ಇಬ್ರಿಯರಿಗೆ 10:27 - ಕನ್ನಡ ಸತ್ಯವೇದವು J.V. (BSI)27 ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪೂ ದೇವರ ವಿರೋಧಿಗಳನ್ನು ದಹಿಸುವ ತೀಕ್ಷ್ಣವಾದ ಅಗ್ನಿಯೂ ಇವೇ ನಮ್ಮ ಮುಂದೆ ಇರುವವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಬದಲಿಗೆ, ಅತ್ಯಂತ ಭಯಂಕರವಾದ ನ್ಯಾಯತೀರ್ಪಿನ ನಿರೀಕ್ಷೆ ಹಾಗೂ ದೇವರ ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಮಾತ್ರ ಇರುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಬದಲಿಗೆ, ಅತ್ಯಂತ ಭಯದಿಂದ ಎದುರುನೋಡಬೇಕಾದ ದಂಡನಾತೀರ್ಪು ಹಾಗೂ ದೇವರ ಶತ್ರುಗಳನ್ನು ದಹಿಸುವ ಉಗ್ರಕೋಪಾಗ್ನಿ - ಇವುಗಳು ಮಾತ್ರ ನಮಗೆ ಉಳಿದಿರುತ್ತವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ಆದರೆ ಖಂಡಿತವಾಗಿ ಎದುರು ನೋಡತಕ್ಕ ಭಯಂಕರವಾದ ನ್ಯಾಯತೀರ್ಪು ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಇರುವುವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್27 ಲೈ ಭಿಂಯಾನ್ ರಾಕಿತ್ ಹೊತ್ತ್ಯಾ ನ್ಯಾಯ್ ನಿರ್ನಯಾಚೊ ದಿಸ್ ದೆವಾಚ್ಯಾ ವಿರೊದ್ಯಾಕ್ನಿ ಜಾಳ್ವುತಲಿ ಮೊಟಿ ಆಗ್ ಹೆ ಸಗ್ಳೆ ಅಮ್ಚ್ಯಾ ಫಿಡೆ ಹಾಯ್. ಅಧ್ಯಾಯವನ್ನು ನೋಡಿ |
ಯೆಹೋವನು ಇಂತೆನ್ನುತ್ತಾನೆ - ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದುಬಿಡುವದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ; ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವದಷ್ಟೆ.