Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 9:2 - ಕನ್ನಡ ಸತ್ಯವೇದವು J.V. (BSI)

2 ತಮಗೂ ತಮ್ಮ ಗಂಡುಮಕ್ಕಳಿಗೂ ಅವರಿಂದ ಹೆಣ್ಣುಗಳನ್ನು ತೆಗೆದುಕೊಂಡದರಿಂದ ದೇವಕುಲವು ಅನ್ಯದೇಶಗಳವರೊಡನೆ ವಿುಶ್ರವಾಯಿತು. ಪ್ರಭುಗಳೂ ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾದರು ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವರು ತಮಗೂ ತಮ್ಮ ಗಂಡುಮಕ್ಕಳಿಗೂ ಅವರಿಂದ ಹೆಣ್ಣುಮಕ್ಕಳನ್ನು ತೆಗೆದುಕೊಂಡದ್ದರಿಂದ ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಯಿತು. ಪ್ರಭುಗಳೂ ಮತ್ತು ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾದರು” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಇಸ್ರಯೇಲರಲ್ಲಿ ಸಾಧಾರಣಜನರು, ಯಾಜಕರು, ಲೇವಿಯರು ತಮಗೆ ಹಾಗು ತಮ್ಮ ಗಂಡುಮಕ್ಕಳಿಗೆ ಅವರಿಂದ ಹೆಣ್ಣುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಗುತ್ತಿದೆ; ನಾಯಕರೇ, ಮುಖ್ಯಸ್ಥರೇ, ಈ ದ್ರೋಹಕ್ಕೆ ಮುಂದಾಳುಗಳಾಗುತ್ತಿದ್ದಾರೆ,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಇಸ್ರೇಲ್ ಜನರು ತಮ್ಮ ಸುತ್ತಲು ವಾಸಿಸುವ ಜನರೊಂದಿಗೆ ಮದುವೆಯಾಗಿದ್ದಾರೆ. ಇಸ್ರೇಲ್ ಜನರು ದೇವರ ವಿಶೇಷ ಜನರಾಗಿದ್ದಾರೆ. ಆದರೆ ಈಗ ಅನ್ಯರೊಂದಿಗೆ ಬೆರೆತು ಹೋಗಿದ್ದಾರೆ. ಇಸ್ರೇಲರ ಪ್ರಧಾನರು, ಮುಖ್ಯಾಧಿಕಾರಿಗಳು ಈ ರೀತಿಯಾಗಿ ಮಾಡಿ ಜನರಿಗೆ ಕೆಟ್ಟ ಮಾದರಿಯಾಗಿ ಜೀವಿಸುತ್ತಿದ್ದಾರೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಇಸ್ರಾಯೇಲರು ತಮಗೂ, ತಮ್ಮ ಪುತ್ರರಿಗೂ ಅವರ ಪುತ್ರಿಯರನ್ನು ತೆಗೆದುಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ. ನಿಶ್ಚಯವಾಗಿ ಪ್ರಧಾನರು ಮತ್ತು ಅಧಿಕಾರಸ್ಥರು ಈ ಅಪನಂಬಿಗಸ್ತಿಕೆಗೆ ಮುಂದಾಳುಗಳಾದರು,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 9:2
24 ತಿಳಿವುಗಳ ಹೋಲಿಕೆ  

ಯಾಕಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವದಕ್ಕೆ ಆದುಕೊಂಡನು.


ಅದಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಕನ್ನಿಕೆಗಳನ್ನು ತೆಗೆದುಕೊಳ್ಳುವದಕ್ಕೆ ಆಸ್ಪದವುಂಟಾಗುವದು; ತರುವಾಯ ಆ ಸೊಸೆಯರು ತೌರಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ.


ಆಗ ಏಲಾಮ್ ಸಂತಾನದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ - ಇಸ್ರಾಯೇಲ್ಯರಾದ ನಾವು ಅನ್ಯಜನರಾದ ಈ ದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡು ನಮ್ಮ ದೇವರಿಗೆ ವಿರುದ್ಧವಾಗಿ ದ್ರೋಹಮಾಡಿದರೂ [ನಮ್ಮನ್ನು ನಾವು ತಿದ್ದಿಕೊಳ್ಳುವ] ನಿರೀಕ್ಷೆಯು ಇನ್ನೂ ಉಂಟು.


ಯಾಕಂದರೆ ಕ್ರಿಸ್ತನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ದೇವಜನಕ್ಕೆ ಸಂಬಂಧಪಟ್ಟವನಾದನು; ಮತ್ತು ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯು ನಮ್ಮ ಸಹೋದರನಾದ ತನ್ನ ಗಂಡನಲ್ಲಿ ದೇವಜನಕ್ಕೆ ಸಂಬಂಧಪಟ್ಟವಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ದೇವಜನರಲ್ಲಿ ಸೇರಿದವರೇ ಆಗಿದ್ದಾರೆ.


ಪರಮಾತ್ಮಾಂಶನಾದ ಯಾವನೂ ಹೀಗೆ ಮಾಡಲಿಲ್ಲ; ಆ ಪ್ರಸಿದ್ಧನೊಬ್ಬನು ಏಕೆ ಇಂಥ ಕೃತ್ಯಮಾಡಿದನು? ದೇವರ ವರವಾದ ಸಂತಾನವನ್ನು ಹಾರೈಸಿಯೇ. ಹೀಗಿರಲು ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ಯಾವನೂ ತನ್ನ ಯೌವನದ ಪತ್ನಿಗೆ ದ್ರೋಹಮಾಡದಿರಲಿ.


ಯೆಹೂದವು ದ್ರೋಹಮಾಡಿದೆ, ಇಸ್ರಾಯೇಲಿನಲ್ಲಿಯೂ ಯೆರೂಸಲೇವಿುನಲ್ಲಿಯೂ ಒಂದು ದುರಾಚಾರವು ನಡೆಯುತ್ತಿದೆ; ಯೆಹೂದವು ಅನ್ಯದೇವತೆಯ ಮಗಳನ್ನು ಮದುವೆಯಾಗಿ ಯೆಹೋವನ ಪ್ರಿಯ ದೇವಾಲಯವನ್ನು ಹೊಲೆಗೆಡಿಸಿದೆ.


ಯಾಕಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ.


ನೀವು ನನಗೆ ಪರಿಶುದ್ಧ ಜನರಾಗಿರಬೇಕು; ಆದದರಿಂದ ಕಾಡುಮೃಗಕೊಂದದ್ದನ್ನು ತಿನ್ನಬಾರದು; ಅದನ್ನು ನಾಯಿಗಳಿಗೆ ಬಿಡಬೇಕು.


ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನವೂ ಆಗಿರುವಿರಿ. ಇವೇ ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದ ಮಾತುಗಳು ಎಂದನು.


ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು?


ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.


ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ ಅದೂ ಕೂಡಾ ನಾಶವಾಗುವದು; ಏಲಾ ಅಲ್ಲೋನ್ ಮರಗಳನ್ನೂ ಕಡಿದ ಮೇಲೆ ಅವುಗಳ ಬುಡವು ನಿಲ್ಲುವ ಹಾಗೆ ದೇವಕುಲವು ಮೋಟುಬುಡವಾಗಿ ನಿಲ್ಲುವದು ಅಂದನು.


ಮಹಾಯಾಜಕ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾದದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆನು.


ಆಗ ನಾನು ಯೆಹೂದ ಶ್ರೀಮಂತರಿಗೆ - ನೀವು ಮಾಡುವದು ಎಂಥ ದುಷ್ಕೃತ್ಯ! ನೀವು ಸಬ್ಬತ್‍ದಿನವನ್ನು ಅಶುದ್ಧಮಾಡುತ್ತೀರಿ.


ನೀವು ದೇವರಿಗೆ ವಿಮುಖರಾಗಿ ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳೊಡನೆ ಕೊಟ್ಟು ತಂದು ವಿುಶ್ರವಾದರೆ


ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ತ್ಯವನ್ನಾಗಿ ಬಿಡುವಿರಿ ಎಂದು ಹೇಳಿದಿಯಲ್ಲಾ.


ಹೀಗಿರುವಲ್ಲಿ ನಾವು ತಿರಿಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿ ಬಿಡುವಿಯಲ್ಲವೋ?


ಇಲ್ಲವಾದರೆ ಅವನ ಸಂತತಿಯು ಸ್ವಜನರೊಳಗೆ ಅಪವಾದಕ್ಕೆ ಗುರಿಯಾದೀತು. ಅವನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು.


ಅವರು ಗಿಲ್ಯಾದಿನಲ್ಲಿದ್ದ ರೂಬೇನ್ಯರು, ಗಾದ್ಯರು ಮನಸ್ಸೆ ಕುಲದ ಅರ್ಧಜನರು ಇವರ ಬಳಿಗೆ ಬಂದು -


ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು, ಹಿತ್ತಿಯರು ಎಂಬೀ ಜನಾಂಗಗಳ ಸ್ತ್ರೀಯರನ್ನೂ ಮೋಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು