Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 9:10 - ಕನ್ನಡ ಸತ್ಯವೇದವು J.V. (BSI)

10 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಶವಸೋಂಕಿದದರಿಂದ ಅಶುದ್ಧರಾದವರೂ ದೂರ ಪ್ರಯಾಣದಲ್ಲಿರುವವರೂ ಕೂಡ ಯೆಹೋವನ ಆಜ್ಞಾನುಸಾರ ಪಸ್ಕಹಬ್ಬವನ್ನು ಆಚರಿಸಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನಿಮ್ಮಲ್ಲಿಯಾಗಲಿ, ನಿಮ್ಮ ಸಂತತಿಯವರಲ್ಲಿಯಾಗಲಿ ಶವ ಸೋಂಕಿನಿಂದ ಅಶುದ್ಧರಾದವರೂ ಅಥವಾ ದೂರ ಪ್ರಯಾಣದಲ್ಲಿರುವವರೂ ಯೆಹೋವನ ಆಜ್ಞಾನುಸಾರ ಪಸ್ಕಹಬ್ಬವನ್ನು ಆಚರಿಸಲೇಬೇಕು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು - ‘ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಾಗಲಿ ಶವ ಸೋಂಕಿದುದರಿಂದ ಅಶುದ್ಧರಾದವರು ಮಾತ್ರವಲ್ಲ ದೂರ ಪ್ರಯಾಣದಲ್ಲಿರುವವರು ಕೂಡ ಸರ್ವೇಶ್ವರನ ಆಜ್ಞಾನುಸಾರ ಪಾಸ್ಕ ಹಬ್ಬವನ್ನು ಆಚರಿಸಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಮನುಷ್ಯಶವ ಸೋಂಕಿದ್ದರಿಂದ ಅಶುದ್ಧರಾದವರೂ ದೂರಪ್ರಯಾಣದಲ್ಲಿರುವವರೂ ಸಹ ಯೆಹೋವನ ಪಸ್ಕಹಬ್ಬವನ್ನು ಆಚರಿಸಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನೀನು ಇಸ್ರಾಯೇಲರಿಗೆ, “ನಿಮ್ಮಲ್ಲಿಯೂ, ನಿಮ್ಮ ಸಂತತಿಯಲ್ಲಿಯೂ ಯಾವನಾದರೂ ಶವದ ಸೋಂಕಿನಿಂದ ಅಶುದ್ಧನಾಗಿದ್ದರೂ, ಇಲ್ಲವೆ ದೂರ ಪ್ರಯಾಣದಲ್ಲಿದ್ದರೂ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 9:10
15 ತಿಳಿವುಗಳ ಹೋಲಿಕೆ  

ಪ್ರತಿಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.


ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.


ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ ಬಹು ಜನರು ತಮ್ಮನ್ನು ಶುದ್ಧಿಮಾಡಿಕೊಳ್ಳುವದಕ್ಕಾಗಿ ಹಬ್ಬಕ್ಕಿಂತ ಮುಂಚೆ ಹಳ್ಳಿಗಳಿಂದ ಯೆರೂಸಲೇವಿುಗೆ ಬಂದರು.


ಆಗ ಯೆಹೋವನು ಮೋಶೆಗೆ ಹೇಳಿದ್ದೇನಂದರೆ -


ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೇವೇಳೆಯಲ್ಲಿ ಅದನ್ನು ಆಚರಿಸಬೇಕು. ಆ ಪಶುವಿನ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಂಗಡ ಊಟಮಾಡಬೇಕು.


ಯಾಜಕರಲ್ಲಿ ತಕ್ಕಷ್ಟು ಮಂದಿ ತಮ್ಮನ್ನು ಶುದ್ಧಪಡಿಸಿಕೊಂಡಿರಲಿಲ್ಲವಾದದರಿಂದಲೂ ಜನರು ಯೆರೂಸಲೇವಿುನಲ್ಲಿ ಇನ್ನೂ ಕೂಡಿರಲಿಲ್ಲವಾದದರಿಂದಲೂ ಕೂಡಲೆ ಪಸ್ಕವನ್ನು ಆಚರಿಸಲಾಗದೆಂದು ಅರಸನೂ ಅವನ ಸರದಾರರೂ ಯೆರೂಸಲೇವಿುನ ಸರ್ವಸಂಘದವರೂ ತಿಳಿದು


ಜನರಲ್ಲಿ ಅನೇಕಾನೇಕರು ಅಂದರೆ ಹೆಚ್ಚಾಗಿ ಎಫ್ರಾಯೀಮ್ ಮನಸ್ಸೆ ಇಸ್ಸಾಕಾರ್ ಜೆಬುಲೂನ್ ಪ್ರಾಂತಗಳವರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ ಪಸ್ಕಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು - ಯೆಹೋವನೇ, ದಯಾಪರನಾದ ದೇವರೇ, ದೇವಾಲಯಯಾತ್ರಿಕರಿಗಿರಬೇಕಾದ ಪರಿಶುದ್ಧತ್ವವು ಅನೇಕರಲ್ಲಿ ಇಲ್ಲದಿದ್ದರೂ


ಹೀಗೆ ಅನೇಕಾನೇಕ ಜನರು ಎರಡನೆಯ ತಿಂಗಳಿನಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನಾಚರಿಸುವದಕ್ಕಾಗಿ ಯೆರೂಸಲೇವಿುನಲ್ಲಿ ಕೂಡಿದರು; ಆ ಕೂಟವು ಮಹಾಸಮೂಹವಾಗಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು