Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 24:10 - ಕನ್ನಡ ಸತ್ಯವೇದವು J.V. (BSI)

10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ - ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರಿಸಿದೆನು; ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದಿಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇದನ್ನು ಕೇಳಿ ಬಾಲಾಕನಿಗೆ ಬಿಳಾಮನ ಮೇಲೆ ಕಡುಕೋಪ ಉಂಟಾಯಿತು. ಅವನು ಕೈಕೈಹಿಸಿಕಿಕೊಂಡು ಬಿಳಾಮನಿಗೆ, “ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆ; ಆದರೆ ನೀನು ಮೂರು ಸಾರಿಯೂ ಅವರನ್ನೇ ಆಶೀರ್ವದಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಬಿಳಾಮನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಈ ಮೂರು ಸಾರಿಯೂ ಆಶೀರ್ವದಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 24:10
15 ತಿಳಿವುಗಳ ಹೋಲಿಕೆ  

ನರಪುತ್ರನೇ, ನೀನು ದೈವಸಂಕಲ್ಪವನ್ನು ಸಾರಿ ಚಪ್ಪಾಳೆಬಡಿ; ಖಡ್ಗವು ಎರಡರಷ್ಟು ಮೂರರಷ್ಟು ಸಂಹರಿಸಲಿ! ಪ್ರಜೆಯನ್ನು ಹತಿಸುವ ಖಡ್ಗ! ಸುತ್ತಲು ಬೀಸಿ ಅಧಿಪತಿಯನ್ನು ಹತಿಸುವ ಖಡ್ಗ!


ಈ ಮಾತುಗಳನ್ನು ಕೇಳಿ ಬಾಲಾಕನು ಅವನಿಗೆ - ಇದೇನು ನೀನು ನನಗೆ ಮಾಡಿದ್ದು; ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರಿಸಿದೆನು; ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟಿ ಎಂದು ಹೇಳಿದನು.


ಇಗೋ, ನೀನು ದೋಚಿಕೊಂಡ ಲಾಭವನ್ನೂ ನಿನ್ನಲ್ಲಿ ಸುರಿದ ರಕ್ತವನ್ನೂ ನಾನು ನೋಡಿ ಕೈಬಡಿದುಕೊಂಡಿದ್ದೇನೆ.


ನಾನು ಚಪ್ಪಾಳೆಬಡಿದು ನನ್ನ ರೋಷವನ್ನು ತೀರಿಸಿಕೊಳ್ಳುವೆನು. ಕರ್ತನಾದ ನಾನೇ ಇದನ್ನು ನುಡಿದಿದ್ದೇನೆ.


ಜನರು ಅವನನ್ನು ನೋಡಿ ಚಪ್ಪಾಳೆಹೊಡೆದು ಛೀ ಹಾಕಿ ಆಚೆಗೆ ಹೊರಡಿಸುವರು.


ಯಾಕಂದರೆ ಅವರು ಇಸ್ರಾಯೇಲ್ಯರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ; ಅವರನ್ನು ಶಪಿಸುವದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಅವನನ್ನು ಕರಿಸಿದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಅಶೀರ್ವಾದವನ್ನೇ ಹೇಳಿಸಿದನು ಎಂಬ ಮಾತು ಬರೆದಿರುವದಾಗಿ ಕಂಡು ಬಂತು.


ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು; ನೀನು ಏನು ಹೇಳಿದರೂ ಅದನ್ನು ಮಾಡುತ್ತೇನೆ; ನೀನು ಅಗತ್ಯವಾಗಿ ಬಂದು ಈ ಜನವನ್ನು ನನಗೋಸ್ಕರ ಶಪಿಸಬೇಕೆಂದು ಚಿಪ್ಪೋರನ ಮಗನಾದ ಬಾಲಾಕನು ಹೇಳುತ್ತಾನೆಂದು ತಿಳಿಸಿದರು.


ಚಿತ್ತೈಸಬೇಕು; ಒಂದು ಜನಾಂಗವು ಐಗುಪ್ತದೇಶದಿಂದ ಹೊರಟು ಬಂದಿದೆ; ಅವರು ನೆಲವನ್ನೆಲ್ಲಾ ಮುಚ್ಚಿಕೊಂಡಿದ್ದಾರೆ; ನೀನು ಬಂದು ಅವರಿಗೆ ಶಾಪಕೊಡಬೇಕು; ಕೊಟ್ಟರೆ ಅವರನ್ನು ಸೋಲಿಸಿ ಹೊರಡಿಸಿಬಿಡುವದಕ್ಕೆ ನನ್ನಿಂದಾದೀತೆಂದು ಹೇಳಿಕಳುಹಿಸಿದ್ದಾನೆ ಎಂದು ಉತ್ತರಕೊಟ್ಟನು.


ಆದದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು; ಆಗ ಅವರನ್ನು ಸೋಲಿಸಿ ಈ ದೇಶದಿಂದ ಹೊರಡಿಸಿಬಿಡುವದಕ್ಕೆ ನನ್ನಿಂದಾದೀತು. ನಿನ್ನ ಆಶೀರ್ವಾದದಿಂದ ಶುಭವೂ ನಿನ್ನ ಶಾಪದಿಂದ ಅಶುಭವೂ ಉಂಟಾಗುತ್ತದೆ ಎಂಬದನ್ನು ನಾನು ಬಲ್ಲೆ ಎಂದು ಹೇಳಿಸಿದನು.


ಆ ಜನಾಂಗವು ಸಿಂಹದಂತೆ ಕಾಲು ಮುದುರಿ ಹೊಂಚುಹಾಕಿಕೊಂಡದೆ; ಮೃಗೇಂದ್ರನಿಗೆ ಸಮನಾದ ಆ ಜನವನ್ನು ಕೆಣಕುವದು ಯಾರಿಂದಾದೀತು. ಇಸ್ರಾಯೇಲ್ಯರೇ, ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ ಶಪಿಸುವವನಿಗೆ ಶಾಪವೂ ಉಂಟಾಗುವದು ಅಂದನು.


ಆದಕಾರಣ ನಿನ್ನ ಊರಿಗೆ ಹೋಗಿಬಿಡು; ನಿನ್ನನ್ನು ಬಹಳವಾಗಿ ಘನಪಡಿಸುವೆನೆಂದು ಹೇಳಿಕೊಂಡೆನು; ಆದರೆ ನಿನಗೆ ಘನತೆಯುಂಟಾಗದಂತೆ ಯೆಹೋವನು ಅಡ್ಡಿಮಾಡಿದ್ದಾನೆ ಎಂದು ಹೇಳಿದನು.


ನಿಮ್ಮ ಜೀವಮಾನಕಾಲವೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇ ಬಾರದು.


ಹೀಗೆ ಮೂರು ಸಾರಿ ಆಯಿತು. ಆಮೇಲೆ ಎಲ್ಲವೂ ತಿರಿಗಿ ಆಕಾಶಕ್ಕೆ ಎತ್ತಲ್ಪಟ್ಟಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು