ಆಮೋಸ 9:8 - ಕನ್ನಡ ಸತ್ಯವೇದವು J.V. (BSI)8 ಆಹಾ, ಕರ್ತನಾದ ಯೆಹೋವನೆಂಬ ನಾನು ಪಾಪಮಯರಾಜ್ಯದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಅದನ್ನು ಭೂಮಂಡಲದೊಳಗಿಂದ ನಾಶಮಾಡುವೆನು; ಆದರೆ ಯಾಕೋಬಿನ ಮನೆತನವನ್ನು ಸಂಪೂರ್ಣವಾಗಿ ನಾಶಮಾಡೆನು. ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಇಗೋ, ಕರ್ತನಾದ ಯೆಹೋವನು ಪಾಪವುಳ್ಳ ರಾಜ್ಯದ ಮೇಲೆ ದೃಷ್ಟಿಯಿಟ್ಟಿದ್ದಾನೆ, ಮತ್ತು ಅದನ್ನು ಭೂಮಂಡಲದೊಳಗಿಂದ ನಾಶಮಾಡುವನು, ಆದರೆ ಯಾಕೋಬಿನ ಮನೆತನವನ್ನು ಸಂಪೂರ್ಣವಾಗಿ ನಾಶಮಾಡನು” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಒಡೆಯ ಸರ್ವೇಶ್ವರನಾದ ನಾನು ಈ ಪಾಪಮಯ ರಾಜ್ಯದ ಮೇಲೆ ಕಣ್ಣಿಟ್ಟಿದ್ದೇನೆ ಎಂಬುದನ್ನು ಗಮನಿಸಿರಿ. ಇದನ್ನು ಭೂಮಂಡಲದಿಂದ ನಾಶಮಾಡುವೆನು. ಆದರೆ ಯಕೋಬ ಮನೆತನವನ್ನು ಸಂಪೂರ್ಣವಾಗಿ ನಾಶಮಾಡೆನು.” ಇದು ಸರ್ವೇಶ್ವರಸ್ವಾಮಿಯ ನುಡಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಪಾಪದಿಂದ ತುಂಬಿದ ಇಸ್ರೇಲ್ ದೇಶವನ್ನು ಯೆಹೋವನು ನೋಡುತ್ತಿದ್ದಾನೆ. ಆತನು ಹೇಳಿದ್ದೇನೆಂದರೆ, “ನಾನು ಇಸ್ರೇಲರನ್ನು ಈ ಭೂಮುಖದಿಂದ ಅಳಿಸಿಬಿಡುವೆನು. ಆದರೆ ಯಾಕೋಬನ ಸಂತತಿಯವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 “ಸಾರ್ವಭೌಮ ಯೆಹೋವ ದೇವರ ಕಣ್ಣುಗಳು ಪಾಪವುಳ್ಳ ರಾಜ್ಯದ ಮೇಲೆ ಇವೆ. ನಾನು ಅದನ್ನು ಭೂಮಿಯ ಮೇಲಿನಿಂದ ನಾಶಮಾಡುವೆನು. ಆದರೆ ಯಾಕೋಬಿನ ಮನೆತನದವರನ್ನು ನಾನು ನಿಜವಾಗಿ ನಾಶಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |