ಇಬ್ರಿಯರಿಗೆ 3:6 - ಕನ್ನಡ ಸತ್ಯವೇದವು J.V. (BSI)6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ; ನಾವು ನಮ್ಮ ಧೈರ್ಯವನ್ನೂ ನಮ್ಮ ನಿರೀಕ್ಷೆಯಿಂದುಂಟಾಗುವ ಉತ್ಸಾಹವನ್ನೂ ಕಡೇ ತನಕ ದೃಢವಾಗಿ ಹಿಡಿದುಕೊಂಡವರಾದರೆ ನಾವೇ ದೇವರ ಮನೆಯವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆದರೆ ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಕ್ರಿಸ್ತಯೇಸುವಾದರೋ, ದೇವರ ಮನೆಯಲ್ಲಿ ಅಧಿಕಾರ ಹೊಂದಿದ ಪ್ರಾಮಾಣಿಕ ಪುತ್ರನಾಗಿದ್ದಾರೆ. ನಾವು ನಿರೀಕ್ಷಿಸುತ್ತಿರುವ ಭಾಗ್ಯದ ಬಗ್ಗೆ ನಮಗಿರುವ ಶ್ರದ್ಧೆಯನ್ನೂ ಶೌರ್ಯವನ್ನೂ ಕಳೆದುಕೊಳ್ಳದೆ ದೃಢವಾಗಿದ್ದರೆ, ನಾವೇ ಅವರ ಮನೆಯಾಗಿರುತ್ತೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಕ್ರಿಸ್ತ ಯೇಸುವಾದರೋ ಮಗನಾಗಿ ದೇವರ ಮನೆಯ ಮೇಲೆ ನಂಬಿಗಸ್ತರಾಗಿದ್ದಾರೆ. ಆದುದರಿಂದ ನಾವು ನಮ್ಮ ಧೈರ್ಯವನ್ನೂ ನಾವು ಹೊಗಳಿಕೊಳ್ಳುವ ನಿರೀಕ್ಷೆಯನ್ನೂ ಕಡೆಯತನಕ ದೃಢವಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ಖರೆ ಕ್ರಿಸ್ತ್ ಲೆಕಾಚ್ಯಾ ಸಾರ್ಕೊ ದೆವಾಚ್ಯಾ ಘರ್ಚೊ ವಿಶ್ವಾಸಾಚೊ ಅದಿಕಾರಿ ಅನಿ ಅಮ್ಕಾ ಗೌರವ್ ಹಾನ್ತಲೊ ವಿಶ್ವಾಸ್ ಅನಿ ಬರೊಸೊ ಅಮಿ ಘಟ್ ಸಂಬಾಳುನ್ ಘೆವ್ನ್ ರಾಲಾಂವ್ ತರ್ ಅಮಿಚ್ ತೆಚೆ ಘರ್ ಹೊತಾಂವ್. ಅಧ್ಯಾಯವನ್ನು ನೋಡಿ |