Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 47:20 - ಕನ್ನಡ ಸತ್ಯವೇದವು J.V. (BSI)

20 ಯೋಸೇಫನು ಐಗುಪ್ತದೇಶದ ಎಲ್ಲಾ ಸಾಗುವಳಿಯ ಭೂವಿುಯನ್ನು ಫರೋಹನಿಗೋಸ್ಕರ ಕೊಂಡುಕೊಂಡನು. ಬರವು ಐಗುಪ್ತ್ಯರಿಗೆ ಘೋರವಾಗಿದ್ದದರಿಂದ ಅವರೆಲ್ಲರೂ ತಮ್ಮ ತಮ್ಮ ಹೊಲಗದ್ದೆಗಳನ್ನು ಮಾರಿಬಿಟ್ಟರು. ಹೀಗೆ ಸಾಗುವಳಿಯ ಭೂವಿುಯೆಲ್ಲಾ ಫರೋಹನದಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಹೀಗೆ ಯೋಸೇಫನು ಐಗುಪ್ತರಿಂದ ಎಲ್ಲಾ ಸಾಗುವಳಿಯ ಭೂಮಿಯನ್ನು ಫರೋಹನಿಗಾಗಿ ಕೊಂಡುಕೊಂಡನು. ಪ್ರತಿಯೊಬ್ಬ ಐಗುಪ್ತನ್ನು ತನ್ನ ಹೊಲಗದ್ದೆಗಳನ್ನು ಮಾರಿಬಿಟ್ಟನು. ಬರವು ಐಗುಪ್ತದಲ್ಲಿ ಘೋರವಾಗಿದ್ದದರಿಂದ ಅವರೆಲ್ಲರ ಭೂಮಿಯು ಫರೋಹನ ವಶವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಜೋಸೆಫ್ ಈಜಿಪ್ಟ್ ದೇಶದ ಎಲ್ಲ ಸಾಗುವಳಿ ಭೂಮಿಯನ್ನು ಫರೋಹನಿಗಾಗಿ ಕೊಂಡುಕೊಂಡನು. ಬರದ ಘೋರತೆಯಿಂದಾಗಿ ಈಜಿಪ್ಟಿನವರು ತಮ್ಮ ತಮ್ಮ ಹೊಲಗದ್ದೆಗಳನ್ನು ಮಾರಿಬಿಟ್ಟರು. ಹೀಗೆ ಸಾಗುವಳಿ ಭೂಮಿಯೆಲ್ಲ ಫರೋಹನದಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆದ್ದರಿಂದ ಯೋಸೇಫನು ಈಜಿಪ್ಟಿನ ಎಲ್ಲಾ ಜಮೀನನ್ನು ಫರೋಹನಿಗಾಗಿ ಕೊಂಡುಕೊಂಡನು. ಹಸಿವೆಯಿಂದಾಗಿ ಈಜಿಪ್ಟಿನ ಎಲ್ಲಾ ಜನರು ಯೋಸೇಫನಿಗೆ ತಮ್ಮ ಜಮೀನುಗಳನ್ನು ಮಾರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಗ ಯೋಸೇಫನು ಈಜಿಪ್ಟ್ ದೇಶವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಬರವು ಅವರಿಗೆ ಘೋರವಾಗಿದ್ದುದರಿಂದ ಈಜಿಪ್ಟನವರು ತಮ್ಮ ತಮ್ಮ ಹೊಲಗಳನ್ನು ಮಾರಿಬಿಟ್ಟರು. ಹೀಗೆ ದೇಶವು ಫರೋಹನದಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 47:20
2 ತಿಳಿವುಗಳ ಹೋಲಿಕೆ  

ನಿನ್ನ ಕಣ್ಣೆದುರಿಗೆ ನಾವು ಯಾಕೆ ಸಾಯಬೇಕು; ನಮ್ಮ ಭೂವಿುಯು ಯಾಕೆ ಹಾಳಾಗಬೇಕು. ನಮ್ಮನ್ನೂ ನಮ್ಮ ಭೂವಿುಯನ್ನೂ ತೆಗೆದುಕೊಂಡು ಧಾನ್ಯವನ್ನು ಕೊಡು; ನಾವು ನಮ್ಮ ಭೂವಿುಯನ್ನು ಫರೋಹನಿಗೆ ಕೊಟ್ಟುಬಿಟ್ಟು ಅವನಿಗೆ ಗುಲಾಮರಾಗುವೆವು. ನಾವು ಸಾಯದೆ ಬದುಕಬೇಕಾದರೆ ಮತ್ತು ಭೂವಿುಯು ಹಾಳು ಬೀಳಬಾರದಿದ್ದರೆ ನೀನು ಬೀಜವನ್ನು ಕೊಡಬೇಕೆಂದು ಹೇಳಲು


ಯೋಸೇಫನು ಐಗುಪ್ತದೇಶದ ಒಂದು ಮೇರೆಯಿಂದ ಮತ್ತೊಂದು ಮೇರೆಯವರೆಗೂ ಪ್ರಜೆಗಳನ್ನು ದಾಸರನ್ನಾಗಿ ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು