ಆದಿಕಾಂಡ 39:7 - ಕನ್ನಡ ಸತ್ಯವೇದವು J.V. (BSI)7 ಹೀಗಿರುವಲ್ಲಿ ಅವನ ದಣಿಯ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ ತನ್ನೊಡನೆ ಸಂಗಮಕ್ಕೆ ಕರೆದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಹೀಗಿರುವಲ್ಲಿ ಯೋಸೇಫನ ದಣಿಯ ಹೆಂಡತಿಯು ಅವನನ್ನು ಮೋಹಿಸಿ “ನನ್ನ ಸಂಗಡ ಸಂಗಮಿಸಲು ಬಾ” ಎಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಜೋಸೆಫನದು ಸೊಗಸಾದ ಮೈಕಟ್ಟು, ಸುಂದರವಾದ ರೂಪು. ಹೀಗಿರಲು ಅವನ ದಣಿಯ ಪತ್ನಿ ಅವನ ಮೇಲೆ ಕಣ್ಣುಹಾಕಿದಳು. "ನನ್ನೊಡನೆ ಹಾಸಿಗೆಗೆ ಬಾ,” ಎಂದು ಕರೆದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು. ಅಧ್ಯಾಯವನ್ನು ನೋಡಿ |