ಆದಿಕಾಂಡ 33:8 - ಕನ್ನಡ ಸತ್ಯವೇದವು J.V. (BSI)8 ಏಸಾವನು - ನಾನು ದಾರಿಯಲ್ಲಿ ಕಂಡ ಆ ಪಶುಗಳ ಹಿಂಡುಗಳು ಯಾತಕ್ಕೆ ಎಂದು ಕೇಳಲು ಯಾಕೋಬನು - ಸ್ವಾವಿುಯವರ ದಯ ನನಗೆ ದೊರಕಬೇಕೆಂದು ನಾನು ತಮಗೆ ಕಳುಹಿಸಿಕೊಟ್ಟೆನು ಅಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪಶುಗಳು ಯಾತಕ್ಕೆ?” ಎಂದು ಕೇಳಲು ಯಾಕೋಬನು, “ಸ್ವಾಮಿಯವರ ದಯೆ ನನಗೆ ದೊರಕಬೇಕೆಂದು ನಾನು ತಮಗೆ ಅವುಗಳನ್ನು ಕಳುಹಿಸಿಕೊಟ್ಟೆನು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪರಿವಾರ ಏತಕ್ಕೆ?” ಎಂದು ಕೇಳಿದನು. ಯಕೋಬನು, “ಒಡೆಯನ ದಯೆ ನನಗೆ ದೊರಕಲೆಂದು ನಾನು ತಮಗೆ ಅದನ್ನು ಕಳಿಸಿಕೊಟ್ಟೆ,” ಎಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಏಸಾವನು, “ನಾನು ಬರುತ್ತಿರುವಾಗ ಕಂಡ ಆ ಜನರೆಲ್ಲಾ ಯಾರು? ಆ ಪಶುಗಳೆಲ್ಲಾ ಯಾತಕ್ಕೆ?” ಎಂದು ಕೇಳಿದನು. ಯಾಕೋಬನು, “ನೀನು ನನ್ನನ್ನು ಸ್ವೀಕರಿಸಿಕೊಳ್ಳಲಿ ಎಂದು ಅವುಗಳನ್ನು ಉಡುಗೊರೆಗಳನ್ನಾಗಿ ಕಳುಹಿಸಿಕೊಟ್ಟೆನು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆಗ ಏಸಾವನು, “ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆಗಳೆಲ್ಲಾ ಏತಕ್ಕೆ?” ಎಂದು ಕೇಳಿದನು. ಯಾಕೋಬನು, “ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕುವುದಕ್ಕೋಸ್ಕರ,” ಎಂದನು. ಅಧ್ಯಾಯವನ್ನು ನೋಡಿ |