Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 5:12 - ಕನ್ನಡ ಸತ್ಯವೇದವು J.V. (BSI)

12 ಶಿಷ್ಟಹಿಂಸಕರೇ, ಲಂಚಕೋರರೇ, ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುವವರೇ, ನಿಮ್ಮ ದ್ರೋಹಗಳು ಬಹಳ, ನಿಮ್ಮ ಪಾಪಗಳು ಪ್ರಬಲ, ನನಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನೀತಿವಂತರನ್ನು ಹಿಂಸಿಸುವವರೇ, ಲಂಚತೆಗೆದುಕೊಳ್ಳುವವರೇ, ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುವವರೇ. ನಿಮ್ಮ ದ್ರೋಹಗಳು ಬಹಳ, ನಿಮ್ಮ ಪಾಪಗಳು ನನಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಸಜ್ಜನರನ್ನು ಹಿಂಸಿಸಿ, ಲಂಚಕ್ಕೆ ಕೈ ಒಡ್ಡುವವರೇ, ನ್ಯಾಯಮಂಟಪದಲ್ಲಿ ಬಡವರಿಗೆ ನ್ಯಾಯದೊರಕಿಸದಿರುವವರೇ, ನಿಮ್ಮ ಪಾಪಗಳು ಅಪಾರ! ನಿಮ್ಮ ದ್ರೋಹಗಳು ಬಹಳ! ಇದು ನನಗೆ ಗೊತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯಾಕೆ ಹೀಗೆ? ಯಾಕೆಂದರೆ ನಿಮ್ಮ ಅನೇಕ ಪಾಪಕೃತ್ಯಗಳನ್ನು ನಾನು ಬಲ್ಲೆನು. ನೀವು ಭಯಂಕರ ಪಾಪಗಳನ್ನು ಮಾಡಿದ್ದೀರಿ. ನ್ಯಾಯವಂತರನ್ನು ಗಾಯಗೊಳಿಸಿದ್ದೀರಿ. ಅನ್ಯಾಯ ಮಾಡಲು ಹಣವನ್ನು ತೆಗೆದುಕೊಂಡಿದ್ದೀರಿ. ಬಡಜನರಿಗೆ ನ್ಯಾಯವನ್ನು ದೊರಕಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಏಕೆಂದರೆ ನಿಮ್ಮ ಅನೇಕ ಅಪರಾಧಗಳನ್ನೂ, ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು. ಅವರು ನಿರಪರಾಧಿಯನ್ನು ಬಾಧೆಪಡಿಸಿ, ಲಂಚವನ್ನು ತೆಗೆದುಕೊಂಡರು ಮತ್ತು ಬಾಗಿಲ ಬಳಿಯಲ್ಲಿರುವ ಬಡವರ ನ್ಯಾಯವನ್ನು ತೀರಿಸದೇ ಕಳುಹಿಸಿಬಿಟ್ಟಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 5:12
39 ತಿಳಿವುಗಳ ಹೋಲಿಕೆ  

ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ, ಯಥಾರ್ಥವಾದಿಯನ್ನು ದ್ವೇಷಿಸುತ್ತೀರಿ.


ನಿನ್ನ ಅಧಿಕಾರಿಗಳು ದ್ರೋಹಿಗಳೂ ಕಳ್ಳರ ಗೆಳೆಯರೂ ಆಗಿದ್ದಾರೆ; ಪ್ರತಿಯೊಬ್ಬನೂ ಕಾಣಿಕೆಗಳನ್ನು ಆಶಿಸಿ ಲಂಚಗಳನ್ನು ಹುಡುಕುವನು; ಅನಾಥರಿಗೆ ನ್ಯಾಯತೀರಿಸರು; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು.


ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರ, ಸೂಳೆಗಾರ, ಸುಳ್ಳುಸಾಕ್ಷಿ, ಕೂಲಿಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನೂ ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು, ಅಂತು ನನಗಂಜದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರಸಾಕ್ಷಿಯಾಗಿರುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.


ಇವರ ನ್ಯಾಯಾಸನವು ಬೇರ್ಷೆಬದಲ್ಲಿತ್ತು. ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪುಮಾಡುತ್ತಿದ್ದದರಿಂದ


ನೀತಿವಂತನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಕೊಂದುಹಾಕಿದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ.


ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಅಗೋ, ಆ ಕೂಲಿ ನಿಮ್ಮ ಮೇಲೆ ಕೂಗಿಕೊಳ್ಳುತ್ತದೆ; ಮತ್ತು ಕೊಯಿದವರ ಕೂಗು ಸಕಲಸೇನಾಧಿಪತಿಯಾಗಿರುವ ಕರ್ತನ ಕಿವಿಗಳಲ್ಲಿ ಬಿದ್ದಿದೆ.


ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿ ಸ್ವರೂಪನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ.


ಕೆಟ್ಟ ಕೆಲಸಕ್ಕೆ ಎರಡು ಕೈಗಳನ್ನು ಹಾಕಿ ಚೆನ್ನಾಗಿ ಮಾಡುತ್ತಾರೆ; ಪ್ರಭುವು [ಧನವನ್ನು] ಕೇಳುತ್ತಾನೆ, ನ್ಯಾಯಾಧಿಪತಿಯು ಲಂಚಕ್ಕೆ [ಕೈಯೊಡ್ಡುತ್ತಾನೆ], ದೊಡ್ಡ ಮನುಷ್ಯನು ತನ್ನ ದುರಾಶೆಯನ್ನು ತಿಳಿಸುತ್ತಾನೆ; ಹೀಗೆ ಕುಯುಕ್ತಿಯನ್ನು ಹೆಣೆಯುತ್ತಾರೆ.


ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ, ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ, ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ; ಆದರೂ ಯೆಹೋವನ ಮೇಲೆ ಭಾರಹಾಕಿ - ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನಲ್ಲಾ, ನಮಗೆ ಯಾವ ಕೇಡೂ ಸಂಭವಿಸದು ಅಂದುಕೊಳ್ಳುತ್ತಾರೆ.


ಆ ದಿನದಲ್ಲಿ ಶೂರರೊಳಗೆ ಧೀರನಾದವನೂ ಬೆತ್ತಲೆಯಾಗಿ ಓಡಿ ಹೋಗುವನು; ಇದು ಯೆಹೋವನ ನುಡಿ.


ಲೋಕದ ಸೆರೆಯವರನ್ನೆಲ್ಲಾ ತುಳಿದುಬಿಡುವದು,


ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡಿಸಿ ನೆರೆಯವರ ಹೆಂಡಿರಲ್ಲಿ ವ್ಯಭಿಚಾರಮಾಡಿ ನಾನು ಆಜ್ಞಾಪಿಸಿದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ ಎಂಬದೇ.


ಅವರ ಕೃತ್ಯಗಳಿಗೂ ಆಲೋಚನೆಗಳಿಗೂ [ತಕ್ಕದ್ದನ್ನು ಮಾಡುವೆನು]; ನಾನು ಇನ್ನು ಮುಂದೆ ಸಮಸ್ತಜನಾಂಗಗಳನ್ನೂ ಸಕಲಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು.


ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ, ಪುತ್ರಶೋಕ, ವೈಧವ್ಯ, ಇವೆರಡೂ ನಿನಗುಂಟಾಗುವವು; ನೀನು ಎಷ್ಟು ಮಾಟಮಾಡಿದರೂ ಎಷ್ಟೇ ಮಂತ್ರತಂತ್ರಗಳನ್ನು ನಡಿಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ.


[ಕೇಳಿರಿ], ಸನ್ಮಾರ್ಗದಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ಕೊಲೆಯ ಮಾತಿಗೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತಸನ್ನಿಧಾನದಲ್ಲಿ ವಾಸಿಸುವನು;


ಅಪಸಾಕ್ಷಿಯಿಂದ ತಪ್ಪು ಹೊರಿಸುವವರೂ ಚಾವಡಿಯಲ್ಲಿ ದೋಷವನ್ನು ಖಂಡಿಸುವವನಿಗೆ ಉರುಲೊಡ್ಡುವವರೂ ನ್ಯಾಯವಂತನ ನ್ಯಾಯವನ್ನು ಸುಮ್ಮಸುಮ್ಮನೆ ತಪ್ಪಿಸುವವರೂ ಆಗಿರುವ ಅಧರ್ಮನಿರತರೆಲ್ಲಾ ನಿರ್ಮೂಲರಾಗುವರು.


ಅನ್ಯಾಯವಾದ ತೀರ್ಪುಗಳನ್ನು ತೀರಿಸಿ ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ!


ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನೆಂದು ಹೇಳಲಿ!


ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ; ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯದಿರು.


ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು ಅನಾಥನ ಮೇಲೆ ಕೈಮಾಡಿದೆನೋ?


ಬೋವಜನು ಹೋಗಿ ಊರುಬಾಗಲಲ್ಲಿ ಕೂತನು. ತಾನು ಹೇಳಿದ್ದ ಸಮೀಪಬಂಧುವು ಆ ಮಾರ್ಗವಾಗಿ ಹೋಗುತ್ತಿರುವದನ್ನು ಕಂಡು ಅವನನ್ನು - ಎಲಾ, ಅಪ್ಪಾ, ಇತ್ತ ಬಂದು ಕೂತುಕೋ ಎಂದು ಕರೆಯಲು ಅವನು ಬಂದು ಕೂತುಕೊಂಡನು.


ಪ್ರತಿಯೊಂದು ಕುಲವು ಇರುವ ಪ್ರದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಎಲ್ಲಾ ಊರುಗಳಲ್ಲಿಯೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ನೀವು ನೇವಿುಸಬೇಕು. ಅವರು ಜನರಿಗೋಸ್ಕರ ನ್ಯಾಯವನ್ನು ವಿಚಾರಿಸಿ ಸರಿಯಾದ ತೀರ್ಪುಕೊಡಬೇಕು.


ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು. ಊರುಬಾಗಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ ಅಂಥವರು ಅಪಮಾನಹೊಂದುವದಿಲ್ಲ.


ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ.


ನಾನು ವ್ಯಥೆಗೊಳಿಸದ ಶಿಷ್ಟನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದರಿಂದಲೂ ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದರಿಂದಲೂ


ಎಫ್ರಾಯೀಮನ್ನು ಬಲ್ಲೆ, ಇಸ್ರಾಯೇಲು ನನಗೆ ಮರೆಯಲ್ಲ; ಎಫ್ರಾಯೀಮೇ, ನೀನೀಗ ಸೂಳೆತನಮಾಡಿದ್ದೀ, ಇಸ್ರಾಯೇಲು ಹೊಲೆಯಾಗಿದೆ.


ನಾನು ಅದರೊಳಗಿಂದ ಅಧಿಪತಿಯನ್ನು ಕಡಿದುಹಾಕಿ ಸಕಲರಾಜ್ಯಾಧಿಕಾರಿಗಳನ್ನೂ ಸಂಹರಿಸುವೆನು; ಇದು ಯೆಹೋವನ ನುಡಿ.


ನ್ಯಾಯವನ್ನು ಕಹಿಮಾಡುವವರೇ, ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರೇ,


ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವದು? ಗೋದಿಯನ್ನು ಅಂಗಡಿಯಿಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ, ತೊಲವನ್ನು ಹೆಚ್ಚಿಸೋಣ, ಸುಳ್ಳುತಕ್ಕಡಿಯಿಂದ ಮೋಸಮಾಡೋಣ;


ಅದಲ್ಲದೆ ಬಡವನನ್ನು ಕರುಣಿಸಿ ಪಕ್ಷಪಾತದಿಂದ ತೀರ್ಮಾನ ಮಾಡಬಾರದು.


ನಿಮ್ಮಲ್ಲಿರುವ ಬಡವರು ವ್ಯಾಜ್ಯವಾಡಿದಾಗ ನೀವು ನ್ಯಾಯವನ್ನು ಬಿಟ್ಟು ತೀರ್ಮಾನ ಮಾಡಬಾರದು. ಮೋಸದ ಕಾರ್ಯಕ್ಕೆ ದೂರವಾಗಿರಬೇಕು.


ಅವನು ಬಡವರನ್ನು ಜಜ್ಜಿ ತ್ಯಜಿಸಿಬಿಟ್ಟಿದ್ದಾನಲ್ಲಾ; ಸುಲಿಗೆಯಿಂದ ಕಿತ್ತುಕೊಂಡ ಮನೆಯನ್ನು ಭದ್ರಪಡಿಸಿಕೊಳ್ಳದೆ ಹೋಗುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು