Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 3:14 - ಕನ್ನಡ ಸತ್ಯವೇದವು J.V. (BSI)

14 ಆಗ ಯೆಹೋವದೇವರು ಸರ್ಪಕ್ಕೆ - ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಮೃಗಗಳಲ್ಲಿಯೂ ಶಾಪಗ್ರಸ್ತವಾದಿ; ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣೇ ತಿನ್ನುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆಗ ಯೆಹೋವನಾದ ದೇವರು ಸರ್ಪಕ್ಕೆ; “ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆಗ. ಸರ್ವೇಶ್ವರರಾದ ದೇವರು, ಇಂತೆಂದರು ಸರ್ಪಕ್ಕೆ: “ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶು ಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನೆ ಜೀವಮಾನ ಪರಿಯಂತ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆಗ ದೇವರಾದ ಯೆಹೋವನು ಹಾವಿಗೆ, “ನೀನು ಮಾಡಿದ ಈ ಕೆಟ್ಟಕಾರ್ಯದಿಂದ ನಿನಗೂ ಕೇಡುಗಳಾಗುತ್ತವೆ. ಬೇರೆಲ್ಲಾ ಪ್ರಾಣಿಗಳಿಗಿಂತಲೂ ನಿನಗೆ ಹೀನಸ್ಥಿತಿ ಉಂಟಾಗುವುದು. ನೀನು ಹೊಟ್ಟೆಯಿಂದಲೇ ತೆವಳಿಕೊಂಡು ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ, “ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ. ಇಂದಿನಿಂದ ನಿನ್ನ ಜೀವನ ಪೂರ್ತಿ ಹೊಟ್ಟೆಯಿಂದ ಹರಿದಾಡಿ, ಮಣ್ಣನ್ನು ತಿನ್ನುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 3:14
10 ತಿಳಿವುಗಳ ಹೋಲಿಕೆ  

ಹಾವಿನಂತೆ ದೂಳನ್ನು ನೆಕ್ಕುವರು; ನೆಲದಲ್ಲಿ ಹರಿದಾಡುವ ಕ್ರಿವಿುಕೀಟಗಳ ಹಾಗೆ ತಮ್ಮ ಗುಪ್ತಸ್ಥಳಗಳಿಂದ ನಡುಗುತ್ತಾ ಈಚೆಗೆ ಹೊರಡುವರು; ಯೆಹೋವನೆಂಬ ನಮ್ಮ ದೇವರಾದ ನಿನ್ನನ್ನು ಅಂಜುತ್ತಾ ಸಮೀಪಿಸಿ ನಿನಗೆ ಭಯಪಡುವರು.


ತೋಳವು ಕುರಿಯ ಸಂಗಡ ಮೇಯುವದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ಹಾವಿಗೆ ದೂಳೇ ಆಹಾರವಾಗುವದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡುಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.


ಅರಣ್ಯವಾಸಿಗಳು ಅವನಿಗೆ ಅಡ್ಡ ಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ.


ನೀನು ಕುಗ್ಗಿ ಭೂವಿುಯೊಳಗಿಂದ ಮಾತಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣಸ್ವರವಾಗಿ ಹೊರಡುವದು. ನಿನ್ನ ಧ್ವನಿಯು ಪ್ರೇತದ ಧ್ವನಿಯಂತೆ ನೆಲದೊಳಗಿಂದ ಬರುವದು, ನಿನ್ನ ನುಡಿಯು ದೂಳಿನೊಳಗಿಂದ ಲೊಚಗುಟ್ಟುವದು.


ನೀವು ಶುದ್ಧಾಶುದ್ಧ ಜಂತುಗಳನ್ನೂ ಪಕ್ಷಿಗಳನ್ನೂ ವಿವೇಚನೆಮಾಡಿ ನಾನು ಅಶುದ್ಧವೆಂದು ನಿರ್ಣಯಿಸಿರುವ ಯಾವ ಪಶುಪಕ್ಷಿ ಕ್ರಿವಿುಕೀಟಗಳಿಂದಲೂ ನಿಮ್ಮನ್ನು ಹೇಯಮಾಡಿಕೊಳ್ಳಬಾರದು.


ನರಹತ್ಯವು ಸಹೋದರ ಹತ್ಯವಲ್ಲವೇ. ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.


ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು - ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು ಸ್ತ್ರೀಯು -


ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ಭೂವಿುಯನ್ನು ಬಿಟ್ಟುಹೋಗಬೇಕೆಂದು ನಿನಗೆ ಶಾಪ ಬಂತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು