ಅರಣ್ಯಕಾಂಡ 5:27 - ಕನ್ನಡ ಸತ್ಯವೇದವು J.V. (BSI)27 ಅವಳು ದೋಷಿಯಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಕುಡಿದನಂತರ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷವಾಗುವದರಿಂದ ಅವಳ ಹೊಟ್ಟೆ ಉಬ್ಬುವದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು; ಆ ಸ್ತ್ರೀಯು ತನ್ನ ಜನರೊಳಗೆ ಶಾಪಗ್ರಸ್ತಳಾಗುವಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಅವಳು ಅಶುದ್ಧಳಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಆ ನೀರನ್ನು ಕುಡಿದ ನಂತರ ಆ ನೀರು ಅವಳೊಳಗೆ ಸೇರಿ ವಿಷವಾಗುವುದರಿಂದ ಅವಳ ಹೊಟ್ಟೆ ಉಬ್ಬುವುದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು. ಆಗ ಆ ಸ್ತ್ರೀಯು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗುವಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಅವಳು ದೋಷಿಯಾಗಿ ಗಂಡನಿಗೆ ದ್ರೋಹವೆಸಗಿದ್ದರೆ ಕುಡಿದ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷವಾಗುವುದು. ಈ ಕಾರಣ ಅವಳ ಹೊಟ್ಟೆ ಉಬ್ಬುವುದು. ಅವಳ ಜನನೇಂದ್ರಿಯಗಳು ಬತ್ತಿಹೋಗುವುವು. ಆಕೆ ತನ್ನ ಜನರ ಮಧ್ಯೆ ಶಾಪಗ್ರಸ್ತಳಾಗುವಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಅವಳು ಅಶುದ್ಧಳಾಗಿದ್ದರೆ ಮತ್ತು ತನ್ನ ಗಂಡನಿಗೆ ವಿರುದ್ಧವಾಗಿ ಪಾಪಮಾಡಿದ್ದರೆ, ನೀರು ಅವಳಿಗೆ ಹಾನಿಯನ್ನು ಉಂಟುಮಾಡುವುದು, ನೀರು ಅವಳೊಳಗೆ ಹೋಗಿ ಅವಳಿಗೆ ಮಹಾಸಂಕಟವನ್ನು ಉಂಟುಮಾಡುವುದು. ನೀರು ಅವಳನ್ನು ಆ ಕೂಡಲೇ ಬಂಜೆಯನ್ನಾಗಿ ಮಾಡುವುದು. ಅವಳು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ, ಶಪಿಸುವ ನೀರು ಆಕೆಯೊಳಗೆ ಸೇರಿ ಕಹಿಯಾಗುವುದು. ಅವಳ ಹೊಟ್ಟೆ ಉಬ್ಬಿ, ಅವಳ ತೊಡೆ ಕ್ಷೀಣವಾಗುವುದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು. ಅಧ್ಯಾಯವನ್ನು ನೋಡಿ |