Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 3:12 - ಕನ್ನಡ ಸತ್ಯವೇದವು J.V. (BSI)

12 ಆದರೆ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಗೋತ್ರ ಪ್ರಧಾನರಲ್ಲಿಯೂ ಅನೇಕರು ಅಂದರೆ ಮುಂಚಿನ ದೇವಾಲಯವನ್ನು ನೋಡಿದ್ದ ಮುದುಕರು ತಮ್ಮ ಕಣ್ಣು ಮುಂದೆ ದೇವಾಲಯದ ಅಸ್ತಿವಾರವು ಹಾಕಲ್ಪಡುವದನ್ನು ನೋಡುವಾಗ ಬಹಳವಾಗಿ ಅತ್ತರು; ಬೇರೆ ಹಲವರು ಹರ್ಷಧ್ವನಿಯಿಂದ ಆರ್ಭಟಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆದರೆ ಯಾಜಕರಲ್ಲಿಯೂ, ಲೇವಿಯರಲ್ಲಿಯೂ, ಗೋತ್ರಪ್ರಧಾನರಲ್ಲಿಯೂ ಅನೇಕರು ಅಂದರೆ ಮೊದಲಿನ ದೇವಾಲಯವನ್ನು ನೋಡಿದ್ದ ಹಿರಿಯರು ತಮ್ಮ ಕಣ್ಣ ಮುಂದೆ ದೇವಾಲಯದ ಅಸ್ತಿವಾರವು ಹಾಕಲ್ಪಟ್ಟಿದ್ದನ್ನು ನೋಡಿದಾಗ ಬಹಳವಾಗಿ ಅತ್ತರು. ಬೇರೆ ಹಲವರು ಹರ್ಷಧ್ವನಿಯಿಂದ ಜಯಘೋಷ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಯಾಜಕರಲ್ಲೂ ಲೇವಿಯರಲ್ಲೂ ಗೋತ್ರಪ್ರಧಾನರಲ್ಲೂ ಅನೇಕರು ಅಂದರೆ, ಹಿಂದಿನ ದೇವಾಲಯವನ್ನು ನೋಡಿದ್ದ ಮುದುಕರು, ತಮ್ಮ ಕಣ್ಣು ಮುಂದೆ ದೇವಾಲಯದ ಅಸ್ತಿವಾರ ಹಾಕಲಾದುದನ್ನು ನೋಡಿದಾಗ, ಬಹಳವಾಗಿ ಅತ್ತರು; ಬೇರೆ ಹಲವರು ಹರ್ಷಧ್ವನಿಯಿಂದ ಆರ್ಭಟಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದರೆ ಮೊದಲಿನ ದೇವಾಲಯವನ್ನೂ ಅದರ ವೈಭವವನ್ನೂ ನೋಡಿದ್ದ ಕುಲಪ್ರಧಾನರು, ಯಾಜಕರು ಮತ್ತು ಲೇವಿಯರು ಗಟ್ಟಿಯಾಗಿ ಅತ್ತರು. ಇತರರು ಗಟ್ಟಿಯಾಗಿ ಹರ್ಷಧ್ವನಿ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಮೊದಲಿನ ಮಂದಿರವನ್ನು ಕಂಡಿದ್ದ ವೃದ್ಧರಾದ ಯಾಜಕರೂ ಲೇವಿಯ ಅನೇಕ ಕುಟುಂಬಗಳ ಪ್ರಮುಖರೂ ಅನೇಕರು ಈ ಮಂದಿರದ ಅಸ್ತಿವಾರವನ್ನು ತಮ್ಮ ಮುಂದೆ ಹಾಕುತ್ತಿರುವಾಗ ದೊಡ್ಡ ಶಬ್ದದಿಂದ ಅತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 3:12
12 ತಿಳಿವುಗಳ ಹೋಲಿಕೆ  

ಈ ಆಲಯದ ಪೂರ್ವವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಾಗಿ ಕಾಣಿಸುತ್ತದಲ್ಲವೆ.


ಈ [ದೀಪಗಳಿಂದ ಸೂಚಿತವಾದ] ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವದನ್ನು ಸಂತೋಷದಿಂದ ನೋಡುತ್ತವೆ; ಹೀಗಿರುವಲ್ಲಿ ಅಲ್ಪಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಾರು?


ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.


ಕ್ರಿವಿುಪ್ರಾಯವಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾವಿುಯು ನಿನಗೆ ವಿಮೋಚಕನು ಎಂದು ಯೆಹೋವನು ಅನ್ನುತ್ತಾನೆ.


ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.


ನಿನ್ನ ಮೊದಲನೆಯ ಸ್ಥಿತಿಯು ಅಲ್ಪವಾಗಿದ್ದರೂ ನಿನ್ನ ಕಡೆಯ ಸ್ಥಿತಿಯು ಬಹಳ ವೃದ್ಧಿಹೊಂದುವದು.


ಜನರು ಮಹಾಧ್ವನಿಯಿಂದ ಆರ್ಭಟಿಸುತ್ತಿದ್ದದರಿಂದ ಹರ್ಷಧ್ವನಿ ಯಾವದೋ ಅಳುವವರ ಧ್ವನಿ ಯಾವದೋ ಗೊತ್ತಾಗಲಿಲ್ಲ. ಗದ್ದಲವು ಬಹುದೂರದವರೆಗೂ ಕೇಳಿಸಿತು.


ಯೆಹೋವನು ಇಂತೆನ್ನುತ್ತಾನೆ - ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಾಯೇಲ್ಯರೂ ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ ದಾರಿಯುದ್ದಕ್ಕೂ ಅಳುತ್ತಾ ಬಂದು ತಮ್ಮ ದೇವರಾದ ಯೆಹೋವನನ್ನು ಮರೆಹೊಗುವರು.


ಯಾಹುವಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವದು ಒಳ್ಳೇದೂ ಸಂತೋಷಕರವೂ ಆಗಿದೆ; ಆತನನ್ನು ಕೀರ್ತಿಸುವದು ಯುಕ್ತವಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು