Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 9:25 - ಕನ್ನಡ ಸತ್ಯವೇದವು J.V. (BSI)

25 ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 “ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 “ಶಾಪ ತಟ್ಟಲಿ ಕಾನಾನಿಗೆ ದಾಸಾನುದಾಸನಾಗಲಿ ಅವನು ತನ್ನ ಸೋದರರಿಗೆ”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆದ್ದರಿಂದ ನೋಹನು, “ಕಾನಾನನು ತನ್ನ ಸಹೋದರರಿಗೆಲ್ಲಾ ಕೀಳಾದ ಗುಲಾಮನಾಗಿರಲಿ” ಎಂದು ಶಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ನಂತರ ಅವನು ಹೀಗೆಂದನು, “ಕಾನಾನನು ಶಾಪಗ್ರಸ್ತನಾಗಲಿ, ಅವನು ತನ್ನ ಸಹೋದರರಿಗೆ ದಾಸಾನುದಾಸನಾಗಿರಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 9:25
15 ತಿಳಿವುಗಳ ಹೋಲಿಕೆ  

ಇದರಿಂದ ನೀವು ಶಾಪಗ್ರಸ್ತರು. ನೀವು ಯಾವಾಗಲೂ ದಾಸರಾಗಿದ್ದು ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಒಡೆಯುವವರೂ ನೀರು ತರುವವರೂ ಆಗಿರಬೇಕು ಅಂದನು.


ಲೇವಿಯರು - ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು.


ಅದಕ್ಕೆ ಯೇಸು - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ.


ಸಮೂಹಕ್ಕೋಸ್ಕರವೂ ಯೆಹೋವನು ಆದುಕೊಳ್ಳುವ ಸ್ಥಳದಲ್ಲಿ ಆತನ ಯಜ್ಞವೇದಿಗೋಸ್ಕರವೂ ಕಟ್ಟಿಗೆ ಒಡೆಯುವವರನ್ನಾಗಿಯೂ ನೀರು ತರುವವರನ್ನಾಗಿಯೂ ನೇವಿುಸಿದನು. ಅವರು ಇಂದಿನವರೆಗೂ ಅದೇ ಕೆಲಸ ಮಾಡುತ್ತಾರೆ.


ಆಮೇಲೆ ಆತನು ಎಡಗಡೆಯಲ್ಲಿರುವವರಿಗೆ - ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.


ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿಗಳಿಗೂ ಅಶುಭವುಂಟಾಗುವದು.


ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅದಕ್ಕೆ ಶಾಪವುಂಟಾಗಲಿ. ಯಾಕೋಬನ ಕುಲದವರಲ್ಲಿ ಅವರನ್ನು ವಿಭಾಗಿಸುವೆನು; ಇಸ್ರಾಯೇಲ್ಯರಲ್ಲಿ ಅವರನ್ನು ಚದರಿಸುವೆನು.


ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವದನ್ನು ಕಂಡು ಹೊರಗಿದ್ದ ಅಣ್ಣತಮ್ಮಂದಿರಾದ ಶೇಮ್ ಯೆಫೆತರಿಗೆ ತಿಳಿಸಿದನು.


ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ಭೂವಿುಯನ್ನು ಬಿಟ್ಟುಹೋಗಬೇಕೆಂದು ನಿನಗೆ ಶಾಪ ಬಂತು.


ಆಗ ಯೆಹೋವದೇವರು ಸರ್ಪಕ್ಕೆ - ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಮೃಗಗಳಲ್ಲಿಯೂ ಶಾಪಗ್ರಸ್ತವಾದಿ; ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣೇ ತಿನ್ನುವಿ.


ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್ ಹಾಮ್ ಯೆಫೆತ್ ಎಂಬವರೇ (ಹಾಮನು ಕಾನಾನನ ತಂದೆಯು).


ನೋಹನು ಅಮಲಿಳಿದೆದ್ದು ಕಿರೀಮಗನು ಮಾಡಿದ್ದನ್ನು ತಿಳಿದು -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು