ಎಸ್ತೇರಳು 3:4 - ಕನ್ನಡ ಸತ್ಯವೇದವು J.V. (BSI)4 ದಿನಂಪ್ರತಿ ಅವನನ್ನು ಎಚ್ಚರಿಸಿದರೂ ಅವನು ಮಣಿಯಲಿಲ್ಲ. ಆದದರಿಂದ ಅವರು - ತಾನು ಯೆಹೂದ್ಯನೆನ್ನುವ ಮೊರ್ದೆಕೈಯ ಹೆಮ್ಮೆಯ ಹಟವು ಸಾಗುವದೇನೋ ನೋಡೋಣ ಎಂದುಕೊಂಡು ಅದನ್ನು ಹಾಮಾನನಿಗೆ ತಿಳಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಮೊರ್ದೆಕೈಯು ತಾನು ಯೆಹೂದ್ಯನೆನ್ನುವ ಹೆಮ್ಮೆಯ ಹಾಗೂ ಮಾನವನಿಗೆ ಸಾಷ್ಟಾಂಗನಮಸ್ಕಾರ ಮಾಡುವುದಿಲ್ಲ ಎಂಬ ಅವನ ಹಟ ಸಾಗುವುದೇನೋ ನೋಡೋಣ ಎಂದುಕೊಂಡು ಅವರು ಅದನ್ನು ಹಾಮಾನನಿಗೆ ತಿಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಹೀಗೆ ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ಹಟವು ಎಲ್ಲಿಯವರೆಗೆ ಸಾಗುವುದೊ ನೋಡಿಯೇ ಬಿಡಬೇಕೆಂದು ಅವನ ಈ ವರ್ತನೆಯ ಬಗ್ಗೆ ಹಾಮಾನನಿಗೆ ದೂರು ಹೇಳಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಪ್ರತಿದಿನ ಆ ಅಧಿಕಾರಿಗಳು ಮೊರ್ದೆಕೈಗೆ ಹೇಳಿದರೂ ಅವನು ಹಾಮಾನನಿಗೆ ಅಡ್ಡಬೀಳಲೂ ಇಲ್ಲ, ಗೌರವಿಸಲೂ ಇಲ್ಲ. ಈ ವಿಷಯವನ್ನು ಅಧಿಕಾರಿಗಳು ಹಾಮಾನನಿಗೆ ತಿಳಿಸಿದರು. ಮೊರ್ದೆಕೈಗೆ ಹಾಮಾನನು ಮಾಡುವದನ್ನು ನೋಡಲು ಕಾದಿದ್ದರು. ಮೊರ್ದೆಕೈ ಅವರಿಗೆ ತಾನು ಯೆಹೂದ್ಯನೆಂದು ತಿಳಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಅವರಿಗೆ ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ನಡವಳಿಕೆಯನ್ನು ಸಹಿಸಬಹುದೋ ಎಂದು ಕಾಣಲು ಅವರು ಹಾಮಾನನಿಗೆ ದೂರು ಹೇಳಿದರು. ಅಧ್ಯಾಯವನ್ನು ನೋಡಿ |