ಆದಿಕಾಂಡ 31:32 - ಕನ್ನಡ ಸತ್ಯವೇದವು J.V. (BSI)32 ನಿನ್ನ ದೇವರುಗಳು ಯಾರ ಬಳಿಯಲ್ಲಿ ಸಿಕ್ಕುತ್ತವೆಯೋ ಅವನು ಸಾಯಲಿ. ನಮ್ಮ ಬಂಧುಗಳ ಎದುರಾಗಿ ನನ್ನ ಸೊತ್ತನ್ನು ಪರೀಕ್ಷಿಸಬಹುದು; ಅದರಲ್ಲಿ ನಿನ್ನದೇನಾದರೂ ಸಿಕ್ಕಿದರೆ ಅದನ್ನು ತೆಗೆದುಕೋ ಎಂದು ಹೇಳಿದನು. ರಾಹೇಲಳು ಆ ದೇವರುಗಳನ್ನು ಕದ್ದದ್ದು ಯಾಕೋಬನಿಗೆ ತಿಳಿದಿರಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ನಿನ್ನ ದೇವರುಗಳು ಯಾರ ಬಳಿಯಲ್ಲಿ ಸಿಕ್ಕುತ್ತವೆಯೋ ಅವರು ಸಾಯಲಿ. ನಮ್ಮ ಬಂಧುಗಳ ಮುಂದೆಯೇ ನನ್ನ ಆಸ್ತಿಯನ್ನು ಪರೀಕ್ಷಿಸಬಹುದು. ಅದರಲ್ಲಿ ನಿನ್ನದೇನಾದರೂ ಸಿಕ್ಕಿದರೆ ಅದನ್ನು ತೆಗೆದುಕೋ” ಎಂದು ಹೇಳಿದನು. ರಾಹೇಲಳು ಆ ದೇವರುಗಳನ್ನು ಕದ್ದದ್ದು ಯಾಕೋಬನಿಗೆ ತಿಳಿದಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಆದರೆ ನಿಮ್ಮ ಕುಲದೇವರುಗಳ ವಿಗ್ರಹಗಳು ಯಾರ ಬಳಿಯಲ್ಲಿ ಸಿಕ್ಕುತ್ತವೆಯೋ ಅವನು ಸಾಯಲಿ, ನಮ್ಮ ಬಂಧುಬಳಗದವರ ಎದುರಿನಲ್ಲೇ ನನ್ನ ಸೊತ್ತನ್ನು ಪರೀಕ್ಷಿಸಬಹುದು. ಅದರಲ್ಲಿ ನಿಮ್ಮದೇನಾದರೂ ಸಿಕ್ಕಿದರೆ ಅದನ್ನು ತೆಗೆದುಕೊಳ್ಳಬಹುದು,” ಎಂದು ಹೇಳಿದನು. ಆ ಕುಲದೇವರುಗಳ ವಿಗ್ರಹಗಳನ್ನು ಕದ್ದವಳು ರಾಖೇಲಳೆಂದು ಯಕೋಬನಿಗೆ ತಿಳಿದಿರಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್32 ಆದರೆ ನಾನು ನಿನ್ನ ವಿಗ್ರಹಗಳನ್ನು ಕದ್ದುಕೊಳ್ಳಲಿಲ್ಲ. ನಿನ್ನ ವಿಗ್ರಹಗಳನ್ನು ತೆಗೆದುಕೊಂಡಿರುವ ಯಾವ ವ್ಯಕ್ತಿಯನ್ನಾದರೂ ಇಲ್ಲಿ ಕಂಡರೆ ಆ ವ್ಯಕ್ತಿಯನ್ನು ಕೊಲ್ಲಲಾಗುವುದು. ನಿನ್ನ ಜನರೇ ನನಗೆ ಸಾಕ್ಷಿಗಳು. ನಿನಗೆ ಸೇರಿದ ಏನಾದರೂ ಇದೆಯೋ ಎಂದು ನೀನೇ ನೋಡಬಹುದು. ನಿನಗೆ ಸೇರಿದ ಯಾವುದಾದರೂ ಇದ್ದರೆ ತೆಗೆದುಕೊ” ಎಂದು ಹೇಳಿದನು. (ಲಾಬಾನನ ವಿಗ್ರಹಗಳನ್ನು ರಾಹೇಲಳು ಕದ್ದುಕೊಂಡಿರುವುದು ಯಾಕೋಬನಿಗೆ ತಿಳಿದಿರಲಿಲ್ಲ.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳು ಸಿಕ್ಕುವುವೋ ಅವರು ಸಾಯಲಿ. ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ, ನಮ್ಮ ಬಂಧುಗಳ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ,” ಎಂದನು. ಆದರೆ ರಾಹೇಲಳು ಅವುಗಳನ್ನು ಕದ್ದುಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ. ಅಧ್ಯಾಯವನ್ನು ನೋಡಿ |