Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 6:16 - ಕನ್ನಡ ಸತ್ಯವೇದವು J.V. (BSI)

16 ಮನುಷ್ಯರು ತಮಗಿಂತ ಹೆಚ್ಚಿನವನ ಆಣೆಯಿಡುತ್ತಾರಷ್ಟೆ; ಮಾತಿಗೆ ಆಣೆಯಿಟ್ಟು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಮನುಷ್ಯರು ತಮಗಿಂತಲೂ ಹೆಚ್ಚಿನವರ ಮೇಲೆ ಆಣೆಯಿಡುವುದು ವಾಡಿಕೆ. ಹೀಗೆ ಆಣೆಯಿಟ್ಟು ಪ್ರಮಾಣಮಾಡಿದರೆ ಎಲ್ಲ ವಿವಾದಗಳು ಕೊನೆಗೊಳ್ಳುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಮನುಷ್ಯರು ನಿಜವಾಗಿಯೂ ದೊಡ್ಡವರ ಮೇಲೆ ಆಣೆ ಇಡುತ್ತಾರಷ್ಟೆ. ಆಣೆಯನ್ನು ದೃಢಪಡಿಸುವುದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

16 ಮಾನ್ಸಾ ಅಪ್ಲ್ಯಾಚ್ಯಾನ್‍ಬಿ ಮೊಟ್ಯಾಚೆರ್ ಬಾಸ್ ಥವ್ತಾತ್, ಬೊಲ್ನ್ಯಾಕ್ ಘಟ್ ಕರ್ಲ್ಯಾ ಮಾನಾ ತ್ಯಾತುರ್ ವಾದ್ ಕಾಯ್ ರ್‍ಹಾಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 6:16
12 ತಿಳಿವುಗಳ ಹೋಲಿಕೆ  

ಆ ಮನುಷ್ಯನು ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸ ಮಾಡಲಿಲ್ಲವೆಂಬದನ್ನು ದೃಢಪಡಿಸುವದಕ್ಕೆ ಯೆಹೋವನ ಮೇಲೆ ಪ್ರಮಾಣಮಾಡಬೇಕು. ಪಶುವಿನ ಒಡೆಯನು ಆ ಪ್ರಮಾಣ ವಾಕ್ಯವನ್ನು ನಂಬಬೇಕು; ಪ್ರಮಾಣ ಮಾಡಿದವನು ಈಡುಕೊಡಬೇಕಾದ ಅಗತ್ಯವಿಲ್ಲ.


ದೇವರು ಅಬ್ರಹಾಮನಿಗೆ ವಾಗ್ದಾನಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದ್ದದರಿಂದ ತನ್ನಾಣೆಯಿಟ್ಟು -


ಅಬ್ರಹಾಮ ನಾಹೋರರ ದೇವರು ಅಂದರೆ ಅವರ ತಂದೆಯ ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದನು. ಅದೇ ಮೇರೆಗೆ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣ ಮಾಡಿದನು.


ನೀನು ಈ ಸ್ಥಳದಲ್ಲಿ ನನ್ನೊಂದಿಗೆ [ಒಡಂಬಡಿಕೆಮಾಡಿಕೊಂಡು] ನೀನು ನನಗಾಗಲಿ ನನ್ನ ಪುತ್ರಪೌತ್ರರಿಗಾಗಲಿ ಏನೂ ಅನ್ಯಾಯ ಮಾಡದೆ ನಾನು ನಿನಗೆ ಹಿತವನ್ನು ಮಾಡಿದಂತೆಯೇ ನನಗೂ ನೀನು ಇಳುಕೊಂಡಿರುವ ಈ ದೇಶಕ್ಕೂ ಹಿತವನ್ನು ಮಾಡುವದಾಗಿ ದೇವರ ಮೇಲೆ ಪ್ರಮಾಣಮಾಡಬೇಕೆಂದು ಹೇಳಿದನು.


ಆಸ್ತಿಯನ್ನು ನೀನೇ ತಕ್ಕೋ ಎಂದು ಹೇಳಲು ಅಬ್ರಾಮನು ಅವನಿಗೆ - ಒಂದು ದಾರವನ್ನಾಗಲಿ ಕೆರದ ಬಾರನ್ನಾಗಲಿ ನಿನ್ನದರಲ್ಲಿ ಯಾವದನ್ನೂ ತೆಗೆದುಕೊಳ್ಳುವದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರದೇವರಾಗಿರುವ ಯೆಹೋವನ ಕಡೆಗೆ ಕೈಯೆತ್ತಿ ಪ್ರಮಾಣ ಮಾಡುತ್ತೇನೆ. ಅಬ್ರಾಮನು ನನ್ನ ಸೊತ್ತಿನಿಂದಲೇ ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ.


(ಗಿಬ್ಯೋನ್ಯರು ಇಸ್ರಾಯೇಲ್‍ಕುಲಗಳಿಗೆ ಸೇರಿದವರಲ್ಲ; ಸಂಹೃತರಾಗದೆ ಉಳಿದ ಅಮೋರಿಯರಷ್ಟೆ. ಇಸ್ರಾಯೇಲ್ಯರು ತಾವು ಇವರನ್ನು ಕೊಲ್ಲುವದಿಲ್ಲವೆಂದು ಪ್ರಮಾಣ ಮಾಡಿದ್ದರು. ಆದರೂ ಸೌಲನು ಇಸ್ರಾಯೇಲ್ ಮತ್ತು ಯೆಹೂದಕುಲಗಳ ಮೇಲೆ ತನಗಿದ್ದ ಅಭಿಮಾನದ ದೆಸೆಯಿಂದ ಇವರನ್ನೂ ನಿರ್ನಾಮಗೊಳಿಸಬೇಕೆಂದಿದ್ದನು.)


ಸಹೋದರರೇ, ಲೋಕದ ವ್ಯವಹಾರವನ್ನು ಹಿಡಿದು ಮಾತಾಡುತ್ತೇನೆ. ಸ್ಥಿರಪಡಿಸಿದ ಒಂದು ಒಡಂಬಡಿಕೆಯು ಕೇವಲ ಮನುಷ್ಯನದಾಗಿದ್ದರೂ ಅದನ್ನು ಯಾರೂ ರದ್ದು ಮಾಡುವದಿಲ್ಲ, ಅದಕ್ಕೆ ಹೆಚ್ಚು ಮಾತುಗಳನ್ನು ಕೂಡಿಸುವದಿಲ್ಲ.


ಅದಕ್ಕೆ ಅಬ್ರಹಾಮನು - ಹಾಗೆಯೇ ಪ್ರಮಾಣ ಮಾಡುತ್ತೇನೆ ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು