Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 25:2 - ಕನ್ನಡ ಸತ್ಯವೇದವು J.V. (BSI)

2 ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ವಿುದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆಕೆ ಅವನಿಗೆ; ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಕೆಯು ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 25:2
16 ತಿಳಿವುಗಳ ಹೋಲಿಕೆ  

ಜಿಮ್ರಿಯ ಎಲ್ಲಾ ಅರಸರು, ಏಲಾವಿುನ ಎಲ್ಲಾ ಅರಸರು,


ತೇಮಾನ್ಯನಾದ ಎಲೀಫಜನು ಶೂಹ್ಯನಾದ ಬಿಲ್ದದನು ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ - ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ ಅವನನ್ನು ಸಂತಯಿಸೋಣ ಬನ್ನಿರಿ ಎಂದು ಗೊತ್ತುಮಾಡಿಕೊಂಡು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.


ಹತವಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ವಿುದ್ಯಾನ್ಯರ ಐದು ಮಂದಿ ರಾಜರು ಇದ್ದರು. ಅದಲ್ಲದೆ ಬೆಯೋರನ ಮಗನಾದ ಬಿಳಾಮನನ್ನು ಕಡಿದುಬಿಟ್ಟರು.


ದನಗಳು ಅಡವಿಯ ಹುಲ್ಲನ್ನೆಲ್ಲಾ ಮೇದುಬಿಡುವಂತೆ ಈ ಸಮೂಹವು ನಮ್ಮನ್ನೂ ನಮ್ಮ ಸುತ್ತಲಿರುವ ಎಲ್ಲರನ್ನೂ ನಿರ್ಮೂಲಮಾಡುವ ಹಾಗಿದೆಯಲ್ಲವೇ ಎಂದು ಹೇಳಿದರು.


ವಿುದ್ಯಾನ್ಯರು ಯೋಸೇಫನನ್ನು ಐಗುಪ್ತದೇಶಕ್ಕೆ ತೆಗೆದುಕೊಂಡು ಹೋಗಿ ಫರೋಹನ ಬಳಿಯಲ್ಲಿದ್ದ ದೊಡ್ಡ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದರು; ಇವನು ಮೈಗಾವಲಿನವರ ದಳವಾಯಿ.


(ಅಷ್ಟರಲ್ಲಿ ವಿುದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು.) ಅವರು ಯೋಸೇಫನನ್ನು ಗುಂಡಿಯೊಳಗಿಂದ ಎತ್ತಿ ಆ ಇಷ್ಮಾಯೇಲ್ಯರಿಗೆ ಇಪ್ಪತ್ತು ರೂಪಾಯಿಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು.


ಹುಷಾಮನು ಸತ್ತ ಮೇಲೆ ಮೊವಾಬ್ಯರ ಬೈಲಿನಲ್ಲಿ ವಿುದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು; ಅವನ ರಾಜಧಾನಿಯ ಹೆಸರು ಅವೀತ್.


ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು.


ಯೊಕ್ಷಾನನು ಶೆಬಾ, ದೆದಾನ್ ಎಂಬಿವರನ್ನು ಪಡೆದನು. ಅಶ್ಯೂರ್ಯರೂ ಲೆಟೂಶ್ಯರೂ ಲೆಯುಮ್ಯರೂ ದೆದಾನನಿಂದ ಹುಟ್ಟಿದವರು.


ಅವರು ಮೊದಲು ವಿುದ್ಯಾನಿಗೂ ಆಮೇಲೆ ಪಾರಾನಿಗೂ ಬಂದರು. ಅಲ್ಲಿಂದ ಕೆಲವು ಮಂದಿ ಪಾರಾನಿನ ಜನರನ್ನು ತಮ್ಮ ಜೊತೆಯಲ್ಲಿ ಕರಕೊಂಡು ಐಗುಪ್ತದ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಅಶನವನ್ನು ನೇವಿುಸಿ ಮನೆಯನ್ನೂ ಭೂವಿುಯನ್ನೂ ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು