Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 48:18 - ಕನ್ನಡ ಸತ್ಯವೇದವು J.V. (BSI)

18 ಹಾಗಲ್ಲಪ್ಪಾ; ಇವನೇ ಚೊಚ್ಚಲಮಗನು; ಬಲಗೈಯನ್ನು ಇವನ ತಲೆಯ ಮೇಲೆ ಇಡಬೇಕು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಯೋಸೇಫನು ತಂದೆಗೆ, “ಅಪ್ಪಾ, ಇವನೇ ಚೊಚ್ಚಲ ಮಗನು ಬಲಗೈಯನ್ನು ಇವನ ತಲೆಯ ಮೇಲೆ ಇಡಬೇಕು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 “ಹಾಗಲ್ಲ ಅಪ್ಪಾ, ಇವನೇ ಜೇಷ್ಠ ಪುತ್ರ; ಬಲಗೈಯನ್ನು ಇವನ ತಲೆಯ ಮೇಲೆ ಇಡು”, ಎಂದು ಹೇಳಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಯೋಸೇಫನು ತನ್ನ ತಂದೆಗೆ, “ಅಪ್ಪಾ, ಹಾಗಲ್ಲ, ಇವನೇ ಜೇಷ್ಠಪುತ್ರನು. ಇವನ ತಲೆಯ ಮೇಲೆ ಬಲಗೈ ಇಡು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 48:18
11 ತಿಳಿವುಗಳ ಹೋಲಿಕೆ  

ನಾನು - ಬೇಡವೇ ಬೇಡ, ಸ್ವಾಮೀ, ಹೊಲೆಯಾದ ಪದಾರ್ಥವಾಗಲಿ ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ ಅಂದೆನು.


ಅದಕ್ಕೆ ಪೇತ್ರನು - ಬೇಡವೇ ಬೇಡ ಸ್ವಾಮೀ, ನಾನು ಎಂದೂ ಹೊಲೆ ಪದಾರ್ಥವನ್ನಾಗಲಿ ಅಶುದ್ಧಪದಾರ್ಥವನ್ನಾಗಲಿ ತಿಂದವನಲ್ಲ ಅಂದನು.


ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಆ ಬುದ್ಧಿವಂತೆಯರು - ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು.


ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಯೆಹೋವನನ್ನು ಆರಾಧಿಸಿ ಬರಬಹುದು; ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೇ ಎಂದು ಹೇಳಿ ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.


ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ ನನ್ನ ವೀರ್ಯಕ್ಕೆ ಪ್ರಥಮ ಫಲವೂ ಗೌರವದಲ್ಲಿಯೂ ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ.


ಯೋಸೇಫನು ತನ್ನ ಅಣ್ಣತಮ್ಮಂದಿರನ್ನು ಹಿರಿಯವನು ಮೊದಲುಗೊಂಡು ಕಿರಿಯವನವರೆಗೂ ಅವರವರ ವಯಸ್ಸಿನ ಪ್ರಕಾರವೇ ಕುಳ್ಳಿರಿಸಿದ್ದರಿಂದ ಅವರು ಒಬ್ಬರನ್ನೊಬ್ಬರು ನೋಡುತ್ತಾ ಆಶ್ಚರ್ಯಪಟ್ಟರು.


ಲಾಬಾನನಿಗೆ - ಇದೇನು ನೀನು ನನಗೆ ಮಾಡಿದ್ದು? ರಾಹೇಲಳಿಗೋಸ್ಕರ ನಿನಗೆ ಸೇವೆಮಾಡಿದೆನಲ್ಲಾ; ಯಾಕೆ ನನಗೆ ಮೋಸಮಾಡಿದಿ ಎಂದು ಕೇಳಿದ್ದಕ್ಕೆ ಲಾಬಾನನು - ಹಿರೀಮಗಳಿಗಿಂತ ಮೊದಲು ಕಿರೀ ಮಗಳನ್ನು ಮದುವೆಮಾಡಿಸಿಕೊಡುವದು ನಮ್ಮ ದೇಶದ ಪದ್ಧತಿಯಲ್ಲ.


ಸವಿಯೂಟವನ್ನು ಸಿದ್ಧಪಡಿಸಿದ ಮೇಲೆ ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು ತನ್ನ ಕಿರೀಮಗನಾದ ಯಾಕೋಬನಿಗೆ ಹೊದ್ದಿಸಿ


ಅದಕ್ಕೆ ಲೋಟನು - ಸ್ವಾವಿು, ಅದು ನನ್ನಿಂದಾಗದು;


ತನ್ನ ತಂದೆಯು ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲೆ ಇಡುವದನ್ನು ಯೋಸೇಫನು ಕಂಡು ಅಸಮಾಧಾನಪಟ್ಟು ಅವನ ಕೈಯನ್ನು ಎಫ್ರಾಯೀಮನ ತಲೆಯಿಂದ ಎತ್ತಿ ಮನಸ್ಸೆಯ ತಲೆಯ ಮೇಲೆ ಇಡುವದಕ್ಕಾಗಿ ಹಿಡಿದು ತಂದೆಗೆ -


ಅದರೆ ಅವನ ತಂದೆ ಒಪ್ಪದೆ - ಮಗನೇ, ನಾನು ಬಲ್ಲೆ, ಬಲ್ಲೆ; ಇವನಿಂದಲೂ ಜನಾಂಗವುಂಟಾಗುವದು; ಇವನೂ ಬಲಿಷ್ಠನಾಗುವನು; ಆದರೂ ಇವನಿಗಿಂತಲೂ ಇವನ ತಮ್ಮನು ಬಲಿಷ್ಠನಾಗುವನು; ತಮ್ಮನ ಸಂತತಿಯಲ್ಲಿಯೇ ಜನರು ಹೇರಳವಾಗಿ ಹುಟ್ಟುವರು ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು