Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 9:4 - ಕನ್ನಡ ಸತ್ಯವೇದವು J.V. (BSI)

4 ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತದೊಂದಿಗೆ ನೀವು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಜೀವ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ನಾನು ನಿಮಗೆ ಆಜ್ಞಾಪಿಸುವುದೇನೆಂದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ಆದರೆ ಮಾಂಸವನ್ನು ಅದರ ಜೀವವಾಗಿರುವ ರಕ್ತದೊಂದಿಗೆ ನೀವು ತಿನ್ನಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 9:4
15 ತಿಳಿವುಗಳ ಹೋಲಿಕೆ  

ಆದರೆ ರಕ್ತವು ಜೀವಾಧಾರವಾದದರಿಂದ ಮಾಂಸದೊಡನೆ ರಕ್ತವನ್ನು ಭುಜಸಲೇ ಕೂಡದೆಂಬದನ್ನು ಜ್ಞಾಪಕದಲ್ಲಿಡಿರಿ. ಪಶುಮಾಂಸದೊಡನೆ ಅದರ ಜೀವಾಧಾರವಾದದ್ದನ್ನೂ ತಿನ್ನಬಾರದಷ್ಟೆ;


ನೀವು ರಕ್ತವನ್ನು ಮಾತ್ರ ಭುಜಿಸಬಾರದು; ಅದನ್ನು ನೀರಿನಂತೆ ಭೂವಿುಯ ಮೇಲೆ ಸುರಿದುಬಿಡಬೇಕು.


ರಕ್ತವನ್ನು ಮಾತ್ರ ಭುಜಿಸಬಾರದು; ಅದನ್ನು ನೀರಿನಂತೆ ಭೂವಿುಯ ಮೇಲೆ ಸುರಿದುಬಿಡಬೇಕು.


ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ಹಾದರವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ರಕ್ತವನ್ನೂ ವಿಸರ್ಜಿಸಬೇಕೆಂದು ನಾವು ಅವರಿಗೆ ಕಾಗದವನ್ನು ಬರೆದು ಅಪ್ಪಣೆಕೊಡೋಣ.


ಪಕ್ಷಿಯದಾಗಲಿ ಪಶುವಿನದಾಗಲಿ ಯಾವ ರಕ್ತವನ್ನೂ ನೀವು ಎಲ್ಲಿಯೂ ಊಟಮಾಡಬಾರದು.


ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನಕೂಡದೆಂಬದು ನಿಮಗೂ ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲಾ ಸ್ಥಳಗಳಲ್ಲಿಯೂ ಶಾಶ್ವತ ನಿಯಮ.


ಆತನು ಉಂಟುಮಾಡಿದ್ದೆಲ್ಲವೂ ಒಳ್ಳೇದೇ; ದೇವರ ಸ್ತೋತ್ರಮಾಡಿ ತೆಗೆದುಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿಷಿದ್ಧವೆಂದು ಹೇಳತಕ್ಕದ್ದಲ್ಲ;


ರಕ್ತ ಸಹಿತವಾದ ಯಾವ ಮಾಂಸವನ್ನೂ ತಿನ್ನಬಾರದು. ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.


ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿವಿುತ್ತ ಜೀವದ ಹಂಗನ್ನು ತೊರೆದವರಾದ ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿಕೊಡುವದು ಯುಕ್ತವೆಂದು ನಾವೆಲ್ಲರೂ ಏಕಮನಸ್ಸಾಗಿ ತೀರ್ಮಾನಿಸಿದೆವು.


ಸತ್ತುಬಿದ್ದದ್ದನ್ನು ನೀವು ತಿನ್ನಕೂಡದು; ನಿಮ್ಮ ಊರಲ್ಲಿರುವ ಪರದೇಶೀಯರಿಗೆ ಅದನ್ನು ತಿನ್ನುವದಕ್ಕೆ ಕೊಡಬಹುದು, ಅನ್ಯರಿಗೆ ಮಾರಬಹುದು; ನೀವಾದರೋ ನಿಮ್ಮ ದೇವರಾದ ಯೆಹೋವನಿಗೆ ಪ್ರತಿಷ್ಠಿತರಾದವರು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಕೂಡದು.


ಅವರು ತಾವು ಕೊಳ್ಳೆಮಾಡಿದ ಎತ್ತು, ಕುರಿ, ಕರು ಇವುಗಳನ್ನು ಹಿಡಿದು ನೆಲದ ಮೇಲೆಯೇ ಕೊಂದು ಮಾಂಸದೊಡನೆ ರಕ್ತವನ್ನೂ ತಿಂದರು.


ಆದದರಿಂದ ನೀನು ಅವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುತ್ತೀರಿ, ಬೊಂಬೆಗಳ ಕಡೆಗೆ ಕಣ್ಣೆತ್ತುತ್ತೀರಿ; ರಕ್ತವನ್ನು ಸುರಿಸುತ್ತೀರಿ; ನಿಮ್ಮಂಥವರು ದೇಶವನ್ನು ಅನುಭವಿಸಬಹುದೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು