Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 36:9 - ಕನ್ನಡ ಸತ್ಯವೇದವು J.V. (BSI)

9 ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶಸ್ಥರ ಚರಿತ್ರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶದ ಚರಿತ್ರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಸೇಯೀರ್ ಮಲೆನಾಡಿನಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶಾವಳಿ ಹೀಗಿದೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಏಸಾವನು ಎದೋಮ್ ಜನರ ತಂದೆ. ಸೇಯೀರ್ ದೇಶದಲ್ಲಿ ವಾಸವಾಗಿದ್ದ ಏಸಾವನ ಕುಟುಂಬದವರ ಹೆಸರುಗಳು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 36:9
10 ತಿಳಿವುಗಳ ಹೋಲಿಕೆ  

ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ ಮೋವಾಬ್ ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲ ಪುರುಷನು.


ಬಳಿಕ ಯಾಕೋಬನು ಎದೋಮ್ಯರ ದೇಶವಾಗಿರುವ ಸೇಯೀರ್‍ಸೀಮೆಗೆ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ಮುಂದೆ ಕಳುಹಿಸಿದನು.


ಹೀಗಿರಲಾಗಿ ಏಸಾವನು ಸೇಯೀರ್‍ಬೆಟ್ಟದ ಸೀಮೆಗೆ ಹೋಗಿ ಅಲ್ಲೇ ವಾಸವಾಗಿದ್ದನು. ಏಸಾವನಂದರೆ ಎದೋಮನು.


ಏಸಾವನ ಮಕ್ಕಳ ಹೆಸರುಗಳು ಯಾವವೆಂದರೆ - ಎಲೀಫಜನು ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಗನು; ರೆಗೂವೇಲನು ಏಸಾವನ ಹೆಂಡತಿಯಾದ ಬಾಸೆಮತಳ ಮಗನು.


ಇದಲ್ಲದೆ ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಪರ್ವತಕ್ಕೆ ಹೋದರು; ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ, ಉಜ್ಜೀಯೇಲ್ ಎಂಬವರು ಅವರ ಮುಖ್ಯಸ್ಥರು.


ಕಳುಹಿಸುವಾಗ ಅವರಿಗೆ - ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ - ನಿನ್ನ ಸೇವಕನಾದ ಯಾಕೋಬನು ಇಷ್ಟು ದಿವಸ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು;


ತೇಮಾನ್‍ಕುಲಪತಿ, ವಿುಪ್ಚಾರಕುಲಪತಿ, ಮಗ್ದೀಯೇಲ್‍ಕುಲಪತಿ, ಗೀರಾಮ್‍ಕುಲಪತಿ ಇವೇ. ಇವರು ತಮ್ಮ ದೇಶದೊಳಗಣ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಕುಲಪತಿಗಳು. ಮೇಲೆ ಹೇಳಿರುವದು ಎದೋಮ್ಯರ ಮೂಲ ಪುರುಷನಾದ ಏಸಾವನ ವಂಶಸ್ಥರ ಚರಿತ್ರೆ.


ನಾನು ಸೇಯೀರ್‍ಬೆಟ್ಟದ ಸೀಮೆಯನ್ನು ಏಸಾವ್ಯರಿಗೇ ಸ್ವದೇಶವಾಗ ಕೊಟ್ಟಿರುವದರಿಂದ ಅದರಲ್ಲಿ ನಿಮಗೆ ಹೆಜ್ಜೆಯಿಡುವಷ್ಟು ನೆಲವನ್ನಾದರೂ ಕೊಡುವದಿಲ್ಲ.


ಇಸಾಕನಿಗೆ ಯಾಕೋಬ್, ಏಸಾವ್ ಎಂಬಿಬ್ಬರು ಮಕ್ಕಳನ್ನು ಅನುಗ್ರಹಿಸಿ ಏಸಾವನಿಗೆ ಸೇಯೀರ್ ಪರ್ವತವನ್ನು ಸ್ವಾಸ್ತ್ಯವಾಗಿ ದಯಪಾಲಿಸಿದೆನು. ಯಾಕೋಬನಾದರೋ ತನ್ನ ಮಕ್ಕಳ ಸಹಿತವಾಗಿ ಐಗುಪ್ತ ದೇಶಕ್ಕೆ ಹೋದನು.


ಓಬದ್ಯನಿಗಾದ ದೈವದರ್ಶನ. ಕರ್ತನಾದ ಯೆಹೋವನು ಎದೋವಿುನ ವಿಷಯವಾಗಿ ನುಡಿದ ವಾಕ್ಯ. ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇವೆ; ಆತನು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿಕಳುಹಿಸಿದ್ದಾನೆ - ಹೊರಡಿರಿ, ಯುದ್ಧಕ್ಕೆ ಹೊರಟು ಎದೋವಿುನ ಮೇಲೆ ಬೀಳೋಣ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು