ಆದಿಕಾಂಡ 34:7 - ಕನ್ನಡ ಸತ್ಯವೇದವು J.V. (BSI)7 ಯಾಕೋಬನ ಗಂಡುಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದಾಗ ವ್ಯಥೆಪಟ್ಟು ಬಹಳ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಕೂಡಿ ಇಸ್ರಾಯೇಲ್ಯರೊಳಗೆ ಬಹಳ ಅವಮಾನಕರವಾದ ಕೆಲಸವನ್ನು ನಡಿಸಿದನು; ಅದು ಆಗಬಾರದ ಕಾರ್ಯ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಯಾಕೋಬನ ಗಂಡುಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದಾಗ ವ್ಯಸನಪಟ್ಟು ಬಹಳ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳ ಮಾನಭಂಗ ಮಾಡಿ ಇಸ್ರಾಯೇಲರೊಳಗೆ ಬಹಳ ಅವಮಾನಕರವಾದ ಕೆಲಸವನ್ನು ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಇತ್ತ ಯಕೋಬನ ಗಂಡು ಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದರು. ಶೆಕೆಮನು ತಮ್ಮ ತಂಗಿಯನ್ನು ಬಲಾತ್ಕಾರದಿಂದ ಕೂಡಿ, ಮಾಡಬಾರದನ್ನು ಮಾಡಿ, ಇಸ್ರಯೇಲರಿಗೆ ಘನ ಅವಮಾನವನ್ನು ಮಾಡಿದ್ದರಿಂದ ಅವರು ತಳಮಳಗೊಂಡು ಕಡುಕೋಪದಿಂದ ಇದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಹೊಲದಲ್ಲಿದ್ದ ಯಾಕೋಬನ ಗಂಡುಮಕ್ಕಳು ನಡೆದ ಸಂಗತಿಯನ್ನು ಕೇಳಿ ತುಂಬ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಮಾನಭಂಗ ಮಾಡಿ ಇಸ್ರೇಲರಿಗೆ ಅವಮಾನ ಮಾಡಿದ್ದರಿಂದ ಅವರು ಆವೇಶಗೊಂಡರು. ಶೆಕೆಮನು ತುಂಬ ಕೆಟ್ಟದ್ದನ್ನು ಮಾಡಿದ್ದರಿಂದ ಅಣ್ಣಂದಿರು ಹೊಲದಿಂದ ಹಿಂತಿರುಗಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಯಾಕೋಬನ ಮಕ್ಕಳು ಆ ವಿಷಯವನ್ನು ಕೇಳಿದ ಕೂಡಲೇ ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ, ಇಸ್ರಾಯೇಲಿನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ, ಅವರು ವ್ಯಸನಪಟ್ಟು, ಬಹಳ ಕೋಪಗೊಂಡರು. ಅದು ಹಾಗೆ ಆಗಬಾರದಾಗಿತ್ತು. ಅಧ್ಯಾಯವನ್ನು ನೋಡಿ |