Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 22:11 - ಕನ್ನಡ ಸತ್ಯವೇದವು J.V. (BSI)

11 ಕೈಚಾಚಿ ಕತ್ತಿಯನ್ನು ಹಿಡಿದುಕೊಳ್ಳಲು ಯೆಹೋವನ ದೂತನು ಆಕಾಶದೊಳಗಿಂದ - ಅಬ್ರಹಾಮನೇ, ಅಬ್ರಹಾಮನೇ ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು - ಇಗೋ, ಇದ್ದೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆಗ ಯೆಹೋವನ ದೂತನು ಆಕಾಶದೊಳಗಿನಿಂದ, “ಅಬ್ರಹಾಮನೇ, ಅಬ್ರಹಾಮನೇ” ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ, ಇದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆದರೆ ಸರ್ವೇಶ್ವರನ ದೂತನು ಆಕಾಶದಿಂದ, "ಅಬ್ರಹಾಮನೇ, ಹೇ ಅಬ್ರಹಾಮನೇ" ಎಂದು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ ಸಿದ್ಧನಿದ್ದೇನೆ” ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಯೆಹೋವನ ದೂತನು ಪರಲೋಕದಿಂದ, “ಅಬ್ರಹಾಮನೇ, ಅಬ್ರಹಾಮನೇ!” ಎಂದು ಕರೆದನು. ಅಬ್ರಹಾಮನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆಗ ಯೆಹೋವ ದೇವರ ದೂತನು ಆಕಾಶದೊಳಗಿಂದ, “ಅಬ್ರಹಾಮನೇ, ಅಬ್ರಹಾಮನೇ,” ಎಂದು ಅವನನ್ನು ಕರೆದನು. ಅವನು, “ಇಲ್ಲಿ ಇದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 22:11
21 ತಿಳಿವುಗಳ ಹೋಲಿಕೆ  

ನೋಡುವದಕ್ಕೆ ಅವನು ದಾರಿ ಬಿಟ್ಟದ್ದನ್ನು ಯೆಹೋವನು ಕಂಡನು. ದೇವರು ಆ ಪೊದೆಯೊಳಗಿಂದ - ಮೋಶೆಯೇ, ಮೋಶೆಯೇ ಎಂದು ಕರೆದನು. ಅದಕ್ಕವನು - ಇಗೋ, ಇದ್ದೇನೆ ಅಂದನು.


ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು; ದೇವದೂತನು ಆಕಾಶದಿಂದ ಹಾಗರಳನ್ನು ಕರೆದು - ಹಾಗರಳೇ, ನಿನಗೇನಾಯಿತು? ಅಂಜಬೇಡ; ಆ ಹುಡುಗನು ಬಿದ್ದಿರುವ ಸ್ಥಳದಿಂದಲೇ ಅವನ ಶಬ್ದವು ದೇವರಿಗೆ ಕೇಳಿಸಿತು;


ನಾವೆಲ್ಲರು ನೆಲಕ್ಕೆ ಬೀಳಲು - ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು ಕೇಳಿದೆನು.


ಅವನು ನೆಲಕ್ಕೆ ಬಿದ್ದು - ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ ಎಂದು ಹೇಳುವ ವಾಣಿಯನ್ನು ಕೇಳಿದನು.


ಅವಳು ಮರಳುಕಾಡಿನಲ್ಲಿ ಶೂರಿನ ಮಾರ್ಗದ ಒರತೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು -


ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆ ಸಮುವೇಲನೇ, ಸಮುವೇಲನೇ ಅಂದನು. ಸಮುವೇಲನು - ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ ಎಂದನು.


ಯೆಹೋವನು ನುಡಿದದ್ದನ್ನು ಕೇಳು; ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು;


ಆ ದೂತನು ಅವನಿಗೆ - ನಿನ್ನ ಹುಡುಗನ ಮೇಲೆ ಕೈಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು ಎಂದು ಹೇಳಿದನು.


ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರಿಶೋಧಿಸಿದನು. ಹೇಗಂದರೆ ಆತನು ಅವನನ್ನು - ಅಬ್ರಹಾಮನೇ ಎಂದು ಕರೆಯಲು ಅವನು - ಇಗೋ, ಇದ್ದೇನೆ ಅಂದನು.


ನೀನೆದ್ದು ಅವನನ್ನು ಎತ್ತಿಕೊಂಡು ಕೈಬಿಡದೆ ಇರು; ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು ಎಂದು ಹೇಳಿದನು.


ಆದರೆ ತನ್ನ ಮಗನನ್ನು ವಧಿಸುವದಕ್ಕೆ ಅವನು


ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ದೇಶದಿಂದಲೂ ನನ್ನನ್ನು ಕರತಂದು - ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನೆಂದು ಪ್ರಮಾಣಮಾಡಿ ಹೇಳಿದ ಪರಲೋಕದೇವರಾದ ಯೆಹೋವನು ನಿನ್ನ ಮುಂದೆ ತನ್ನ ದೂತನನ್ನು ಕಳುಹಿಸಿ ನೀನು ಅಲ್ಲಿಂದ ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಳ್ಳುವಂತೆ ಅನುಕೂಲಮಾಡುವನು.


ಆ ಕನಸಿನಲ್ಲಿ ದೇವದೂತನು - ಯಾಕೋಬನೇ ಎಂದು ಕರೆಯಲು ನಾನು - ಇದ್ದೇನೆ ಎಂದು ಹೇಳಿದಾಗ


ಅಲ್ಲಿ ದೇವರು ರಾತ್ರಿಯ ಸ್ವಪ್ನದಲ್ಲಿ ಇಸ್ರಾಯೇಲನನ್ನು - ಯಾಕೋಬನೇ, ಯಾಕೋಬನೇ ಎಂದು ಕರೆಯಲು, ಅವನು - ಇದ್ದೇನೆ ಅಂದನು.


ನನ್ನನ್ನು ಎಲ್ಲಾ ಕೇಡುಗಳಿಂದ ತಪ್ಪಿಸಿ ಕಾಪಾಡುತ್ತಾ ಬಂದ ದೂತನಾಗಿಯೂ ಇರುವಾತನು ಈ ಹುಡುಗರನ್ನು ಆಶೀರ್ವದಿಸಲಿ; ಇವರು ನನ್ನ ಹೆಸರನ್ನೂ ನನ್ನ ಪಿತೃಗಳಾದ ಅಬ್ರಹಾಮ್ ಇಸಾಕರ ಹೆಸರುಗಳನ್ನೂ ಮುಂದಕ್ಕೆ ತರಲಿ; ಇವರು ಭೂವಿುಯ ಮೇಲೆ ಹೆಚ್ಚಿ ಬಹುಸಂತಾನವನ್ನು ಪಡೆಯಲಿ ಅಂದನು.


ಅಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಯೆಹೋವನ ದೂತನು ಅವನಿಗೆ ಕಾಣಿಸಿಕೊಂಡನು. ಹೇಗಂದರೆ ಅವನು ಒಂದು ಮುಳ್ಳಿನ ಪೊದೆಯನ್ನು ಕಂಡನು ಆ ಪೊದೆಯು ಬೆಂಕಿಯಿಂದ ಉರಿಯುತ್ತಿದ್ದರೂ ಅದು ಸುಟ್ಟುಹೋಗದೆ ಇತ್ತು.


ಯೋಸೇಫನಿಗೆ - ನಿನ್ನ ಅಣ್ಣಂದಿರು ಶೆಕೆವಿುನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರಲ್ಲಾ; ಅವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ ಬಾ ಎಂದು ಹೇಳಲು ಅವನು - ಇಗೋ ಇದ್ದೇನೆ ಅಂದನು.


ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀವಿುಗೆ ಬಂದು ಇಸ್ರಾಯೇಲ್ಯರಿಗೆ - ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರತಂದೆನು. ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವದಿಲ್ಲವೆಂದು ನಾನು ಮಾತು ಕೊಟ್ಟಾಗ -


ಯೆಹೋವನು ಸಮುವೇಲನನ್ನು ಕರೆದನು; ಸಮುವೇಲನು ಬಂದೆನೆಂದು ಉತ್ತರಕೊಟ್ಟು ಒಡನೆ ಏಲಿಯ ಬಳಿಗೆ ಹೋಗಿ -


ಆಗ, ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಕೇಳಿ, ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು