Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 2:6 - ಕನ್ನಡ ಸತ್ಯವೇದವು J.V. (BSI)

6 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದರಾಜನಾದ ಯೆಹೋಯಾಕೀನನೊಡನೆ ಸೆರೆಯೊಯ್ಯಲ್ಪಟ್ಟವರಲ್ಲಿ ಇವನೊಬ್ಬನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದರಾಜನಾದ ಯೆಹೋಯಾಕೀನನೊಡನೆ ಸೆರೆಯಾಗಿ ಒಯ್ಯಲ್ಪಟ್ಟವರಲ್ಲಿ ಇವನೂ ಒಬ್ಬನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನಿಂದ ಸೆರೆಹಿಡಿಯಲಾದ ಯೆಹೂದ ಅರಸನಾದ ಯೆಕೋನ್ಯನ ಸಂಗಡ ಜೆರುಸಲೇಮಿನಿಂದ ಸೆರೆಹಿಡಿಯಲಾದವರಲ್ಲಿ ಇವನೂ ಒಬ್ಬನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಮೊರ್ದೆಕೈಯನ್ನು ಸೆರೆಹಿಡಿದು ತಂದಿದ್ದನು. ಯೆಹೂದದ ಅರಸನಾದ ಯೆಹೋಯಾಕೀನನೊಂದಿಗೆ ಸೆರೆಒಯ್ಯಲ್ಪಟ್ಟ ಗುಂಪಿನೊಂದಿಗೆ ಇವನೂ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಸೆರೆಯಾಗಿ ತಂದ ಯೆಹೂದದ ಅರಸನಾಗಿರುವ ಯೆಹೋಯಾಕೀನನ ಸಂಗಡ ಯೆರೂಸಲೇಮಿನಿಂದ ಸೆರೆಹಿಡಿಯಲಾದವರಲ್ಲಿ ಒಬ್ಬನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 2:6
8 ತಿಳಿವುಗಳ ಹೋಲಿಕೆ  

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಶಿಲ್ಪಿಗಳನ್ನೂ ಕಮ್ಮಾರರನ್ನೂ ಯೆರೂಸಲೇವಿುನಿಂದ ಬಾಬೆಲಿಗೆ ಸೆರೆ ಒಯ್ದ ಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ಕಾಣಮಾಡಿದನು.


ಕತ್ತಿಗೆ ತಪ್ಪಿಸಿಕೊಂಡವರನ್ನು ಅರಸನು ಬಾಬೆಲಿಗೆ ಸೆರೆಯೊಯ್ದನು. ಪಾರಸಿಯ ಪ್ರಭುತ್ವವು ಅಲ್ಲಿ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.


ಅವನು ಪಿತೃಗಳ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಖೀನನು ಅರಸನಾದನು.


ಯೆಹೋವನು ಹೀಗನ್ನುತ್ತಾನೆ - ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಕೊನ್ಯನೆಂಬ ನೀನು ನನ್ನ ಬಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತು ಹಾಕುತ್ತಿದ್ದೆನು!


ಕೊನ್ಯನೆಂಬ ಈ ಮನುಷ್ಯನು ಅಸಡ್ಡೆಗೀಡಾದ ಒಡಕು ಗಡಿಗೆಯೋ? ಯಾರಿಗೂ ಇಷ್ಟವಲ್ಲದ ಮಡಿಕೆಯೋ? ಅವನೂ ಅವನ ಸಂತತಿಯವರೂ ಏಕೆ ಬಿಸಾಡಲ್ಪಟ್ಟಿದ್ದಾರೆ? ನೋಡದ ದೇಶಕ್ಕೆ ಏಕೆ ಎಸೆಯಲ್ಪಟ್ಟಿದ್ದಾರೆ?


ಆಗ ಯೆಹೂದದ ಅರಸನಾದ ಯೆಹೋಯಾಖೀನನು ತನ್ನ ತಾಯಿ ಪರಿವಾರದವರು ಸೇನಾಪತಿಗಳು ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು; ಅವನು ಇವನನ್ನು ತನ್ನ ಆಳಿಕೆಯ ಎಂಟನೆಯ ವರುಷದಲ್ಲಿ ಸೆರೆಹಿಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು