Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 24:14 - ಕನ್ನಡ ಸತ್ಯವೇದವು J.V. (BSI)

14 ನಾನು ಯಾವ ಹುಡುಗಿಗೆ - ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವದಕ್ಕೆ ಕೊಡು ಎಂದು ಹೇಳುವಾಗ - ನೀನು ಕುಡಿಯಬಹುದು, ಮತ್ತು ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ ಅನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇವಿುಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯವದೆ ಎಂದು ಇದರಿಂದ ನನಗೆ ಗೊತ್ತಾಗುವದು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಾನು ಯಾವ ಹುಡುಗಿಗೆ, ‘ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವುದಕ್ಕೆ ನೀರನ್ನು ಕೊಡು’ ಎಂದು ಹೇಳುವಾಗ, ‘ನೀನು ಕುಡಿಯಬಹುದು ಮತ್ತು ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ’ ಎನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇಮಿಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯೆಯಿದೆ ಎಂದು ಇದರಿಂದ ನನಗೆ ಗೊತ್ತಾಗುವುದು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನಾನು ಯಾವ ಹುಡುಗಿ಼ಗೆ ‘ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ಕುಡಿಯುವುದಕ್ಕೆ ಕೊಡು’ ಎಂದು ಹೇಳುವಾಗ ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ಕುಡಿಯ ಕೊಡುತ್ತೇನೆ’ ಎನ್ನುತ್ತಾಳೋ ಅವಳೇ ನಿಮ್ಮ ದಾಸ ಇಸಾಕನಿಗೆ ನೀವು ಚುನಾಯಿಸಿರುವ ಕನ್ಯೆಯಾಗಲಿ. ನನ್ನೊಡೆಯನ ಮೇಲೆ ನಿಮ್ಮ ದಯೆಯಿದೆ ಎಂದು ಇದರಿಂದ ಗೊತ್ತಾಗುವುದು,” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಇಸಾಕನಿಗೆ ಯೋಗ್ಯಳಾದ ಕನ್ಯೆಯನ್ನು ಕಂಡುಕೊಳ್ಳಲು ನಾನು ಒಬ್ಬಳಿಗೆ, ‘ದಯವಿಟ್ಟು ನಿನ್ನ ಕೊಡವನ್ನು ಕೆಳಗಿಳಿಸಿ ಕುಡಿಯಲು ನೀರು ಕೊಡು’ ಎನ್ನುವೆ. ಆಕೆ ನನಗೆ, ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ’ ಎಂದರೆ ಆಕೆಯೇ ನಿನ್ನಿಂದ ಆಯ್ಕೆಗೊಂಡ ಯೋಗ್ಯ ಕನ್ಯೆಯೆಂದೂ ನೀನು ನನ್ನ ಒಡೆಯನಿಗೆ ಕರುಣೆ ತೋರಿದೆಯೆಂದೂ ನಾನು ತಿಳಿದುಕೊಳ್ಳುವೆ” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನಾನು ಯಾವ ಹುಡುಗಿಗೆ, ‘ನೀರು ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು,’ ಎಂದು ಕೇಳಿಕೊಂಡಾಗ, ‘ನೀನೂ ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವುದಕ್ಕೆ ಕೊಡುತ್ತೇನೆ,’ ಎಂದು ಹೇಳುವಳೋ, ಆಕೆಯನ್ನೇ ನೀವು ನಿಮ್ಮ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದೀರಿ ಮತ್ತು ಯಜಮಾನನಿಗೆ ದಯೆ ತೋರಿಸಿದ್ದೀರಿ, ಎಂದು ಇದರಿಂದ ನಾನು ತಿಳಿದುಕೊಳ್ಳುವೆನು,” ಎಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 24:14
22 ತಿಳಿವುಗಳ ಹೋಲಿಕೆ  

ಇಗೋ, ನಾನು ಕಣದಲ್ಲಿ ಕುರಿಯ ತುಪ್ಪಟವನ್ನು ಇಡುತ್ತೇನೆ, ಅದರಲ್ಲಿ ಮಾತ್ರ ಮಂಜುಬಿದ್ದು ನೆಲವೆಲ್ಲಾ ಒಣಗಿದ್ದರೆ ನೀನು ಹೇಳಿದಂತೆಯೇ ಇಸ್ರಾಯೇಲ್ಯರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೆಂದು ತಿಳಿಯುವೆನು ಎಂಬದಾಗಿ ವಿಜ್ಞಾಪಿಸಿದನು.


ಅವನು ಆತನಿಗೆ - ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ತಾವು ಸ್ವಾವಿುಯವರೇ ಆಗಿದ್ದೀರೆಂಬದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು.


ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳುಕೊಳ್ಳುವದು ಹೇಗೆ ಎಂದು ಕೇಳಿದನು.


ಮನೆಮಾರೂ ಆಸ್ತಿಪಾಸ್ತಿಯೂ ಪಿತೃಗಳಿಂದ ದೊರಕುವವು; ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.


ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದುಕೊಂಡು ಅವರ ಮೇಲೆ ಬೀಳು ಅಂದನು.


ಆಗ ಅವರು ಅವನಿಗೆ - ದಯವಿಟ್ಟು ನಮ್ಮ ಪ್ರಯಾಣವು ಸಫಲವಾಗುವದೋ ಇಲ್ಲವೋ ಎಂಬದನ್ನು ದೇವರ ಸನ್ನಿಧಿಯಲ್ಲಿ ವಿಚಾರಿಸು ಎಂದು ಬೇಡಿಕೊಳ್ಳಲು


ಅವನು ಅಮಾಸನನ್ನು - ಸಹೋದರನೇ, ಕ್ಷೇಮವೋ ಎಂದು ಕೇಳಿ ಮುದ್ದಿಡುವದಕ್ಕೋಸ್ಕರವೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು


ಅವನು ಆಗಲಿ ಎಂದರೆ ನಿನ್ನ ಸೇವಕನಾದ ನಾನು ಸುರಕ್ಷಿತನಾಗಿರುವೆನು; ಸಿಟ್ಟುಮಾಡಿದರೆ ಅವನಿಂದ ನನಗೆ ಕೇಡು ಸಿದ್ಧವಾಗಿದೆಂದು ತಿಳಿದುಕೋ.


ಅವಳು - ಕುಡಿಯಪ್ಪಾ ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ ಅನ್ನುವಳೋ, ಅವಳೇ ಯೆಹೋವನಿಂದ ನನ್ನ ದಣಿಯ ಮಗನಿಗೆ ನೇಮಕವಾದ ಕನ್ನಿಕೆಯಾಗಿರಲಿ ಅಂದೆನು.


ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ.


ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ವಿುಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವದನ್ನು ಕಂಡನು.


ಆಕೆ - ಕುಡಿಯಪ್ಪಾ ಎಂದು ಹೇಳಿ ತತ್‍ಕ್ಷಣವೇ ಕೊಡವನ್ನು ತನ್ನ ಕೈಯ ಮೇಲೆ ಇಳಿಸಿ ಕುಡಿಯಕೊಟ್ಟಳು.


ನೀರು ಕುಡಿಸಿದ ಮೇಲೆ - ನಾನು ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರು ತಂದುಕೊಡುತ್ತೇನೆ ಎಂದು ಹೇಳಿ


ನೀನು ದಯವಿಟ್ಟು ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವದಕ್ಕೆ ಕೊಡಮ್ಮಾ ಎಂದು ನಾನು ಹೇಳುವಾಗ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು