Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 10:11 - ಕನ್ನಡ ಸತ್ಯವೇದವು J.V. (BSI)

11 ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅವನು ಆ ನಾಡಿನಿಂದ ಹೊರಟು ಅಸ್ಸೀರಿಯಾ ನಾಡಿಗೆ ಬಂದು ನಿನೆವೆ, ರಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11-12 ನಿಮ್ರೋದನು ಅಶ್ಶೂರಕ್ಕೂ ಹೋದನು. ಅಶ್ಶೂರದಲ್ಲಿ ನಿನೆವೆ, ರೆಹೋಬೋತೀರ್, ಕೆಲಹ ಮತ್ತು ರೆಸೆನ್ ಎಂಬ ಪಟ್ಟಣಗಳನ್ನು ಕಟ್ಟಿದನು. ರೆಸೆನ್ ಪಟ್ಟಣವು ನಿನೆವೆಗೂ ದೊಡ್ಡಪಟ್ಟಣವಾದ ಕೆಲಹಕ್ಕೂ ಮಧ್ಯದಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆ ದೇಶದಿಂದ ಅವನು ಅಸ್ಸೀರಿಯಕ್ಕೆ ಹೋಗಿ ನಿನೆವೆ, ರೆಹೋಬೋತೀರ್, ಕೆಲಹ ಪಟ್ಟಣಗಳನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 10:11
17 ತಿಳಿವುಗಳ ಹೋಲಿಕೆ  

ಅವರ ಕತ್ತಿಯು ಅಶ್ಶೂರ ದೇಶವನ್ನು ತಿಂದುಬಿಡುವದು, ನಿಮ್ರೋದ್ ಸೀಮೆಯ ಪ್ರವೇಶಸ್ಥಾನಗಳು ಅವರ ಖಡ್ಗಕ್ಕೆ ತುತ್ತಾಗುವವು; ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ ನಮ್ಮ ಪ್ರಾಂತವನ್ನು ತುಳಿದುಹಾಕುವಾಗ [ಆ ಸಮಾಧಾನಪ್ರದನು] ನಮ್ಮನ್ನು ಅವರ ಕೈಯೊಳಗಿಂದ ಉದ್ಧರಿಸುವನು.


ನಿನೆವೆಯ ವಿಷಯವಾದ ದೈವೋಕ್ತಿ. ಎಲ್ಕೋಷ್ ಊರಿನ ನಹೂಮನಿಗೆ ಆದ ದೈವದರ್ಶನದ ಗ್ರಂಥ.


ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸು; ಅದರ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ ಎಂದು ಅಪ್ಪಣೆಮಾಡಿದನು.


ಅಶ್ಯೂರ್ಯರೂ ಇವರೊಡನೆ ಕೂಡಿಕೊಂಡು ಲೋಟನ ವಂಶದವರಿಗೆ ಭುಜವಾಗಿದ್ದಾರೆ. ಸೆಲಾ.


ಯೆಹೋವನು ಬಡಗಲಿಗೆ ಕೈಚಾಚಿ ಅಶ್ಶೂರವನ್ನು ಧ್ವಂಸಪಡಿಸುವನು; ನಿನೆವೆಯನ್ನು ಹಾಳುಮಾಡಿ ಮರುಭೂವಿುಯಂತೆ ಒಣಗಿಸಿಬಿಡುವನು.


ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ - ನಿನೆವೆಯೂ ಹಾಳಾಯಿತಲ್ಲಾ, ಯಾರು ಗೋಳಾಡಾರು, ನಿನ್ನನ್ನು ಸಂತೈಸತಕ್ಕವರು ನನಗೆ ಎಲ್ಲಿ ಸಿಕ್ಕಾರು ಅಂದುಕೊಳ್ಳುವನು.


ಪುರಾತನಕಾಲದಿಂದ ನಿನೆವೆಯು ನೀರು ತುಂಬಿದ ಕೆರೆಯಂತೆ ಇರುತ್ತದೆ; ಆಹಾ, [ಒಡೆದು ಓಡುವ ನೀರಿನಂತೆ ಅದರ ನಿವಾಸಿಗಳು] ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ [ಎಂದು ಅಪ್ಪಣೆಯಾದರೂ] ಯಾರೂ ಹಿಂದೆ ನೋಡರು.


ಅಶ್ಶೂರವು ನಮ್ಮನ್ನು ರಕ್ಷಿಸುವದೆಂದು ನಂಬೆವು; [ಐಗುಪ್ತದ] ಕುದುರೆಗಳನ್ನು ಹತ್ತೆವು; ನಮ್ಮ ಕೈಕೆಲಸದ ಬೊಂಬೆಗಳಿಗೆ - ನೀವು ನಮ್ಮ ದೇವರುಗಳು ಎಂದು ಇನ್ನು ಹೇಳೆವು; ನೀನೇ ಅನಾಥರನ್ನು ಕರುಣಿಸುವಿ ಎಂಬದಾಗಿ ಅರಿಕೆಮಾಡಿಕೊಳ್ಳಿರಿ.


ಅಶ್ಶೂರವೂ ಅದರ ಜನ ಯಾವತ್ತೂ ಅಲ್ಲಿರುತ್ತವೆ; ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗಹತರು;


ಹಾರಾನ್ ಕನ್ನೆ ಎದೆನ್ ಸ್ಥಳಗಳವರೂ ಶೆಬ ಅಶ್ಶೂರ್‍ಕಿಲ್ಮದ್ ಪ್ರಾಂತಗಳ ವರ್ತಕರೂ


ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.


ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು ಅವರಿಗೆ - ನಿಮ್ಮೊಡನೆ ಕಟ್ಟುವದಕ್ಕೆ ನಮಗೂ ಅಪ್ಪಣೆಯಾಗಲಿ; ಯಾಕಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರಾಗಿದ್ದೇವೆ; ನಮ್ಮನ್ನು ಇಲ್ಲಿ ತಂದಿರಿಸಿದ ಅಶ್ಶೂರದ ಅರಸನಾದ ಏಸರ್ಹದ್ದೋನನ ಕಾಲದಿಂದ ನಾವು ಆತನಿಗೇ ಯಜ್ಞಾರ್ಪಣೆಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.


ಆಗ ಅವರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.


ಕಿತ್ತೀಮೆಂಬ ಸ್ಥಳದಿಂದ ಜನರು ಹಡಗುಗಳಲ್ಲಿ ಬಂದು ಅಶ್ಯೂರ್ಯರನ್ನೂ ಏಬೆರ್ ಜನರನ್ನೂ ಸೋಲಿಸುವರು; ಅವರಿಗೂ ನಾಶವುಂಟಾಗುವದು ಅಂದನು.


ಆದರೂ ಕೇನ್ಯರೂ ನಾಶವಾಗುವರು. ಅದು ಎಷ್ಟು ದೂರ ಅನ್ನುತ್ತೀರೋ? ಅಶ್ಯೂರ್ಯರೇ ನಿಮ್ಮನ್ನು ಸೆರೆಹಿಡಿದುಕೊಂಡು ಹೋಗುವರು.


ನಿನೆವೆಗೂ ಕೆಲಹಕ್ಕೂ ನಡುವೆ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ಇವೆಲ್ಲಾ ಒಟ್ಟಾಗಿ ಮಹಾ ಪಟ್ಟಣವೆಂದು ಪ್ರಸಿದ್ಧವಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು