Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 24:26 - ಕನ್ನಡ ಸತ್ಯವೇದವು J.V. (BSI)

26 ಆ ಮನುಷ್ಯನು ಇದನ್ನು ಕೇಳಿ ಬೊಗ್ಗಿಕೊಂಡು ಯೆಹೋವನಿಗೆ ನಮಸ್ಕರಿಸಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆ ಮನುಷ್ಯನು ಇದನ್ನು ಕೇಳಿ ಅಡ್ಡಬಿದ್ದು ಯೆಹೋವನಿಗೆ ನಮಸ್ಕರಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಇದನ್ನು ಕೇಳಿದ ಆ ಮನುಷ್ಯ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆಗ ಆ ಸೇವಕನು ತಲೆಬಾಗಿ ಯೆಹೋವನನ್ನು ಆರಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಆಗ ಆ ಮನುಷ್ಯನು ತಲೆಬಾಗಿ ಯೆಹೋವ ದೇವರಿಗೆ ಅಡ್ಡಬಿದ್ದು ಆರಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 24:26
19 ತಿಳಿವುಗಳ ಹೋಲಿಕೆ  

ನನ್ನ ದಣಿಯಾದ ಅಬ್ರಹಾಮನ ದೇವರಾದ ಯೆಹೋವನಿಗೆ ಬೊಗ್ಗಿ ನಮಸ್ಕರಿಸಿ ಆತನು ನನ್ನ ದಣಿಯ ಮಗನಿಗೋಸ್ಕರ ಅವನ ತಮ್ಮನ ಮಗಳನ್ನೇ ತೆಗೆದುಕೊಳ್ಳುವಂತೆ ನನ್ನನ್ನು ನೀಟಾದ ದಾರಿಯಲ್ಲಿ ಕರೆದುಕೊಂಡು ಬಂದದ್ದಕ್ಕಾಗಿ ಆತನನ್ನು ಕೊಂಡಾಡಿದೆನು.


ಯೆಹೋವನು ತಮ್ಮನ್ನು ಕಟಾಕ್ಷಿಸಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತೆಗೆದುಕೊಂಡನೆಂಬದನ್ನು ಇಸ್ರಾಯೇಲ್ಯರು ಕೇಳಿದಾಗ ತಲೆಬಾಗಿ ನಮಸ್ಕರಿಸಿದರು.


ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವನಿಗೆ ಬೊಗ್ಗಿ ನಮಸ್ಕರಿಸಿದನು.


ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತದೇಶದಲ್ಲಿದ್ದ ಇಸ್ರಾಯೇಲ್ಯರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದದರಿಂದ ನಾವು ಯೆಹೋವನ ಪಸ್ಕವೆಂಬ ಈ ಯಜ್ಞಾಚಾರವನ್ನು ನಡಿಸುವದುಂಟು ಎಂದು ಹೇಳಬೇಕು ಅಂದನು.


ಆದದರಿಂದ ಸ್ವರ್ಗ ಮರ್ತ್ಯಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು


ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ, ಯಾವದನ್ನರ್ಪಿಸಿ ಮಹೋನ್ನತದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನೂ ಒಂದು ವರುಷದ ಕರುಗಳನ್ನೂ ತೆಗೆದುಕೊಂಡುಬಂದು ಆತನ ಮುಂದೆ ಕಾಣಿಸಿಕೊಳ್ಳಲೋ?


ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ.


ಅರಣ್ಯವಾಸಿಗಳು ಅವನಿಗೆ ಅಡ್ಡ ಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ.


ಸರ್ವಭೂನಿವಾಸಿಗಳು ನಿನಗೆ ಎರಗಿ ಭಜಿಸುತ್ತಾ ನಿನ್ನ ನಾಮವನ್ನು ಕೀರ್ತಿಸುವರು ಎಂದು ಬಿನ್ನೈಸಿರಿ. ಸೆಲಾ.


ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣುಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.


ಎಜ್ರನು ಪರಾತ್ಪರ ದೇವರಾದ ಯೆಹೋವನನ್ನು ಸ್ತುತಿಸಿದ್ದಕ್ಕೆ ಸರ್ವಜನರೂ ತಮ್ಮ ಕೈಗಳನ್ನೆತ್ತಿ ಆಮೆನ್, ಆಮೆನ್ ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಯೆಹೋವನನ್ನು ಆರಾಧಿಸಿದರು.


ಅರಸನಾದ ಹಿಜ್ಕೀಯನೂ ಪ್ರಭುಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಯೆಹೋವನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಲು ಅವರು ಉತ್ಸಾಹದಿಂದ ಸ್ತುತಿಸುತ್ತಾ ಬೊಗ್ಗಿಕೊಂಡು ನಮಸ್ಕರಿಸಿದರು.


ಆಗ ಯೆಹೋಷಾಫಾಟನು ನೆಲದ ಮಟ್ಟಿಗೂ ತಲೆಬಾಗಿಸಿದನು. ಎಲ್ಲಾ ಯೆಹೂದ್ಯರೂ ಯೆರೂಸಲೇವಿುನವರೂ ಯೆಹೋವನ ಮುಂದೆ ಅಡ್ಡ ಬಿದ್ದು ನಮಸ್ಕರಿಸಿದರು.


ತರುವಾಯ ದಾವೀದನು ನೆರೆದ ಸಭೆಯವರಿಗೆಲ್ಲಾ - ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ ಎಂದು ಹೇಳಲು ಸಮೂಹದವರೆಲ್ಲರೂ ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಸ್ತುತಿಸುತ್ತಾ ತಲೆಬಾಗಿ ಆತನನ್ನೂ ಅರಸನನ್ನೂ ನಮಸ್ಕರಿಸಿದರು.


ಮೋಶೆ ತ್ವರೆಪಟ್ಟು ನೆಲದಲ್ಲಿ ಅಡ್ದಬಿದ್ದು ನಮಸ್ಕರಿಸಿ -


ಅವನು ತನ್ನ ಸೇವಕರಿಗೆ - ನೀವು ಇಲ್ಲೇ ಕತ್ತೆಯ ಬಳಿಯಲ್ಲಿರ್ರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ತಿರಿಗಿ ಬರುತ್ತೇವೆ ಎಂದು ಹೇಳಿದನು.


ಹುಲ್ಲೂ ಮೇವೂ ನಮ್ಮಲ್ಲಿ ಬಹಳ ಉಂಟು, ಮತ್ತು ಇಳುಕೊಳ್ಳುವದಕ್ಕೆ ಸ್ಥಳವದೆ ಅಂದಳು.


ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು ಎಂದು ಹೇಳಿದಳು. ಆಮೇಲೆ ಅವರು ಯೆಹೋವನಿಗೆ ನಮಸ್ಕರಿಸಿದರು.


ಗಿದ್ಯೋನನು ಆ ಕನಸನ್ನೂ ಅದರ ಅರ್ಥವನ್ನೂ ಕೇಳಿದಾಗ ಯೆಹೋವನಿಗೆ ಅಡ್ಡಬಿದ್ದು ಇಸ್ರಾಯೇಲ್ಯರ ಪಾಳೆಯಕ್ಕೆ ಹಿಂದಿರುಗಿ ಬಂದು ಅವರಿಗೆ - ಏಳಿರಿ, ಯೆಹೋವನು ವಿುದ್ಯಾನ್ಯರ ಪಾಳೆಯವನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು