ಎಫೆಸದವರಿಗೆ 1:11 - ಕನ್ನಡ ಸತ್ಯವೇದವು J.V. (BSI)11-12 ಇದಲ್ಲದೆ ಆತನಲ್ಲಿ ನಾವು ದೇವರ ಸ್ವಕೀಯ ಪ್ರಜೆಯಾದೆವು, ಬರಬೇಕಾದ ಕ್ರಿಸ್ತನನ್ನು ಎದುರುನೋಡುತ್ತಿದ್ದ ನಾವು ತನ್ನ ಮಹಿಮೆಯನ್ನು ಪ್ರಖ್ಯಾತಿಪಡಿಸಬೇಕೆಂದು ಸಮಸ್ತಕಾರ್ಯಗಳನ್ನು ತನ್ನ ಇಷ್ಟದಂತೆ ನಡಿಸುವ ದೇವರು ತನ್ನ ಸಂಕಲ್ಪದ ಮೇರೆಗೆ ನಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ದೇವರ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವ ಅವರ ಉದ್ದೇಶದ ಪ್ರಕಾರ ಕ್ರಿಸ್ತನಲ್ಲಿ ನಮ್ಮನ್ನು ಮೊದಲೇ ಆರಿಸಿಕೊಂಡರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್11 ಸಗ್ಳೆ ದೆವಾಚ್ಯಾ ಯವ್ಜನಿ ಅನಿ ನಿರ್ದಾರಾ ಪರ್ಕಾರ್ ಹೊಲೆ, ದೆವಾನ್ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ಅಪ್ನಾಚಿ ಸ್ವತಾಚಿ ಲೊಕಾ ಕರುನ್ ಎಚುನ್ ಘೆಟ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಹ್ಯೊ ತೆಜೊ ಸ್ವತಾಚೊ ಉದ್ದೆಶ್ ಹೊವ್ನ್ ಹೊತ್ತೊ, ಹೆ ಸಗ್ಳೆ ಆರಂಬಾಕ್ ನಿರ್ದಾರ್ ಕರಲ್ಲ್ಯಾಚ್ಯಾ ಪರ್ಕಾರ್ ಹೊಲೆ. ಅಧ್ಯಾಯವನ್ನು ನೋಡಿ |
ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದೆಯೂ ಇದ್ದಾಗ - ಹಿರಿಯನು ಕಿರಿಯನಿಗೆ ಸೇವೆ ಮಾಡುವನೆಂಬದಾಗಿ ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಸ್ಥಿರವಾಗಿರಬೇಕೆಂದು ತೋರಿಸಿದನು. ಆ ಸಂಕಲ್ಪವು ಪುಣ್ಯಕ್ರಿಯೆಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ.