Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 28:2 - ಕನ್ನಡ ಸತ್ಯವೇದವು J.V. (BSI)

2 ನನಗೆ ಸಮರ್ಪಿಸಬೇಕಾದ ಯಜ್ಞಗಳನ್ನು ಅಂದರೆ ನನಗೆ ಸುಗಂಧಹೋಮ ಮಾಡುವದಕ್ಕಾಗಿ ಇಸ್ರಾಯೇಲ್ಯರು ನನಗೋಸ್ಕರ ತರುವ ಆಹಾರವನ್ನು ತಕ್ಕ ಕಾಲಗಳಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ಅವರಿಗೆ ಆಜ್ಞಾಪಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುಗಂಧಹೋಮಮಾಡುವುದಕ್ಕಾಗಿ ಇಸ್ರಾಯೇಲರು ನನಗೋಸ್ಕರ ತರುವ ಆಹಾರವನ್ನು ನೇಮಕವಾದ ಕಾಲಗಳಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ಅವರಿಗೆ ಆಜ್ಞಾಪಿಸು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನನಗೆ ಸಮರ್ಪಿಸಬೇಕಾದ ಬಲಿಗಳನ್ನು, ಅಂದರೆ ದಹನಬಲಿಗಾಗಿ ಇಸ್ರಯೇಲರು ನನಗೆ ತರುವ ಆಹಾರವನ್ನು ತಕ್ಕ ಕಾಲದಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ವಿಧಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ನೀನು ಇಸ್ರೇಲರಿಗೆ ಈ ಆಜ್ಞೆಯನ್ನು ಕೊಡು. ನೀವು ಎಚ್ಚರಿಕೆಯಾಗಿದ್ದು ನೇಮಿತ ಕಾಲಗಳಲ್ಲಿ ನನಗೆ ಅರ್ಪಿಸತಕ್ಕ ಧಾನ್ಯಸಮರ್ಪಣೆಗಳನ್ನು ನನಗೆ ಸುಗಂಧ ಹೋಮಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುವಾಸನೆಗೋಸ್ಕರ ಅರ್ಪಿಸುವ ಅಂದರೆ, ದಹನಬಲಿಗಾಗಿ ಆಹಾರವನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವಂತೆ ನೀವು ನೋಡಿಕೊಳ್ಳಿರಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 28:2
32 ತಿಳಿವುಗಳ ಹೋಲಿಕೆ  

ಯಾಜಕನು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಮೂಲಕವಾಗಿ ಯೆಹೋವನಿಗೆ ಆಹಾರವಾಗುವದು.


ಅದರ ಸುವಾಸನೆಯು ಯೆಹೋವನಿಗೆ ಗಮಗವಿುಸಲು ಆತನು ಹೃದಯದೊಳಗೆ - ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು; ಆದರೂ ನಾನು ಇನ್ನು ಮೇಲೆ ಅವರ ನಿವಿುತ್ತವಾಗಿ ಭೂವಿುಯನ್ನು ಶಪಿಸುವದಿಲ್ಲ; ನಾನು ಎಲ್ಲಾ ಜೀವಿಗಳನ್ನೂ ಈಗ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವದಿಲ್ಲ.


ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ.


ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.


ರಕ್ಷಣಾಮಾರ್ಗದಲ್ಲಿರುವವರಲ್ಲಿಯೂ ನಾಶನಮಾರ್ಗದಲ್ಲಿರುವವರಲ್ಲಿಯೂ ನಾವು ದೇವರ ಮುಂದೆ ಕ್ರಿಸ್ತನ ಪರಿಮಳವಾಗಿದ್ದೇವೆ.


ನೀವೋ - ಯೆಹೋವನ ಮೇಜು ಅಶುದ್ಧ, ಅದರ ಮೇಲಣ ಎಡೆಯು ತುಚ್ಫ ಅಂದುಕೊಳ್ಳುವದರಿಂದ ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದ್ದೀರಿ.


ನನ್ನ ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುತ್ತೀರಲ್ಲಾ. ಯಾವ ವಿಷಯದಲ್ಲಿ ನಿನ್ನನ್ನು ಅಶುದ್ಧಗೊಳಿಸಿದ್ದೇವೆ ಅನ್ನುತ್ತೀರೋ?ಯೆಹೋವನ ಮೇಜಿಗೆ ಘನತೆಯೇನಿದೆ ಎಂದು ನೀವು ಅಂದುಕೊಳ್ಳುವದರಲ್ಲಿಯೇ.


ನಾನು ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ ನೀವು ಚದರಿಹೋಗಿರುವ ದೇಶಗಳಿಂದ ತಂದು ಕೂಡಿಸುವಾಗ ನಿಮ್ಮ ಸುಗಂಧಹೋಮವನ್ನು ಆಘ್ರಾಣಿಸಿ ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.


ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು ಇವುಗಳನ್ನೂ ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದಿ; ಅಯ್ಯೋ, ಹೀಗಾಯಿತಲ್ಲ! ಇದು ಕರ್ತನಾದ ಯೆಹೋವನ ನುಡಿ.


ಅಮಾವಾಸ್ಯೆಯಲ್ಲಿಯೂ ನಮ್ಮ ಉತ್ಸವದಿನವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.


ಅವರೆಲ್ಲರೂ ಒಟ್ಟಾಗಿ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕೋಸ್ಕರ ಸರ್ವಾಂಗಹೋಮವಾಗಿ ಒಂದು ಹೋರಿಯನ್ನೂ ನೈವೇದ್ಯವಾಗಿ ಅದಕ್ಕೆ ನೇವಿುತವಾದ ಧಾನ್ಯದ್ರವ್ಯ ಪಾನದ್ರವ್ಯಗಳನ್ನೂ ದೋಷಪರಿಹಾರಕಯಜ್ಞವಾಗಿ ಒಂದು ಹೋತವನ್ನೂ ಸಮರ್ಪಿಸಬೇಕು.


ಪಾನದ್ರವ್ಯವಾಗಿ ಎರಡು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು.


ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕಾಗಿ ದನಗಳಲ್ಲಾಗಲಿ ಆಡುಕುರಿಗಳಲ್ಲಾಗಲಿ ಒಂದು ಪಶುವನ್ನು ಹೋಮಮಾಡುವವನು ಸರ್ವಾಂಗ ಹೋಮಮಾಡಿದರೂ ಸರಿಯೇ, ಹರಕೆ ಸಲ್ಲಿಸುವದಕ್ಕೋ ಕೃತಜ್ಞತೆಯನ್ನು ತೋರಿಸುವದಕ್ಕೋ ಹಬ್ಬವನ್ನು ಆಚರಿಸುವದಕ್ಕೋ ಸಮಾಧಾನಯಜ್ಞ ಮಾಡಿದರೂ ಸರಿಯೇ,


ಆದರೆ ಯಾವನಾದರೂ ಶುದ್ಧನಾಗಿಯೂ ಪ್ರಯಾಣಮಾಡದೆಯೂ ಇದ್ದು ಪಸ್ಕಹಬ್ಬವನ್ನು ಆಚರಿಸದೆ ತಪ್ಪಿದರೆ ಅವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. ಅವನು ಯೆಹೋವನಿಂದ ನೇವಿುತವಾದ ಯಜ್ಞವನ್ನು ಗೊತ್ತಾದ ಕಾಲದಲ್ಲಿ ಸಮರ್ಪಿಸದೆ ಹೋದದರಿಂದ ತನ್ನ ದೋಷಫಲವನ್ನು ಅನುಭವಿಸಬೇಕು.


ಮನುಷ್ಯ ಶವ ಸೋಂಕಿದದರಿಂದ ನಾವು ಅಶುದ್ಧರಾದೆವು. ನಾವು ವಿುಕ್ಕ ಇಸ್ರಾಯೇಲ್ಯರೊಡನೆ ನೇಮಕವಾದ ಕಾಲದಲ್ಲಿ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವದಕ್ಕೆ ಅಪ್ಪಣೆಯಿಲ್ಲವೋ ಎಂದು ಕೇಳಲು ಮೋಶೆ ಅವರಿಗೆ -


ಅವರು ನಿಮ್ಮ ದೇವರ ಆಹಾರವನ್ನು ಸಮರ್ಪಿಸುವವರಾದ ಕಾರಣ ಅವರನ್ನು ದೇವರ ಸೇವಕರೆಂದು ಭಾವಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ಅವರನ್ನೂ ಪರಿಶುದ್ಧರೆಂದು ನೀವು ಭಾವಿಸಬೇಕು.


ಅವರು ದೇವರಿಗೆ ಮೀಸಲಾಗಿರಬೇಕು; ತಾವು ಸೇವಿಸುವ ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸಬಾರದು. ತಮ್ಮ ದೇವರ ಆಹಾರವನ್ನು ಅಂದರೆ ಯೆಹೋವನ ಹೋಮದ್ರವ್ಯಗಳನ್ನು ಅವರು ಸಮರ್ಪಿಸುವವರಾಗಿರುವದರಿಂದ ಪವಿತ್ರರಾಗಿರಬೇಕು.


ಅವನು ಆ ಪಕ್ಷಿಯನ್ನು ರೆಕ್ಕೆಗಳ ಸಂದುಗಳಲ್ಲಿ ಹರಿಯಬೇಕು, ಆದರೆ ರೆಕ್ಕೆಗಳನ್ನು ಪೂರಾ ಕಿತ್ತು ಹಾಕಕೂಡದು. ಅನಂತರ ಅವನು ಅದನ್ನು ಯಜ್ಞವೇದಿಯ ಮೇಲಣ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವ ಸರ್ವಾಂಗಹೋಮವಾಗಿದೆ.


ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆಸಿದನಂತರ ಯಾಜಕನು ಅದನ್ನು ಪೂರ್ತಿಯಾಗಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟು ಮಾಡುವ ಸರ್ವಾಂಗಹೋಮವಾಗಿದೆ.


ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದನಂತರ ಯಾಜಕನು ಅದನ್ನು ಪೂರ್ತಿಯಾಗಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವ ಸರ್ವಾಂಗಹೋಮವಾಗಿದೆ.


ಅದನ್ನೆಲ್ಲಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು. ಇದು ಯೆಹೋವನಿಗೆ ಸುಗಂಧಹೋಮವಾಗಿದೆ.


ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದ ನೇಮಕವಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಆ ಮಾಸದಲ್ಲೇ ಐಗುಪ್ತದೇಶದಿಂದ ಹೊರಟುಬಂದಿರಲ್ಲಾ. ಒಬ್ಬನೂ ಕೈಯಲ್ಲಿ ಕಾಣಿಕೆಯಿಲ್ಲದೆ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಕೂಡದು.


ಯೆಹೋವನು ಮೋಶೆಗೆ ಹೇಳಿದ್ದೇನಂದರೆ -


ಅವರು ಸುತ್ತಣ ಪ್ರಾಂತಗಳ ಜನರಿಗೆ ಹೆದರಿಕೊಂಡಿದ್ದರಿಂದ ವೇದಿಯನ್ನು ಅದರ ಸ್ಥಳದಲ್ಲಿ ಕಟ್ಟಿ ಅದರ ಮೇಲೆ ಯೆಹೋವನಿಗೋಸ್ಕರ ಪ್ರಾತಃಸ್ಸಾಯಂಕಾಲಗಳ ಸರ್ವಾಂಗಹೋಮಗಳನ್ನು ಅರ್ಪಿಸಿದರು.


ನೀವು ಕಾಣಿಕೆಯಾಗಿಯಾಗಲಿ ಹರಕೆಯನ್ನು ತೀರಿಸುವದಕ್ಕಾಗಿಯಾಗಲಿ ಮಾಡುವ ಸರ್ವಾಂಗಹೋಮ, ಧಾನ್ಯದ್ರವ್ಯ ನೈವೇದ್ಯ, ಪಾನದ್ರವ್ಯಾರ್ಪಣೆ, ಸಮಾಧಾನಯಜ್ಞ ಇವುಗಳನ್ನಲ್ಲದೆ ಹಬ್ಬಗಳ ದಿನಗಳಲ್ಲಿ ಮೇಲೆ ಸೂಚಿಸಿರುವ ಯಜ್ಞಗಳನ್ನೂ ಹೆಚ್ಚಾಗಿ ಮಾಡಬೇಕು.


ನಿಯವಿುತ ಸಂಖ್ಯೆಗೆ ಸರಿಯಾಗಿ ಸಬ್ಬತ್‍ದಿನ ಅಮಾವಾಸ್ಯೆ ಜಾತ್ರೆ ಇವುಗಳಲ್ಲಿ ಯೆಹೋವನ ಮುಂದೆ ತಪ್ಪದೆ ನಡೆಯುವ ಸರ್ವಾಂಗಹೋಮ ಸಮರ್ಪಣೆಯ ಹೊತ್ತಿನಲ್ಲಿ ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವದೂ ಇವೇ.


ಯೆಹೋಯಾದನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವನ ಆಲಯದ ಕಾವಲುಗಾರರನ್ನು ನೇವಿುಸಿದನು. ದಾವೀದನು ಆ ಯಾಜಕರನ್ನು ಯೆಹೋವನ ಆಲಯದ ಸೇವೆಗೋಸ್ಕರ ವರ್ಗವರ್ಗಗಳಾಗಿ ವಿಭಾಗಿಸಿದ್ದನು. ದಾವೀದನು ನೇವಿುಸಿದ ಉತ್ಸಾಹ ಗಾಯನದೊಡನೆ ಮೋಶೆಯ ಧರ್ಮಶಾಸ್ತ್ರಾನುಸಾರ ಯೆಹೋವನಿಗೆ ಸರ್ವಾಂಗಹೋಮಸಮರ್ಪಣೆ ಮಾಡುವದೇ ಅವರ ಕರ್ತವ್ಯ.


ಇದಲ್ಲದೆ ಅವನು ಯೆಹೋವನ ಧರ್ಮಶಾಸ್ತ್ರವಿಧಿಗನುಸಾರವಾಗಿ ಪ್ರಾತಃಕಾಲ ಸಾಯಂಕಾಲ ಸಬ್ಬತ್‍ದಿನ ಅಮಾವಾಸ್ಯೆ ಜಾತ್ರೆ ಇವುಗಳಲ್ಲಿ ಸಮರ್ಪಣೆಯಾಗತಕ್ಕ ಸರ್ವಾಂಗಹೋಮಗಳಿಗೋಸ್ಕರ ಆಗಬೇಕಾದದ್ದೆಲ್ಲಾ ತನ್ನ ಆಸ್ತಿಯಿಂದ ಸಲ್ಲಿಸಬೇಕೆಂತಲೂ


ಆಗ ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಸರ್ವಾಂಗಹೋಮಗಳನ್ನು ಸಮರ್ಪಿಸುವದಕ್ಕಾಗಿ ಯೋಚಾದಾಕನ ಮಗನಾದ ಯೇಷೂವನೂ ಯಾಜಕರಾದ ಅವನ ಬಂಧುಗಳೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಅವನ ಬಂಧುಗಳೂ ಇಸ್ರಾಯೇಲ್‍ದೇವರ ಯಜ್ಞವೇದಿಯನ್ನು ತಿರಿಗಿ ಕಟ್ಟುವದಕ್ಕೆ ಪ್ರಾರಂಭಿಸಿದರು.


ಧರ್ಮಶಾಸ್ತ್ರವಿಧಿಗನುಸಾರವಾಗಿ ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮೇಲೆ ಬೆಂಕಿಯುರಿಸುವದಕ್ಕಾಗಿ ವರುಷ ವರುಷ ನೇವಿುತವಾದ ಕಾಲಗಳಲ್ಲಿ ನಮ್ಮ ದೇವಾಲಯಕ್ಕೆ ಕಟ್ಟಿಗೆ ದೊರಕುವ ಹಾಗೆ ಆಯಾಗೋತ್ರಾನುಸಾರ ಕಾಷ್ಠದಾನ ಮಾಡತಕ್ಕವರು ಇಂಥವರು ಎಂಬದನ್ನು ಯಾಜಕರೂ ಲೇವಿಯರೂ ಸಾಧಾರಣ ಜನರೂ ಆಗಿರುವ ನಮ್ಮಲ್ಲಿ ಚೀಟುಹಾಕಿ ಗೊತ್ತುಮಾಡುತ್ತೇವೆ;


ಉತ್ಸವಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮಪಶು, ಧಾನ್ಯನೈವೇದ್ಯ, ಪಾನನೈವೇದ್ಯ, ಇವುಗಳನ್ನು ಒದಗಿಸುವದು ಪ್ರಭುವಿನ ಕರ್ತವ್ಯ; ಇಸ್ರಾಯೇಲ್ ವಂಶದ ದೋಷನಿವಾರಣೆಗಾಗಿ ಅವನು ದೋಷಪರಿಹಾರಕಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮಪಶು, ಸಮಾಧಾನಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು