Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 3:3 - ಕನ್ನಡ ಸತ್ಯವೇದವು J.V. (BSI)

3 ಇವರೇ ಯಾಜಕೋದ್ಯೋಗವನ್ನು ನಡಿಸುವದಕ್ಕಾಗಿ ಅಭಿಷೇಕದಿಂದ ಪ್ರತಿಷ್ಠಿತರಾದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇವರು ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಅಭಿಷೇಕಹೊಂದಿದವರಾಗಿ ಪ್ರತಿಷ್ಠಿತರಾದ ಆರೋನನ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಅಭಿಷೇಕದಿಂದ ಪ್ರತಿಷ್ಠಿತರಾದವರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಈ ಗಂಡುಮಕ್ಕಳು ಯಾಜಕರಾಗಿ ಸೇವೆಮಾಡಲು ಅಭಿಷೇಕಿಸಲ್ಪಟ್ಟವರಾಗಿದ್ದರು ಮತ್ತು ಪ್ರತಿಷ್ಠೀತರಾದವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯಾಜಕರಾಗಿ ಅಭಿಷೇಕ ಹೊಂದಿದ ಆರೋನನ ಮಕ್ಕಳುಗಳ ಹೆಸರುಗಳು ಇವೇ, ಇವರೇ ಯಾಜಕೋದ್ಯೋಗ ಮಾಡುವುದಕ್ಕೆ ಪ್ರತಿಷ್ಠಿತರಾದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 3:3
10 ತಿಳಿವುಗಳ ಹೋಲಿಕೆ  

ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸಬೇಕು; ಆಗ ಅವರು ನನಗೆ ಯಾಜಕರಾಗಿರುವರು.


ಆಗ ಮೋಶೆ ಅಭಿಷೇಕತೈಲದಲ್ಲಿಯೂ ಯಜ್ಞವೇದಿಯ ಮೇಲಿದ್ದ ರಕ್ತದಲ್ಲಿಯೂ ಸ್ವಲ್ಪ ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿವಿುಕಿಸಿದನು. ಹೀಗೆ ಆರೋನನನ್ನೂ ಅವನ ವಸ್ತ್ರಗಳನ್ನೂ ಅವನ ಮಕ್ಕಳನ್ನೂ ಅವರ ವಸ್ತ್ರಗಳನ್ನೂ ಪ್ರತಿಷ್ಠಿಸಿದನು.


ಅದರಲ್ಲಿ ಸ್ವಲ್ಪವನ್ನು ಆರೋನನ ತಲೆಯ ಮೇಲೆ ಹೊಯಿದು ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.


ಧರ್ಮಶಾಸ್ತ್ರವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇವಿುಸುತ್ತದೆ; ಆದರೆ ಧರ್ಮಶಾಸ್ತ್ರದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ನೇವಿುಸುತ್ತದೆ.


ಅವರು ನನಗೋಸ್ಕರ ಯಾಜಕರಾಗುವದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನೂ ಅಭಿಷೇಕಿಸಬೇಕು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವದು ಎಂದು ಹೇಳಿದನು.


ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು.


ನಾದಾಬ್ ಅಬೀಹೂ ಎಂಬಿಬ್ಬರು ಸೀನಾಯಿ ಅರಣ್ಯದಲ್ಲಿ ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದದರಿಂದ ಆತನ ಸನ್ನಿಧಿಯಲ್ಲೇ ಸತ್ತು ಹೋದರು; ಅವರಿಗೆ ಮಕ್ಕಳಿರಲಿಲ್ಲ. ಎಲ್ಲಾಜಾರ್ ಈತಾಮಾರ್ ಎಂಬಿಬ್ಬರು ತಂದೆಯ ಕೈಕೆಳಗೆ ಯಾಜಕಧರ್ಮವನ್ನು ನಡಿಸಿದರು.


ಇದಲ್ಲದೆ ಅವನು ಲೇವಿಯ ಸಂತಾನದವರಾದ ಗೇರ್ಷೋನ್ಯರು, ಕೆಹಾತ್ಯರು, ಮೆರಾರೀಯರು ಇವರನ್ನು ವರ್ಗವರ್ಗಗಳಾಗಿ ವಿಭಾಗಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು