ಆದಿಕಾಂಡ 24:15 - ಕನ್ನಡ ಸತ್ಯವೇದವು J.V. (BSI)15 ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ವಿುಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವದನ್ನು ಕಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವುದನ್ನು ಕಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಆತನು ಹೀಗೆ ಹೇಳಿಕೊಳ್ಳುತ್ತಿರುವಾಗಲೇ ರೆಬೆಕ್ಕಳು ಹೆಗಲ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವುದನ್ನು ಕಂಡನು. ಆಕೆ, ಅಬ್ರಹಾಮನ ತಮ್ಮನಾದ ನಾಹೋರನಿಗೆ ಹೆಂಡತಿಯಾಗಿದ್ದ ಮಿಲ್ಕಳ ಮಗ ಬೆತೂವೇಲನ ಮಗಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಆ ಸೇವಕನು ಪ್ರಾರ್ಥನೆ ಮಾಡಿ ಮುಗಿಸುವುದಕ್ಕಿಂತ ಮೊದಲೇ ರೆಬೆಕ್ಕ ಎಂಬ ಯುವತಿಯು ಬಾವಿಯ ಬಳಿಗೆ ಬಂದಳು. ರೆಬೆಕ್ಕಳು ಬೆತೂವೇಲನ ಮಗಳು. ಬೆತೂವೇಲನು ಮಿಲ್ಕಳ ಮತ್ತು ನಾಹೋರನ ಮಗನು. ನಾಹೋರನು ಅಬ್ರಹಾಮನ ತಮ್ಮ. ರೆಬೆಕ್ಕಳು ತನ್ನ ಹೆಗಲ ಮೇಲೆ ನೀರಿನ ಕೊಡವನ್ನು ತೆಗೆದುಕೊಂಡು ಬಾವಿಗೆ ಬಂದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಅವನು ಹಾಗೆ ಹೇಳುವುದನ್ನು ಮುಗಿಸುವುದಕ್ಕಿಂತ ಮುಂಚೆ ಅಬ್ರಹಾಮನ ಸಹೋದರನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಾಳ ಮಗ ಬೆತೂಯೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲೆ ಇಟ್ಟುಕೊಂಡು ಹೊರಗೆ ಬಂದಳು. ಅಧ್ಯಾಯವನ್ನು ನೋಡಿ |