Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 25:8 - ಕನ್ನಡ ಸತ್ಯವೇದವು J.V. (BSI)

8 ಆ ಇಸ್ರಾಯೇಲ್ಯನ ಹಿಂದೆ ಹೋಗಿ ಅವನು ಮಲಗುವ ಕೋಣೆಯನ್ನು ಹೊಕ್ಕು ಅವರಿಬ್ಬರನ್ನೂ ಅಂದರೆ ಆ ಇಸ್ರಾಯೇಲ್ಯನನ್ನೂ ಆ ಸ್ತ್ರೀಯನ್ನೂ ಒಂದೇ ಏಟಿನಿಂದ ಹೊಟ್ಟೆಯಲ್ಲಿ ತಿವಿದು ಕೊಂದನು. ಆಗ ಇಸ್ರಾಯೇಲ್ಯರಿಗುಂಟಾಗಿದ್ದ ವ್ಯಾಧಿ ನಿಂತುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನು ಇಸ್ರಾಯೇಲನ ಹಿಂದೆ ಹೋಗಿ ಅವನು ಮಲಗುವ ಕೋಣೆಯನ್ನು ಪ್ರವೇಶಿಸಿ ಅವರಿಬ್ಬರನ್ನೂ ಅಂದರೆ ಆ ಇಸ್ರಾಯೇಲನನ್ನೂ ಮತ್ತು ಆ ಸ್ತ್ರೀಯನ್ನೂ ಒಂದೇ ಬಾರಿಗೆ ಹೊಟ್ಟೆಯನ್ನು ತಿವಿದು ಕೊಂದುಹಾಕಿದನು. ಆಗ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತು ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆ ಇಸ್ರಯೇಲ ವ್ಯಕ್ತಿಯ ಹಿಂದೆಯೇ ಹೋಗಿ, ಅವನ ಒಳಕೋಣೆಯನ್ನು ಹೊಕ್ಕು ಅವರಿಬ್ಬರನ್ನು, ಅಂದರೆ ಆ ಇಸ್ರಯೇಲನನ್ನು ಮತ್ತು ಆ ಮಹಿಳೆಯನ್ನು ಒಂದೇ ಬಾರಿಗೆ ಹೊಟ್ಟೆಯಲ್ಲಿ ತಿವಿದುಕೊಂದನು. ಹೀಗೆ ಇಸ್ರಯೇಲರಿಗೆ ಒದಗಿದ್ದ ಜಾಡ್ಯ ನಿಂತುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆ ಇಸ್ರೇಲನನ್ನು ಹಿಂಬಾಲಿಸಿ ಮಲಗುವ ಕೋಣೆಯೊಳಗೆ ಹೋಗಿ ಅವನನ್ನೂ ಆ ಮಿದ್ಯಾನ್ ಸ್ತ್ರೀಯನ್ನೂ ಒಂದೇ ಏಟಿನಿಂದ ಹೊಟ್ಟೆಯಲ್ಲಿ ತಿವಿದು ಕೊಂದನು. ಆಗ ಇಸ್ರೇಲರಿಗುಂಟಾದ ವ್ಯಾಧಿ ನಿಂತುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ, ಇಸ್ರಾಯೇಲಿನವನನ್ನೂ ಆ ಮಹಿಳೆಯನ್ನೂ ಒಂದೇ ಬಾರಿಗೆ ಇಬ್ಬರ ಹೊಟ್ಟೆಯನ್ನು ತಿವಿದನು. ಹೀಗೆ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 25:8
10 ತಿಳಿವುಗಳ ಹೋಲಿಕೆ  

ದಾವೀದನು ಅವನಿಗೆ - ನಿನ್ನ ಕಣವನ್ನೂ ಭೂವಿುಯನ್ನೂ ನನಗೆ ಕೊಡು; ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ನಾನು ಅದರಲ್ಲಿ ಯೆಹೋವನಿಗೋಸ್ಕರ ಒಂದು ವೇದಿಯನ್ನು ಕಟ್ಟಿಸುತ್ತೇನೆ; ಪೂರ್ಣಕ್ರಯ ತೆಗೆದುಕೊಂಡು ಅದನ್ನು ಕೊಡು ಎಂದು ಹೇಳಿದನು.


ಅಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಅದರ ಮೇಲೆ ಆತನಿಗೆ ಸರ್ವಾಂಗ ಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದನು. ಹೀಗೆ ದೇಶದ ಮೇಲಿದ್ದ ಯೆಹೋವನ ಕೋಪವು ಶಾಂತವಾಯಿತು. ಇಸ್ರಾಯೇಲ್ಯರಲ್ಲಿದ್ದ ಸಂಹಾರಕವ್ಯಾಧಿಯು ನಿಂತುಹೋಯಿತು.


ಆದಕಾರಣ ಮೋಶೆ ಇಸ್ರಾಯೇಲ್ಯರ ನ್ಯಾಯಾಧಿಪತಿಗಳಿಗೆ - ನಿಮ್ಮಲ್ಲಿ ಪ್ರತಿಯೊಬ್ಬನು ಪೆಗೋರದ ಬಾಳನಿಗೆ ಸೇರಿಕೊಂಡ ತನ್ನ ತನ್ನ ವಶದಲ್ಲಿರುವವರಿಗೆ ಪ್ರಾಣ ಶಿಕ್ಷೆಯನ್ನು ನಡಿಸಬೇಕೆಂದು ಆಜ್ಞಾಪಿಸಿದನು.


ನಾನು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ [ವಾಗ್ದಾನ ಮಾಡಿದ್ದು] ಜೀವ, ಸುಖ; ಅದರಂತೆ ಇವುಗಳನ್ನು ಅವರಿಗೆ ದಯಪಾಲಿಸಿದೆನು; [ಒಡಂಬಡಿಕೆಯಲ್ಲಿ ವಿಧಿಸಿದ್ದು] ಭಯಭಕ್ತಿ; ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಅಂಜಿದರು.


ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು ಎಂದು ಹೇಳಿದರು.


ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಅದು ಇಂದಿನವರೆಗೂ ಅದೆ. ಆಗ ಯೆಹೋವನ ರೋಷಾಗ್ನಿಯು ಅಡಗಿಹೋಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.


ಅವುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಶ್ಮಶಾನಭೂವಿುಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದನಂತರ ದೇಶದ ಮೇಲೆ ದೇವರಿಗಿದ್ದ ಕೋಪವು ಶಾಂತಿಯಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು