Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 34:5 - ಕನ್ನಡ ಸತ್ಯವೇದವು J.V. (BSI)

5 ಅಲ್ಲಿಂದ ಅದು ಹಚರದ್ದಾರ್, ಅಚ್ಮೋನ್ ಎಂಬ ಊರುಗಳ ಮೇಲೆ ಐಗುಪ್ತದೇಶದ ಮುಂದಿರುವ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಈಜಿಪ್ಟ್ ದೇಶದ ಮುಂದೆ ಇರುವ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಗಡಿಯು ಅಚ್ಮೋನಿನಿಂದ ಈಜಿಪ್ಟಿನ ನದಿಯ ಕಡೆಗೆ ತಿರುಗಿಕೊಂಡು ಸಮುದ್ರವನ್ನು ಸೇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅಚ್ಮೋನಿನಿಂದ ಈಜಿಪ್ಟಿನ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 34:5
8 ತಿಳಿವುಗಳ ಹೋಲಿಕೆ  

ಅಚ್ಮೋನಿನ ಮೇಲೆ ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರದಲ್ಲಿ ಮುಗಿಯುವದು. ಇದು ಅದರ ತೆಂಕಣ ಮೇರೆ.


ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು - ಐಗುಪ್ತದೇಶದ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ ಅಂದನು;


ಇಸ್ರಾಯೇಲ್ಯರೇ, ತುಂಬಿತುಳುಕುವ [ಯೂಫ್ರೇಟೀಸ್] ನದಿಯಿಂದ ಐಗುಪ್ತ ದೇಶದ ನದಿಯವರೆಗೆ ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ; ಆಗ ನಿನ್ನನ್ನು ಒಬ್ಬೊಬ್ಬರನ್ನಾಗಿ ಆರಿಸುವನು.


ಈ ಪ್ರಕಾರ ಸೊಲೊಮೋನನೂ ಹಮಾತಿನ ದಾರಿಯಿಂದ ಐಗುಪ್ತದ ಹಳ್ಳದವರೆಗಿರುವ ಪ್ರಾಂತಗಳಿಂದ ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲ್ಯರೂ ಎರಡು ವಾರ ಅಂದರೆ ಹದಿನಾಲ್ಕು ದಿವಸಗಳವರೆಗೆ ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಹಬ್ಬಮಾಡಿದರು.


ಅಷ್ಡೋದ್ ಸಂಸ್ಥಾನವೂ ಅದರ ಗ್ರಾಮನಗರಗಳೂ; ಗಾಜಾ ಸಂಸ್ಥಾನವೂ ಐಗುಪ್ತಹಳ್ಳದ ಉತ್ತರದಲ್ಲಿ ಮತ್ತು ಮಹಾಸಾಗರತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ ನಗರಗಳೂ;


ತೆಂಕಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ [ಐಗುಪ್ತದ ಮುಂದಿರುವ] ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟಬೇಕು. ಇದು ತೆಂಕಣ ಮೇರೆಯು.


ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು