ಅರಣ್ಯಕಾಂಡ 6:14 - ಕನ್ನಡ ಸತ್ಯವೇದವು J.V. (BSI)14 ಸರ್ವಾಂಗಹೋಮಕ್ಕಾಗಿ ಪೂರ್ಣಾಂಗವಾದ ಒಂದು ವರುಷದ ಟಗರು, ದೋಷಪರಿಹಾರಕಯಜ್ಞಕ್ಕಾಗಿ ಪೂರ್ಣಾಂಗವಾದ ಒಂದು ವರುಷದ ಕುರಿ, ಸಮಾಧಾನಯಜ್ಞಕ್ಕಾಗಿ ಪೂರ್ಣಾಂಗವಾದ ಟಗರು ಇವೇ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆಗಳು ಯಾವುವೆಂದರೆ: ಅವನು ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಒಂದು ವರ್ಷದ ಟಗರಿನ ಮರಿಯನ್ನು, ದೋಷಪರಿಹಾರ ಯಜ್ಞಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಒಂದು ವರ್ಷದ ಹೆಣ್ಣು ಕುರಿಮರಿಯನ್ನು, ಸಮಾಧಾನಯಜ್ಞಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಟಗರನ್ನು ತರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ದಹನಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಟಗರು, ಪಾಪಪರಿಹಾರ ಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಕುರಿ, ಸಮಾಧಾನ ಬಲಿಗಾಗಿ ಕಳಂಕರಹಿತವಾದ ಒಂದು ಟಗರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಯೆಹೋವನಿಗೆ ತನ್ನ ಸಮರ್ಪಣೆಯನ್ನು ಮಾಡಬೇಕು. ಅವನು ಸಮರ್ಪಿಸಬೇಕಾದದು ಯಾವುವೆಂದರೆ, ಸರ್ವಾಂಗಹೋಮಕ್ಕೆ ದೋಷವಿಲ್ಲದ ಒಂದು ವರ್ಷದ ಗಂಡು ಕುರಿಮರಿ, ದೋಷಪರಿಹಾರ ಯಜ್ಞಕ್ಕಾಗಿ ಯಾವ ದೋಷವಿಲ್ಲದ ಒಂದು ವರ್ಷದ ಹೆಣ್ಣು ಕುರಿಮರಿ, ಸಮಾಧಾನಯಜ್ಞಕ್ಕಾಗಿ ಯಾವ ದೋಷವಿಲ್ಲದ ಒಂದು ಟಗರು ಇವೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಅವರು ಯೆಹೋವ ದೇವರಿಗೆ ತಮ್ಮ ಅರ್ಪಣೆಗಳನ್ನು ಅರ್ಪಿಸಬೇಕು. ಅದೇನೆಂದರೆ, ದಹನಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಟಗರಿನ ಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಹೆಣ್ಣು ಕುರಿಮರಿಯನ್ನೂ, ಸಮಾಧಾನದ ಬಲಿಗಾಗಿ ಒಂದು ಕಳಂಕವಿಲ್ಲದ ಟಗರನ್ನೂ ತರಬೇಕು. ಅಧ್ಯಾಯವನ್ನು ನೋಡಿ |