ಅರಣ್ಯಕಾಂಡ 7:3 - ಕನ್ನಡ ಸತ್ಯವೇದವು J.V. (BSI)3 ಇಬ್ಬರಿಬ್ಬರು ಒಂದು ಕಮಾನುಬಂಡಿಯನ್ನೂ ಒಂದು ಜೋಡಿ ಎತ್ತುಗಳನ್ನೂ ಅಂತು ಆರು ಬಂಡಿಗಳನ್ನೂ ಆರು ಜೋಡಿ ಎತ್ತುಗಳನ್ನೂ ದೇವದರ್ಶನದ ಗುಡಾರದ ಮುಂದೆ ಯೆಹೋವನ ಸನ್ನಿಧಿಗೆ ತಂದು ಒಪ್ಪಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವರು ಆರು ಕಮಾನು ಬಂಡಿಯನ್ನೂ ಮತ್ತು ಹನ್ನೆರಡು ಎತ್ತುಗಳನ್ನೂ ಯೆಹೋವನ ಸನ್ನಿಧಿಗೆ ಕಾಣಿಕೆಯಾಗಿ ತಂದರು. ನಾಯಕರಾದ ಇಬ್ಬರಿಬ್ಬರೂ ಒಂದು ಕಮಾನು ಬಂಡಿಯನ್ನೂ, ಪ್ರತಿ ನಾಯಕನು ಒಂದು ಜೋಡಿ ಎತ್ತನ್ನೂ, ದೇವದರ್ಶನ ಗುಡಾರದ ಮುಂದೆ ತಂದರು. ಹೀಗೆ ಆರು ಜೊತೆ ಬಂಡಿ ಆರು ಜೊತೆ ಎತ್ತುಗಳನ್ನು ತಂದು ಅರ್ಪಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇಬ್ಬರಿಬ್ಬರು ಒಂದು ಕಮಾನು ಬಂಡಿಯನ್ನೂ ಒಂದು ಜೊತೆ ಎತ್ತುಗಳನ್ನೂ ಅಂತು ಆರು ಬಂಡಿಗಳನ್ನೂ ಆರು ಜೊತೆ ಎತ್ತುಗಳನ್ನೂ ದೇವದರ್ಶನದ ಗುಡಾರದ ಮುಂದೆ ಸರ್ವೇಶ್ವರನ ಸನ್ನಿಧಿಗೆ ತಂದು ಅರ್ಪಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಗೋತ್ರಪ್ರಧಾನರು ಮುಂದೆ ಬಂದು, ತಮ್ಮ ಕಾಣಿಕೆಗಳನ್ನು ಸಮರ್ಪಿಸಿದರು. ಇಬ್ಬಿಬ್ಬರು ಆರು ಕಮಾನು ಬಂಡಿಗಳನ್ನೂ ಅವುಗಳನ್ನು ಎಳೆಯುವುದಕ್ಕೆ ಆರು ಜೊತೆ ಎತ್ತುಗಳನ್ನೂ ಕೊಟ್ಟರು. ಪ್ರಧಾನರು ಇವುಗಳನ್ನು ಪವಿತ್ರಗುಡಾರದಲ್ಲಿ ಯೆಹೋವನಿಗೆ ಒಪ್ಪಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು. ಅಧ್ಯಾಯವನ್ನು ನೋಡಿ |