Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 9:14 - ಕನ್ನಡ ಸತ್ಯವೇದವು J.V. (BSI)

14 ಹೀಗಿರುವಲ್ಲಿ ನಾವು ತಿರಿಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿ ಬಿಡುವಿಯಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಹೀಗಿರುವಲ್ಲಿ ನಾವು ತಿರುಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವುದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿಬಿಡುವಿಯಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಹೀಗಿರುವಲ್ಲಿ, ನಾವು ಪುನಃ ನಿಮ್ಮ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ವಿವಾಹ ಸಂಬಂಧ ಬೆಳೆಸುವುದು ಯೋಗ್ಯವೇ? ಹಾಗೆ ಮಾಡಿದರೆ, ನೀವು ನಮ್ಮ ಮೇಲೆ ರೌದ್ರಾವೇಶವುಳ್ಳವರಾಗಿ, ಯಾರೂ ತಪ್ಪಿಸಿಕೊಳ್ಳದಂತೆ ನಮ್ಮನ್ನು ಮುಗಿಸಿಬಿಡುವಿರಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಿನ್ನ ಆಜ್ಞೆಗಳಿಗೆ ಅವಿಧೇಯರಾಗಬಾರದೆಂದು ಈಗ ನಮಗೆ ತಿಳಿಯುತ್ತದೆ. ಅನ್ಯಜನರನ್ನು ಮದುವೆ ಮಾಡಿಕೊಳ್ಳಬಾರದು. ಅವರು ಘೋರ ಪಾಪಿಗಳು. ನಾವು ಹೀಗೆಯೇ ಅವರೊಂದಿಗೆ ಮದುವೆಯಾದರೆ ನೀನು ನಮ್ಮನ್ನು ನಾಶಮಾಡುವೆ ಎಂದು ನಾವು ತಿಳಿದಿದ್ದೇವೆ. ಹೀಗಿರುವಲ್ಲಿ ಇಸ್ರೇಲ್ ಜನಾಂಗದಲ್ಲಿ ಯಾರೂ ಉಳಿಯಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನಾವು ನಿಮ್ಮ ಆಜ್ಞೆಗಳನ್ನು ಪುನಃ ಮೀರಿ ಅಸಹ್ಯ ಅಭ್ಯಾಸಕರಾದ ಈ ಜನರ ಸಂಗಡ ವಿವಾಹ ಸಂಬಂಧ ಮಾಡಬಹುದೇ? ಹಾಗೆ ಮಾಡಿದರೆ, ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದಂತೆ ದಂಡಿಸಲು, ನೀವು ನಮ್ಮ ಮೇಲೆ ಕೋಪಗೊಳ್ಳುವುದು ಯೋಗ್ಯವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 9:14
20 ತಿಳಿವುಗಳ ಹೋಲಿಕೆ  

ದೃಷ್ಟಾಂತ - ಹೋರೇಬಿನಲ್ಲಿ ನೀವು ಯೆಹೋವನಿಗೆ ಕೋಪವನ್ನು ಹುಟ್ಟಿಸಿದಿರಿ. ಆಗ ಆತನು ಬಲು ಸಿಟ್ಟುಗೊಂಡು ನಿಮ್ಮನ್ನು ಧ್ವಂಸಮಾಡಬೇಕೆಂದಿದ್ದನು.


ತಮಗೂ ತಮ್ಮ ಗಂಡುಮಕ್ಕಳಿಗೂ ಅವರಿಂದ ಹೆಣ್ಣುಗಳನ್ನು ತೆಗೆದುಕೊಂಡದರಿಂದ ದೇವಕುಲವು ಅನ್ಯದೇಶಗಳವರೊಡನೆ ವಿುಶ್ರವಾಯಿತು. ಪ್ರಭುಗಳೂ ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾದರು ಎಂದು ತಿಳಿಸಿದರು.


ಬಿಡು, ನಾನು ಅವರನ್ನು ನಾಶಮಾಡಿ ಅವರ ಹೆಸರನ್ನು ಭೂವಿುಯ ಮೇಲೆ ಉಳಿಯದಂತೆ ಮಾಡುವೆನು. ತರುವಾಯ ಅವರಿಗಿಂತಲೂ ಮಹಾಬಲಿಷ್ಠ ಜನಾಂಗವು ನಿನ್ನಿಂದುಂಟಾಗುವಂತೆ ಮಾಡುವೆನು ಎಂದು ಹೇಳಿದನು.


ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ? ಎಂದಿಗೂ ಇರಬಾರದು.


ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು - ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪಮಾಡಬೇಡ; ನಿನಗೆ ಹೆಚ್ಚಿನ ಕೇಡು ಬಂದೀತು ಅಂದನು.


ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?


ಆದಕಾರಣ ನೀನು ನನ್ನನ್ನು ತಡೆಯಬೇಡ; ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡುವೆನು. ತರುವಾಯ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗವುಂಟಾಗುವಂತೆ ಮಾಡುವೆನು ಎಂದು ಹೇಳಿದನು.


ಆದರೂ ನಾನು ಜನಶೇಷವನ್ನು ಉಳಿಸುವೆನು; ಹೇಗಂದರೆ ನೀವು ಅನ್ಯದೇಶಗಳಿಗೆ ಚದರಿಹೋಗುವಾಗ ನಿಮ್ಮಲ್ಲಿ ಕೆಲವರು ಆ ಜನಾಂಗಗಳ ಮಧ್ಯೆ ಕತ್ತಿಗೆ ತಪ್ಪಿಸಿಕೊಳ್ಳುವರು.


ನನ್ನ ಸೇವಕ ಯಾಕೋಬೇ, ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿದೆನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು; ನಿನ್ನನ್ನೋ ನಿರ್ಮೂಲಮಾಡೆನು; ವಿುತಿಮೀರಿ ಶಿಕ್ಷಿಸೆನು, ಆದರೆ ಶಿಕ್ಷಿಸದೆ ಬಿಡುವದಿಲ್ಲ. ಇದು ಯೆಹೋವನ ನುಡಿ.


ಸೇನಾಧೀಶ್ವರನಾದ ಯೆಹೋವನು ನಮಗೆ ಕೊಂಚ ಜನವನ್ನೂ ಉಳಿಸದೆ ಹೋಗಿದ್ದರೆ ಸೊದೋವಿುನ ಗತಿಯೇ ನಮಗಾಗುತ್ತಿತ್ತು. ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು.


ಆದರೂ ನಮ್ಮ ದೇವರಾದ ಯೆಹೋವನು ಒಂದು ಕ್ಷಣ ನಮಗೆ ಪ್ರಸನ್ನನಾಗಿ ನಮ್ಮಲ್ಲಿ ಸ್ವಲ್ಪ ಜನರನ್ನು ರಕ್ಷಣೆಗಾಗಿ ಉಳಿಸಿ ತನ್ನ ಪರಿಶುದ್ಧಸ್ಥಳದಲ್ಲಿ ಮೊಳೆಯಂತೆ ನಮ್ಮನ್ನು ನೆಲೆಗೊಳಿಸಿ ನಮ್ಮ ಕಣ್ಣುಗಳನ್ನು ಕಳೆಗೊಳಿಸಿ ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪಮಟ್ಟಿಗೆ ಉಜ್ಜೀವವನ್ನು ಅನುಗ್ರಹಿಸಿದ್ದಾನೆ.


ನೀವು ಅವರೊಡನೆಯಾಗಲಿ ಅವರ ದೇವತೆಗಳೊಡನೆಯಾಗಲಿ ಯಾವ ವಿಧವಾದ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು.


ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ - ನೀವು ಅನ್ಯಜನರ ಹೆಣ್ಣುಗಳನ್ನು ಮದುವೆಮಾಡಿಕೊಂಡು ಇಸ್ರಾಯೇಲ್ಯರ ಅಪರಾಧವನ್ನು ಹೆಚ್ಚಿಸಿದ್ದೀರಿ.


ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದ ನಮ್ಮ ದೇವರು ಈ ಎಲ್ಲಾ ಕೇಡನ್ನು ನಮ್ಮ ಮೇಲೆಯೂ ನಮ್ಮ ಪಟ್ಟಣದ ಮೇಲೆಯೂ ಬರಮಾಡಿದನಲ್ಲವೇ. ಹೀಗಿರಲಾಗಿ ನೀವೂ ಸಬ್ಬತ್ ದಿನವನ್ನು ಅಶುದ್ಧಮಾಡಿ ಇಸ್ರಾಯೇಲ್ಯರ ಮೇಲಿದ್ದ ದೇವಕೋಪವನ್ನು ಹೆಚ್ಚಿಸುತ್ತೀರೇನು ಎಂದು ಹೇಳಿ ಅವರನ್ನು ಗದರಿಸಿದೆನು.


ನಿಮ್ಮ ಪಿತೃಗಳು, ಯೆಹೂದದ ಅರಸರು, ಅವರ ಹೆಂಡಿರು, ನೀವು, ನಿಮ್ಮ ಹೆಂಡಿರು, ಇವರೆಲ್ಲರೂ ಯೆಹೂದದೇಶದಲ್ಲಿಯೂ ಯೆರೂಸಲೇವಿುನ ಬೀದಿಗಳಲ್ಲಿಯೂ ನಡಿಸಿದ ದುರಾಚಾರಗಳನ್ನು ಮರೆತುಬಿಟ್ಟಿರೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು