Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 42:15 - ಕನ್ನಡ ಸತ್ಯವೇದವು J.V. (BSI)

15 ಅದು ಹೌದೋ ಅಲ್ಲವೋ ಗೊತ್ತಾಗುವದಕ್ಕಾಗಿ ನಿಮ್ಮ ತಮ್ಮನು ಬರಬೇಕು; ಅವನು ಬಂದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಟು ಹೋಗಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೀವು ಪರೀಕ್ಷಿಸಲ್ಪಡುವುದು ಹೇಗೆಂದರೆ, ನಿಮ್ಮ ಚಿಕ್ಕ ತಮ್ಮನು ಬರಬೇಕು. ಅವನು ಬಂದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಟು ಹೋಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಇದು ನಿಜವೋ ಸುಳ್ಳೋ ಎಂದು ಗೊತ್ತಾಗಬೇಕಾದರೆ ನೀವು ನಿಮ್ಮ ತಮ್ಮನನ್ನು ಬರಮಾಡಬೇಕು. ಅವನು ಬಂದ ಹೊರತು, ಫರೋಹನ ಜೀವದಾಣೆ, ನೀವು ಇಲ್ಲಿಂದ ಹೊರಟುಹೋಗಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದರೆ ನೀವು ಹೇಳುತ್ತಿರುವುದು ಸತ್ಯವಾಗಿದ್ದರೆ ನಿಮ್ಮ ಚಿಕ್ಕ ತಮ್ಮನು ಇಲ್ಲಿಗೆ ಬರಬೇಕು; ಇಲ್ಲವಾದರೆ ಫರೋಹನ ಜೀವದಾಣೆ, ಅಲ್ಲಿಯವರೆಗೂ ನೀವು ಈ ಸ್ಥಳದಿಂದ ಹೋಗಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಈಗ ನಿಮ್ಮನ್ನು ನಾನು ಪರೀಕ್ಷಿಸುತ್ತೇನೆ. ಹೇಗೆಂದರೆ, ನಿಮ್ಮ ಚಿಕ್ಕ ಸಹೋದರನು ಇಲ್ಲಿಗೆ ಬಂದ ಹೊರತು, ಫರೋಹನ ಜೀವದಾಣೆ ನೀವು ಇಲ್ಲಿಂದ ಹೋಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 42:15
19 ತಿಳಿವುಗಳ ಹೋಲಿಕೆ  

ದಾವೀದನು ಫಿಲಿಷ್ಟಿಯನೊಡನೆ ಯುದ್ಧಮಾಡುವದಕ್ಕೆ ಹೊರಟದ್ದನ್ನು ಸೌಲನು ಕಂಡು ತನ್ನ ಸೇನಾಪತಿಯಾದ ಅಬ್ನೇರನನ್ನು - ಅಬ್ನೇರನೇ, ಈ ಹುಡುಗನು ಯಾರ ಮಗನು ಎಂದು ಕೇಳಿದ್ದಕ್ಕೆ ಅವನು ಸೌಲನಿಗೆ - ಅರಸನೇ, ನಿನ್ನ ಜೀವದಾಣೆ ನನಗೆ ಗೊತ್ತಿಲ್ಲ ಎಂದು ಉತ್ತರಕೊಟ್ಟನು.


ಮುಖ್ಯವಾಗಿ, ನನ್ನ ಸಹೋದರರೇ, ಆಣೆ ಇಡಲೇಬೇಡಿರಿ; ಆಕಾಶದ ಮೇಲಾಗಲಿ ಭೂವಿುಯ ಮೇಲಾಗಲಿ ಇನ್ನಾತರ ಮೇಲಾಗಲಿ ಆಣೆ ಇಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವದಿಲ್ಲ.


ಯೆಹೋವನು ಹೀಗನ್ನುತ್ತಾನೆ - ನಾನು ನಿನ್ನನ್ನು ಹೇಗೆ ಕ್ಷವಿುಸಲಿ? ನಿನ್ನ ಜನರು ನನ್ನನ್ನು ವಿಸರ್ಜಿಸಿ ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ; ನಾನು ಅವರಿಗೆ ಹೊಟ್ಟೆತುಂಬಾ ಆಹಾರಕೊಟ್ಟ ಮೇಲೆ ಅವರು ಹಾದರ ಮಾಡಿದರು, ಸೂಳೆಯರ ಮನೆಗಳಲ್ಲಿ ಗುಂಪುಕೂಡಿದರು.


ಜನರು ಯೆಹೋವನ ಜೀವದಾಣೆ ಎಂದರೂ ಆ ಆಣೆಯು ಸುಳ್ಳೇ ಸುಳ್ಳು [ಎಂದು ಯೆಹೋವನು ಅನ್ನುತ್ತಾನೆ].


ಅದಕ್ಕೆ ದಾವೀದನು - ನಿನ್ನ ಕಣ್ಣು ಮುಂದೆ ನನಗೆ ದಯೆ ದೊರಕುತ್ತದೆಂಬದನ್ನು ನಿನ್ನ ತಂದೆಯು ಬಲ್ಲನು. ಆದದರಿಂದ ಇದನ್ನು ಯೋನಾತಾನನಿಗೆ ತಿಳಿಸಿದರೆ ಅವನಿಗೆ ದುಃಖವಾಗುವದೆಂದು ಮರೆಮಾಡುತ್ತಾನೆ. ನಿನ್ನ ಜೀವದಾಣೆ, ಯೆಹೋವನಾಣೆ, ನನಗೂ ಮರಣಕ್ಕೂ ಒಂದು ಗೇಣು ಮಾತ್ರ ಅಂತರವಿದೆ ಎಂದು ಖಂಡಿತವಾಗಿ ಹೇಳಿದನು.


ಹನ್ನಳು ಏಲಿಗೆ - ಸ್ವಾಮೀ, ನಿನ್ನ ಜೀವದಾಣೆ; ಮೊದಲು ಯೆಹೋವನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ ಇಲ್ಲಿ ನಿನ್ನ ಹತ್ತಿರ ನಿಂತಿದ್ದ ಸ್ತ್ರೀಯು ನಾನೇ.


ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು; ಆತನನ್ನೇ ಸೇವಿಸಬೇಕು; ಆತನ ಹೆಸರು ಹೇಳಿ ಪ್ರಮಾಣಮಾಡಬೇಕು.


ಅದಕ್ಕೆ ಯೆಹೂದನು - ಆ ಮನುಷ್ಯನು ನಮಗೆ, ನಿಮ್ಮ ತಮ್ಮನನ್ನು ಕರಕೊಂಡುಬಂದ ಹೊರತು ನನ್ನ ಮುಖವನ್ನು ನೋಡಕೂಡದು ಎಂದು ಖಂಡಿತವಾಗಿ ಹೇಳಿದನಲ್ಲಾ.


ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರಕೊಂಡು ಬರಬೇಕು; ಕರಕೊಂಡು ಬಂದರೆ ನೀವು ಗೂಢಚಾರರಲ್ಲ, ಸತ್ಯವಂತರೇ ಎಂದು ತಿಳಿದುಕೊಂಡು ನಿಮ್ಮ ಅಣ್ಣನನ್ನು ಬಿಡಿಸಿಬಿಡುತ್ತೇನೆ, ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ನಡಿಸಬಹುದೆಂದು ಹೇಳಿದನು ಅಂದರು.


ಆ ದೇಶಾಧಿಪತಿ ನಮ್ಮ ಸಂಗಡ ಬಿರಿಸಿನಿಂದ ಮಾತಾಡಿ ನಮ್ಮನ್ನು ಗೂಢಚಾರರೆಂದು ಹೇಳಿದನು.


ನನ್ನ ಬಳಿಗೆ ಕರೆದುಕೊಂಡು ಬರಬೇಕು; ಕರೆದುಕೊಂಡು ಬಂದರೆ, ನಿಮ್ಮ ಮಾತನ್ನು ಸತ್ಯವೆಂದು ನಾನು ತಿಳಿದುಕೊಳ್ಳುವದರಿಂದ ನೀವು ಸಾಯುವದಿಲ್ಲ ಅಂದನು. ಅವರು ಆ ಮಾತಿಗೆ ಒಪ್ಪಿದರು.


ಅವನನ್ನು ಕರೆದುಕೊಂಡು ಬರುವದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ; ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇಡಿಸುತ್ತೇನೆ. ಹೀಗೆ ನಾನು ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಅಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ, ಫರೋಹನ ಜೀವದಾಣೆ, ನೀವು ಗೂಢಚಾರರೇ ಎಂದು ಹೇಳಿ


ಅವನು ಅವರಿಗೆ - ಸುಳ್ಳು, ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳುವದಕ್ಕೆ ಬಂದಿರಿ ಎಂದು ಹೇಳಲು


ಯೋಸೇಫನು ಅವರನ್ನು ಕಂಡಾಗ ಅವರ ಗುರುತು ಹಿಡಿದು ತನ್ನ ಅಣ್ಣಂದಿರೆಂದು ತಿಳಿದಾಗ್ಯೂ ಅವರಿಗೆ ಅನ್ಯನಂತೆ ತೋರ್ಪಡಿಸಿಕೊಂಡು ಬಿರುನುಡಿಯಿಂದ - ನೀವು ಎಲ್ಲಿಂದ ಬಂದವರು ಎಂದು ಕೇಳಿದನು. ಅವರು - ಧಾನ್ಯವನ್ನು ಕೊಂಡುಕೊಳ್ಳುವದಕ್ಕೋಸ್ಕರ ಕಾನಾನ್ ದೇಶದಿಂದ ಬಂದಿದ್ದೇವೆ ಅಂದರು.


ಯೋಸೇಫನು ಅವರಿಗೆ - ನೀವು ಗೂಢಚಾರರೆಂದು ನಾನು ಹೇಳಿದೆನಷ್ಟೆ;


ಅವನನ್ನು ಕಳುಹಿಸಿಕೊಡದಿದ್ದರೆ ನಾವು ಹೋಗುವದಿಲ್ಲ. ಆ ಮನುಷ್ಯನು ನಮಗೆ - ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಲೇಕೂಡದೆಂದು ಹೇಳಿದ್ದಾನೆ ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು