Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 31:28 - ಕನ್ನಡ ಸತ್ಯವೇದವು J.V. (BSI)

28 ನನ್ನ ಹೆಣ್ಣುಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಡುವದಕ್ಕಾದರೂ ಆಗದಂತೆ ಮಾಡಿದಿ. ನೀನು ಮಾಡಿದ್ದು ಹುಚ್ಚು ಕೆಲಸವೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆದರೆ ನೀನು ನನ್ನ ಹೆಣ್ಣು ಮಕ್ಕಳಿಗೂ ಮೊಮ್ಮಕ್ಕಳಿಗೂ, ಮುದ್ದಿಡುವುದಕ್ಕಾದರೂ ಆಗದಂತೆ ಮಾಡಿದಿ. ನೀನು ಮಾಡಿದ್ದು ಹುಚ್ಚು ಕೆಲಸ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ನನ್ನ ಹೆಣ್ಣು ಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು ಬೀಳ್ಕೊಡಲೂ ಆಗದಂತೆ ಮಾಡಿದೆ. ನೀನು ಮಾಡಿದ್ದು ಎಂಥ ಹುಚ್ಚು ಕೆಲಸ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ನಾನು ನನ್ನ ಮೊಮ್ಮಕ್ಕಳಿಗೆ ಮುದ್ದಿಡುವುದಕ್ಕೂ ನನ್ನ ಹೆಣ್ಣುಮಕ್ಕಳನ್ನು ಬೀಳ್ಕೊಡುವುದಕ್ಕೂ ನೀನು ನನಗೆ ಅವಕಾಶ ಕೊಡಲಿಲ್ಲ. ನಿನ್ನ ಮೂಢತನದಿಂದ ಹೀಗೆ ಮಾಡಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆದರೆ ನೀನು ನನ್ನ ಮೊಮ್ಮಕ್ಕಳಿಗೂ, ನನ್ನ ಹೆಣ್ಣು ಮಕ್ಕಳಿಗೂ ಮುದ್ದು ಕೊಡುವುದಕ್ಕೂ ಬಿಡಲಿಲ್ಲ. ನೀನು ಮಾಡಿದ್ದು ಬುದ್ಧಿಹೀನ ಕೆಲಸವೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 31:28
15 ತಿಳಿವುಗಳ ಹೋಲಿಕೆ  

ಬೆಳಿಗ್ಗೆ ಲಾಬಾನನು ಎದ್ದು ತನ್ನ ಹೆಣ್ಣುಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿ ತನ್ನ ಊರಿಗೆ ಹೊರಟುಹೋದನು.


ನೀವು ಇನ್ನು ಮೇಲೆ ನನ್ನ ಮುಖವನ್ನು ಕಾಣುವದಿಲ್ಲವೆಂದು ಪೌಲನು ಹೇಳಿದ ಮಾತಿಗೆ ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು. ಆಮೇಲೆ ಅವರು ಅವನನ್ನು ಹಡಗಿಗೆ ಸಾಗಕಳುಹಿಸಿದರು.


ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ - ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವದಕ್ಕೆ ಅಪ್ಪಣೆಯಾಗಲಿ; ಅನಂತರ ನಿನ್ನನ್ನು ಹಿಂಬಾಲಿಸುವೆನು ಅಂದನು. ಅದಕ್ಕೆ ಎಲೀಯನು - ಹೋಗು; ನಾನು ನಿನಗೆ ಮಾಡಿದ್ದೇನು ಎಂದು ಉತ್ತರಕೊಟ್ಟನು.


ಆಗ ಅವರು ತಿರಿಗಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟುಹೋದಳು; ರೂತಳಾದರೋ ಅತ್ತೆಯನ್ನೇ ಅಂಟಿಕೊಂಡಳು.


ಪ್ರಾಕೃತಮನುಷ್ಯನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯ ತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸಲಾರನು.


ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿದ್ದೀ; ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುವವು ಎಂದು ಹೇಳಿದನು.


ಆಗ ಸಮುವೇಲನು - ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು.


ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು ಅನುಗ್ರಹಿಸಲಿ ಎಂದು ಹೇಳಿ ಅವರನ್ನು ಮುದ್ದಿಟ್ಟಳು. ಆಗ ಅವರು ಗಟ್ಟಿಯಾಗಿ ಅತ್ತು -


ಇದಲ್ಲದೆ ಯೆಹೋವನು ಆರೋನನಿಗೆ - ನೀನು ಮೋಶೆಯನ್ನು ಎದುರುಗೊಳ್ಳುವದಕ್ಕೆ ಅರಣ್ಯಕ್ಕೆ ಹೊರಟುಹೋಗು ಎಂದು ಹೇಳಲಾಗಿ ಅವನು ಹೋಗಿ ದೇವರ ಬೆಟ್ಟದಲ್ಲೇ ಅವನನ್ನು ಎದುರುಗೊಂಡು ಮುದ್ದಿಟ್ಟನು.


ಆದರೆ ರಾತ್ರಿಯಲ್ಲಿ ದೇವರು ಅರಾಮ್ಯನಾದ ಲಾಬಾನನ ಕನಸಿನಲ್ಲಿ ಬಂದು - ನೋಡಿಕೋ, ನೀನು ಯಾಕೋಬನಿಗೆ ಏನೂ ಅನ್ನಬೇಡ ಎಂದು ಹೇಳಿದನು.


ಬೇತೇಲಿನಲ್ಲಿ ನಿನಗೆ ಕಾಣಿಸಿದ ದೇವರು ನಾನೇ; ಅಲ್ಲಿ ಕಂಬದ ಮೇಲೆ ಎಣ್ಣೆಹೊಯಿದು ನನಗೆ ಹರಕೆ ಮಾಡಿಕೊಂಡಿಯಷ್ಟೆ. ಈಗ ನೀನೆದ್ದು ಈ ದೇಶವನ್ನು ಬಿಟ್ಟು ನೀನು ಹುಟ್ಟಿದ ದೇಶಕ್ಕೆ ತಿರಿಗಿಹೋಗು ಎಂದು ಹೇಳಿದನು.


ಮತ್ತು ಯೆಹೋವನು ಅವನಿಗೆ - ನಿನ್ನ ತಂದೆತಾತಂದಿರ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು; ನಾನು ನಿನ್ನೊಂದಿಗೆ ಇರುವೆನು ಎಂದು ಹೇಳಿದನು.


ಲಾಬಾನನು ತನ್ನ ಸೋದರಳಿಯನು ಬಂದ ವರ್ತಮಾನವನ್ನು ಕೇಳಿದಾಗ ಅವನನ್ನು ಎದುರುಗೊಳ್ಳುವದಕ್ಕೆ ಓಡಿಬಂದು ಅಪ್ಪಿಕೊಂಡು ಮುದ್ದಿಟ್ಟು ತನ್ನ ಮನೆಗೆ ಕರಕೊಂಡು ಬಂದನು. ಯಾಕೋಬನು ಲಾಬಾನನಿಗೆ ಎಲ್ಲಾ ಸಂಗತಿಗಳನ್ನು ತಿಳಿಸಲು


ನಿಮಗೆ ಕೇಡುಮಾಡುವದಕ್ಕೆ ನನ್ನಲ್ಲಿ ಸಾಮರ್ಥ್ಯವುಂಟು; ಆದರೆ ಹೋದ ರಾತ್ರಿಯಲ್ಲಿ ನಿಮ್ಮ ತಂದೆಯ ದೇವರು - ಯಾಕೋಬನಿಗೆ ಏನೂ ಅನ್ನಬೇಡ ನೋಡಿಕೋ ಎಂದು ನನಗೆ ಎಚ್ಚರಿಸಿದನು.


ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು