ಅರಣ್ಯಕಾಂಡ 26:59 - ಕನ್ನಡ ಸತ್ಯವೇದವು J.V. (BSI)59 ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿ ಯಾರಂದರೆ ಐಗುಪ್ತದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದಳು. ಈಕೆಯಲ್ಲಿ ಅಮ್ರಾಮನಿಂದ ಆರೋನನೂ ಮೋಶೆಯೂ ಇವರ ಅಕ್ಕನಾದ ವಿುರ್ಯಾಮಳೂ ಹುಟ್ಟಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201959 ಅಮ್ರಾಮನ ಹೆಂಡತಿ ಯಾರೆಂದರೆ: ಐಗುಪ್ತ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದಳು. ಈಕೆಯಲ್ಲಿ ಅಮ್ರಾಮನಿಂದ ಆರೋನನೂ, ಮೋಶೆಯೂ ಮತ್ತು ಇವರ ಅಕ್ಕ ಮಿರ್ಯಾಮಳೂ ಹುಟ್ಟಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)59 ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿ ಈಜಿಪ್ಟ್ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದ ಎಂಬವಳು. ಈಕೆಯಲ್ಲಿ ಅಮ್ರಾಮನಿಂದ ಆರೋನ, ಮೋಶೆ ಮತ್ತು ಅಕ್ಕ ಮಿರ್ಯಾಮಳೂ ಹುಟ್ಟಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್59 ಅಮ್ರಾಮನು ಕೆಹಾತನ ಕುಲಕ್ಕೆ ಸೇರಿದವನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಅವಳು ಲೇವಿ ಕುಟುಂಬದವಳು. ಅವಳು ಈಜಿಪ್ಟಿನಲ್ಲಿ ಹುಟ್ಟಿದಳು. ಅಮ್ರಾಮ್ ಮತ್ತು ಯೋಕೆಬೆದಳಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಅವರು ಯಾರೆಂದರೆ ಆರೋನ ಮತ್ತು ಮೋಶೆ. ಅವರಿಗೆ ಒಬ್ಬ ಮಗಳೂ ಇದ್ದಳು. ಅವಳ ಹೆಸರು ಮಿರ್ಯಾಮಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ59 ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಈಜಿಪ್ಟಿನಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು. ಅಧ್ಯಾಯವನ್ನು ನೋಡಿ |