Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 30:9 - ಕನ್ನಡ ಸತ್ಯವೇದವು J.V. (BSI)

9 ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂಥ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವದು; ಅವಳು ಅದನ್ನು ನೆರವೇರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂತಹ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವುದು. ಅವಳು ಅದನ್ನು ನೆರವೇರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ವಿಧವೆ ಇಲ್ಲವೆ ಗಂಡನಿಂದ ಬೇರ್ಪಟ್ಟ ಮಹಿಳೆ ಇಂಥ ಪ್ರಮಾಣವನ್ನು ಕೈಗೊಂಡಿದ್ದರೆ ಅದು ನಿಲ್ಲುತ್ತದೆ. ಅವಳು ಅದನ್ನು ನೆರವೇರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ಇದಲ್ಲದೆ ವಿಧವೆಯಾದರೂ ವಿವಾಹ ವಿಚ್ಛೇದಿತ ಮಹಿಳೆಯಾದರೂ ಇಂತಹ ಹರಕೆ ಇಲ್ಲವೆ ಪ್ರಮಾಣ ಮಾಡಿಕೊಂಡರೆ ಅವಳು ಅದನ್ನು ನೆರವೇರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 30:9
6 ತಿಳಿವುಗಳ ಹೋಲಿಕೆ  

ಅದಕ್ಕೆ ದೃಷ್ಟಾಂತ - ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು; ಗಂಡನು ಸತ್ತರೆ ಗಂಡನ ಹಂಗು ಆಕೆಗೆ ತಪ್ಪುವದು.


ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿಹಗಲೂ ದೇವರ ಸೇವೆಯನ್ನು ಮಾಡುತ್ತಿದ್ದಳು.


ಯಾಜಕರು ತಮ್ಮ ದೇವರಿಗೆ ಮೀಸಲಾದವರಾಗಿರುವದರಿಂದ ವೇಶ್ಯಾ ಸ್ತ್ರೀಯನ್ನಾಗಲಿ ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.


ಆದರೆ ಗಂಡನು ಕೇಳಿದಾಗಲೇ ಬೇಡವೆಂದು ಅಪ್ಪಣೆಕೊಟ್ಟರೆ ಆ ಹರಕೆಯು ಇಲ್ಲವೆ ಅವಿಚಾರ ಪ್ರತಿಜ್ಞೆಯು ನಿರರ್ಥಕವಾಗುವವು. ಯೆಹೋವನು ಅವಳನ್ನು ದೋಷಿಯೆಂದು ಎಣಿಸುವದಿಲ್ಲ.


ಮುತ್ತೈದೆಯು ಅಂಥ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ


ಅವಳು ಮತ್ತೊಬ್ಬನನ್ನು ಮದುವೆಯಾಗಿ ಅವನಿಂದಲೂ ತಿರಸ್ಕರಿಸಲ್ಪಟ್ಟು ತ್ಯಾಗಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ ಅಥವಾ ಈ ಎರಡನೆಯ ಗಂಡನು ಸತ್ತರೆ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು