Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 9:16 - ಕನ್ನಡ ಸತ್ಯವೇದವು J.V. (BSI)

16 ಮರಣಶಾಸನವು ಇರುವಲ್ಲಿ ಅದನ್ನು ಬರೆಯಿಸಿದವನ ಮರಣವು ಪ್ರಸಿದ್ಧವಾಗಿರಬೇಕಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಒಂದು ಮರಣ ಶಾಸನವು ಪರಿಣಾಮಕಾರಿಯಾಗಬೇಕಾದರೆ, ಅದನ್ನು ಬರೆದಾತನು ಸತ್ತಿದ್ದಾನೆಂಬುದು ಖಚಿತವಾಗಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಒಬ್ಬನು ಸಾಯುವ ಮೊದಲೇ ಉಯಿಲನ್ನು ಬರೆದಿಡುತ್ತಾನೆ. ಆದರೆ ಸತ್ತಿರುವಾತನೇ ಆ ಉಯಿಲನ್ನು ಬರೆದವನೆಂದು ಜನರು ಸಾಧಿಸಿ ತೋರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಮರಣ ಶಾಸನವು ಎಲ್ಲಿದೆಯೋ ಅಲ್ಲಿ ಅದನ್ನು ಮಾಡಿಕೊಂಡಾತನ ಮರಣ ಅವಶ್ಯ ಎಂಬುದನ್ನು ರುಜುಪಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

16 ಎಕ್ಲೊ ಮರುಚ್ಯಾ ಪೈಲೆಚ್ ಅಪ್ಲಿ ಆಸ್ತಿ ಕೊನಾಕ್ ಜಾತಾ ಮನುನ್ ಲಿವ್ನ್ ಥವ್ತಾ, ಖರೆ ಮರಲ್ಲ್ಯಾ ಮಾನ್ಸಾನುಚ್ ತೆ ಲಿವಲ್ಲೆ ಮನುನ್ ಹುರಲ್ಯಾ ಲೊಕಾನಿ ಖರೆ ಕರುನ್ ದಾಕ್ವುಕ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 9:16
8 ತಿಳಿವುಗಳ ಹೋಲಿಕೆ  

ಯಾಕಂದರೆ ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂ ಅಪರಾಧಿಯಾಗುತ್ತಾನೆ.


ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.


ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.


ಈ ವಿಷಯ ಹೇಗಂದರೆ - ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.


ಮತ್ತು ಈ ಕಾರಣದಿಂದ ಆತನು ಒಂದು ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ. ಮೊದಲನೆಯ ಒಡಂಬಡಿಕೆಯ ಕಾಲದಲ್ಲಿ ನಡೆದ ಅಕ್ರಮಗಳ ಪರಿಹಾರಕ್ಕಾಗಿ ಆತನು ಮರಣವನ್ನು ಅನುಭವಿಸಿದ್ದರಿಂದ ದೇವರಿಂದ ಕರೆಯಿಸಿಕೊಂಡವರು ವಾಗ್ದಾನವಾಗಿದ್ದ ನಿತ್ಯಬಾಧ್ಯತೆಯನ್ನು ಹೊಂದುವದಕ್ಕೆ ಆತನ ಮೂಲಕ ಮಾರ್ಗವಾಯಿತು.


ಮರಣಶಾಸನವು ಮರಣವಾದ ಮೇಲೆ ನಡೆಯುವದೇ ಹೊರತು ಬರೆಯಿಸಿದವನು ಜೀವದಿಂದಿರುವಾಗ ಎಂದಿಗೂ ಸಲ್ಲುವದಿಲ್ಲ.


ಈತನು ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ ತನ್ನ ಶಕ್ತಿಯ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ಪಾಪವಿಶುದ್ಧಿಮಾಡಿದ ಮೇಲೆ ಉನ್ನತಲೋಕದೊಳಗೆ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು.


ಶಾಶ್ವತವಾದ ಒಡಂಬಡಿಕೆಯನ್ನು ನಿಶ್ಚಯಪಡಿಸುವದಕ್ಕಾಗಿ ತನ್ನ ರಕ್ತವನ್ನು ಸುರಿಸಿಕೊಂಡು ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ ಶಾಂತಿದಾಯಕನಾದ ದೇವರು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು