ್ನು ಆಳಿ ಬಾಳನು.


ನೀನು ಅವರನ್ನು ಸಂಹರಿಸಿ ಭೂವಿುಯ ಮೇಲೆ ಅವರ ಸಂತತಿಯೇ ಇಲ್ಲದಂತೆ ಮಾಡುವಿ; ಅವರ ವಂಶದವರು ಮನುಷ್ಯರೊಳಗೆ ಉಳಿಯುವದೇ ಇಲ್ಲ.


ತನ್ನ ಮಕ್ಕಳು ದೇವದೂಷಕರೆಂದು ಅವನಿಗೆ ತಿಳಿದುಬಂದರೂ ಅವನು ಅವರನ್ನು ಗದರಿಸಲಿಲ್ಲ. ಈ ಪಾಪದ ನಿವಿುತ್ತವಾಗಿ ಅವನ ಮನೆಯನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು.


ಯೆಹೋವನು ಅಂಥವನನ್ನು ಎಂದಿಗೂ ಕ್ಷವಿುಸದೆ ಬಹಳ ಸಿಟ್ಟುಮಾಡಿಕೊಂಡು ತನ್ನ ಗೌರವವನ್ನು ಕಾಪಾಡಿಕೊಳ್ಳುವವನಾಗಿ ಈ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪೋಕ್ತಿಗಳಿಗೂ ಅವನನ್ನು ಗುರಿಪಡಿಸಿ ಅವನ ಹೆಸರನ್ನು ಭೂವಿುಯ ಮೇಲೆ ಇಲ್ಲದಂತೆ ಮಾಡುವನು.


ಆದಕಾರಣ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ನಿಮ್ಮನ್ನು ಸೇರಿಸಿ ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ ಭೂವಿುಯ ಮೇಲೆ ಅಮಾಲೇಕ್ಯರ ಹೆಸರೇ ಉಳಿಯದಂತೆ ನೀವು ಮಾಡಬೇಕು; ಇದನ್ನು ಮರೆಯಬಾರದು.


ಬಿಡು, ನಾನು ಅವರನ್ನು ನಾಶಮಾಡಿ ಅವರ ಹೆಸರನ್ನು ಭೂವಿುಯ ಮೇಲೆ ಉಳಿಯದಂತೆ ಮಾಡುವೆನು. ತರುವಾಯ ಅವರಿಗಿಂತಲೂ ಮಹಾಬಲಿಷ್ಠ ಜನಾಂಗವು ನಿನ್ನಿಂದುಂಟಾಗುವಂತೆ ಮಾಡುವೆನು ಎಂದು ಹೇಳಿದನು.


ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರು ಕುಲದಿಂದ ತೆಗೆಯಲ್ಪಡುವದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವಾಸ್ತ್ಯವನ್ನು ಕೊಡಬೇಕೆಂದು ಕೇಳಿಕೊಂಡರು.


ಇವನು ಸಿಂಹಾಸನದ ಮೇಲೆ ಕೂತು ಆಳತೊಡಗಿದ ಕೂಡಲೆ ಬಾಷನ ಮನೆಯವರನ್ನೂ ಅವನ ಬಂಧು ವಿುತ್ರರನ್ನೂ ಸಂಹರಿಸಿದನು; ಅವರಲ್ಲಿ ಒಬ್ಬ ಗಂಡಸನ್ನೂ ಉಳಿಸಲಿಲ್ಲ.


ಇವರು ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಹಮ್ಮೆದಾತನ ಮಗನಾದ ಹಾಮಾನನ ಹತ್ತು ಮಂದಿ ಮಕ್ಕಳು. ಇಷ್ಟು ಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈಹಾಕಲಿಲ್ಲ.


ಅವನ ಸ್ಮರಣೆಯು ಭೂವಿುಯಲ್ಲಿ ಅಳಿದುಹೋಗುವದು, ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ನಿಲ್ಲುವದಿಲ್ಲ.


ಅವರು ತಂತ್ರೋಪಾಯಗಳನ್ನು ಕಲ್ಪಿಸಿ ನಿನಗೆ ಕೇಡನ್ನು ಮಾಡಬೇಕೆಂದು ಆಲೋಚಿಸಿದರೂ ಅದು ನಡೆಯುವದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು