ಎಸ್ತೇರಳು 6:13 - ಕನ್ನಡ ಸತ್ಯವೇದವು J.V. (BSI)13 ತನ್ನ ಹೆಂಡತಿಯಾದ ಜೆರೆಷಳ ಮತ್ತು ಎಲ್ಲಾ ಆಪ್ತರ ಮುಂದೆ ತನಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದನು. ಆಗ ಅವನ ಪಂಡಿತರೂ ಹೆಂಡತಿಯೂ ಅವನಿಗೆ - ಯಾವನ ಮುಂದೆ ನಿನ್ನ ಪತನವು ಪ್ರಾರಂಭವಾಯಿತೋ ಆ ಮನುಷ್ಯನು ಯೆಹೂದಸಂತಾನದವನಾಗಿದ್ದರೆ ನೀನು ಗೆಲ್ಲಲಾರಿ, ಅವನ ಮುಂದೆ ಬಿದ್ದು ಹಾಳಾಗುವಿ ಅಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆಗ ಅವನ ಪಂಡಿತರೂ ಮತ್ತು ಹೆಂಡತಿಯೂ ಅವನಿಗೆ, “ಯಾವನ ಮುಂದೆ ನಿನ್ನ ಸೋಲು ಪ್ರಾರಂಭವಾಯಿತೋ ಆ ಮನುಷ್ಯನು ಯೆಹೂದ ಸಂತಾನದವನಾಗಿದ್ದರೆ ನೀನು ಗೆಲ್ಲಲಾರಿ, ಅವನ ಮುಂದೆ ಬಿದ್ದು ಹಾಳಾಗುವಿ” ಅಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ತನ್ನ ಪತ್ನಿ ಜೆರೆಷಳಿಗೂ ಎಲ್ಲಾ ಆಪ್ತರಿಗೂ ತನಗೆ ಸಂಭವಿಸಿದುದನ್ನೆಲ್ಲಾ ವರದಿಮಾಡಿದನು. ಆಗ ಅವನ ಪಂಡಿತರೂ ಪತ್ನಿಯೂ ಅವನಿಗೆ, “ಯಾವನಿಂದ ನಿಮ್ಮ ಪತನವು ಪ್ರಾರಂಭವಾಯಿತೋ ಆ ವ್ಯಕ್ತಿ ಒಂದು ವೇಳೆ ಯೆಹೂದ್ಯನಾಗಿದ್ದರೆ, ನೀವು ಅವನನ್ನೆಂದಿಗೂ ಜಯಿಸಲಾರಿರಿ. ಅವನ ಮುಂದೆ ಬಿದ್ದು ಹಾಳಾಗುವಿರಿ,” ಎಂದು ಎಚ್ಚರವಿತ್ತರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ತನ್ನ ಹೆಂಡತಿ ಜೆರೆಷಳಿಗೂ ಮತ್ತು ತನಗೆ ಸಲಹೆ ಕೊಟ್ಟಿದ್ದ ಮಿತ್ರವೃಂದದವರಿಗೂ ನಡೆದ ವಿಷಯ ತಿಳಿಸಿದನು. ಆಗ ಅವರು ತಿಳಿಸಿದ್ದೇನೆಂದರೆ: “ಮೊರ್ದೆಕೈಯು ಯೆಹೂದ್ಯನಾಗಿದ್ದರೆ ನೀನು ಜಯಗಳಿಸುವುದಿಲ್ಲ. ಈಗಲೇ ನೀನು ಸೋಲುತ್ತಿರುವಿ. ನಿಜವಾಗಿಯೂ ನೀನೇ ನಾಶವಾಗುವಿ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆಗ ಹಾಮಾನನು ತನ್ನ ಹೆಂಡತಿಯಾದ ಜೆರೆಷಳಿಗೂ ತನ್ನ ಸಮಸ್ತ ಸ್ನೇಹಿತರಿಗೂ ತನಗೆ ಆದದ್ದನ್ನೆಲ್ಲಾ ವಿವರವಾಗಿ ಹೇಳಿದನು. ಆಗ ಅವನ ಸಲಹೆಗಾರರೂ ಹೆಂಡತಿಯಾದ ಜೆರೆಷಳೂ ಅವನಿಗೆ, “ಯಾವನ ಮುಂದೆ ನಿನ್ನ ಬೀಳುವಿಕೆ ಪ್ರಾರಂಭವಾಯಿತೋ, ಆ ಮೊರ್ದೆಕೈ ಯೆಹೂದ್ಯನಾಗಿದ್ದರೆ ನೀನು ಅವನನ್ನು ಜಯಿಸಲಾರೆ. ನಿಶ್ಚಯವಾಗಿ, ನೀನು ಅವನಿಂದ ನಾಶವಾಗುವಿ,” ಎಂದರು. ಅಧ್ಯಾಯವನ್ನು ನೋಡಿ |