Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 10:7 - ಕನ್ನಡ ಸತ್ಯವೇದವು J.V. (BSI)

7 ಕೂಷನ ಸಂತಾನದವರು - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬ ಜನಾಂಗಗಳು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬ ಜನಾಂಗಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕೂಷನ ಸಂತಾನದವರು ಯಾರೆಂದರೆ - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬವರು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬುವವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಕೂಷನ ಮಕ್ಕಳು - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬ ಜನಾಂಗಗಳು. ರಗ್ಮ ಸಂತಾನದವರು -‍ ಶೆಬಾ, ದೆದಾನ್ ಎಂಬ ಜನಾಂಗಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಕೂಷನ ಗಂಡುಮಕ್ಕಳು: ಸೆಬಾ, ಹವೀಲ, ಸಬ್ತಾ, ರಗ್ಮ ಮತ್ತು ಸಬ್ತಕಾ. ರಗ್ಮನ ಗಂಡುಮಕ್ಕಳು: ಶೆಬಾ ಮತ್ತು ದೆದಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಕೂಷನ ಪುತ್ರರು: ಸೆಬ, ಹವೀಲ, ಸಬ್ತಾ, ರಾಮ, ಸಬ್ತೆಕ. ರಾಮನ ಪುತ್ರರು: ಶೆಬಾ ಮತ್ತು ದೆದಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 10:7
11 ತಿಳಿವುಗಳ ಹೋಲಿಕೆ  

ಶೆಬದವರೂ ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ ಕನಕ ಮುಖ್ಯ ಮುಖ್ಯ ಸುಗಂಧದ್ರವ್ಯ ಸಮಾಸ್ತಾಮೂಲ್ಯರತ್ನ ಈ ಸರಕುಗಳನ್ನು ನಿನಗೋಸ್ಕರ ತಂದರು.


ದೇದಾನಿನವರು ನಿನ್ನ ವರ್ತಕರು; ಬಹು ದ್ವೀಪಗಳ ಉತ್ಪತ್ತಿಯು ನಿನ್ನ ಕೈಗೆ ಸೇರಿತು; ಗಜದಂತಗಳನ್ನೂ ಕರೀಮರವನ್ನೂ ನಿನಗೆ ಕಪ್ಪವಾಗಿ ಸಲ್ಲಿಸಿದರು.


ಅರಬಿಯ ವಿಷಯವಾದ ದೈವೋಕ್ತಿ. ಸಾರ್ಥವಾಹರಾದ ದೇದಾನ್ಯರೇ, ಮರುಭೂವಿುಯ ಪೊದೆಗಳಲ್ಲಿ ಇಳಿದುಕೊಳ್ಳಿರಿ.


ತಾರ್ಷೀಷ್‍ಪ್ರಾಂತದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ.


ಯೆಹೋವನಾಮ ಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು ಶೆಬದ ರಾಣಿಯು ಕೇಳಿ ಅವನನ್ನು ಒಗಟುಗಳಿಂದ ಪರೀಕ್ಷಿಸುವದಕ್ಕೆ ಬಂದಳು.


ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವದು.


ಕೂಷನು ನಿಮ್ರೋದನನ್ನು ಪಡೆದನು. ಅವನು ಪರಾಕ್ರಮದಿಂದ ಮೊದಲನೆಯ ಭೂರಾಜನಾದನು.


ಕೂಷನ ಸಂತಾನದವರು - ಸೆಬ, ಹವೀಲ, ಸಬ್ತ, ರಮ್ಮ, ಸಬ್ತೆಕ ಎಂಬವರು. ರಮ್ಮ ಸಂತಾನದವರು - ಶೆಬ, ದೆದಾನ್ ಎಂಬ ಜನಾಂಗಗಳು.


ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು; ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು; ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ ಎಂದು ಹೇಳಿದನು.


ಯೆಹೋವನೆಂಬ ನಾನು ನಿನ್ನ ದೇವರಾಗಿದ್ದೇನಷ್ಟೆ, ಇಸ್ರಾಯೇಲ್ಯರ ಸದಮಲಸ್ವಾವಿುಯಾದ ನಾನು ನಿನ್ನ ರಕ್ಷಕನು. ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನಗೆ ಬದಲಾಗಿ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ.


ದೆದಾನಿನವರು ಹಲ್ಲಣಕ್ಕೆ ಸರಿಯಾದ ಒಳ್ಳೆಯ ಜಮಖಾನೆಗಳನ್ನು ನಿನಗೋಸ್ಕರ ತರುವ ವ್ಯಾಪಾರಿಗಳಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು