ಆದಿಕಾಂಡ 33:5 - ಕನ್ನಡ ಸತ್ಯವೇದವು J.V. (BSI)5 ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು - ನಿನ್ನ ಜೊತೆಯಲ್ಲಿರುವ ಇವರು ಯಾರೆಂದು ಕೇಳಲು ಯಾಕೋಬನು ಅವನಿಗೆ - ದೇವರು ನಿನ್ನ ಸೇವಕನಿಗೆ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು, “ನಿನ್ನ ಜೊತೆಯಲ್ಲಿರುವ ಜನರು ಯಾರು?” ಎಂದು ಕೇಳಲು ಯಾಕೋಬನು ಅವನಿಗೆ, “ದೇವರು ನಿನ್ನ ಸೇವಕನಿಗೆ ಕೃಪೆಯಿಂದ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅವರಿಬ್ಬರ ಕಣ್ಣಲ್ಲೂ ನೀರು ಹರಿಯಿತು. ಬಳಿಕ ಏಸಾವನು ಕಣ್ಣೆತ್ತಿ ಆ ಮಹಿಳೆಯರನ್ನೂ ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ವಿಚಾರಿಸಿದನು. ಯಕೋಬನು, “ದೇವರು ನಿಮ್ಮ ದಾಸನಾದ ನನಗೆ ಅನುಗ್ರಹಿಸಿದ ಮಕ್ಕಳು ಇವರೇ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಏಸಾವನು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕಣ್ಣೆತ್ತಿ ನೋಡಿ, “ನಿನ್ನೊಡನೆ ಇರುವ ಈ ಜನರು ಯಾರು?” ಎಂದು ಕೇಳಿದನು. ಯಾಕೋಬನು, “ದೇವರು ನನಗೆ ಕೊಟ್ಟ ಮಕ್ಕಳೇ ಇವರು. ದೇವರು ನನಗೆ ಒಳ್ಳೆಯವನಾಗಿದ್ದನು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಆಗ ಏಸಾವನು ತನ್ನ ದೃಷ್ಟಿ ಹರಿಸಿ, ಆ ಸ್ತ್ರೀಯರನ್ನೂ, ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ಕೇಳಿದನು. ಅದಕ್ಕವನು, “ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು,” ಎಂದನು. ಅಧ್ಯಾಯವನ್ನು ನೋಡಿ |