ಅರಣ್ಯಕಾಂಡ 23:23 - ಕನ್ನಡ ಸತ್ಯವೇದವು J.V. (BSI)23 ಯಾಕೋಬ್ಯರಲ್ಲಿ ಶಕುನನೋಡುವದು ಇಲ್ಲ; ಇಸ್ರಾಯೇಲ್ಯರಲ್ಲಿ ಕಣಿಕೇಳುವದು ಇಲ್ಲ. ದೇವರು ತಾನು ಮಾಡುವ ಕೆಲಸವನ್ನು ತತ್ಕಾಲದಲ್ಲೇ ಯಾಕೋಬ್ಯರಿಗೆ ತಿಳಿಸುತ್ತಾನೆ; ಸಮಯೋಚಿತವಾಗಿ ಅದನ್ನು ಇಸ್ರಾಯೇಲ್ಯರಿಗೆ ತೋರಿಸುತ್ತಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಯಾಕೋಬರಿಗೆ ವಿರುದ್ಧವಾದ ಶಕುನವಿಲ್ಲ, ಇಸ್ರಾಯೇಲರಲ್ಲಿ ಕಣಿ ಕೇಳುವುದಿಲ್ಲ. ಬದಲಾಗಿ, ಯಾಕೋಬ ಮತ್ತು ಇಸ್ರಾಯೇಲರ ವಿಷಯದಲ್ಲಿ ಹೀಗೆ ಹೇಳುವರು. ‘ದೇವರು ಮಾಡುವ ಕೆಲಸವನ್ನು ನೋಡಿರಿ!’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಯಕೋಬ್ಯರಿಗೆ ವಿರುದ್ಧವಾದ ಶಕುನವಿಲ್ಲ ಇಸ್ರಯೇಲರಿಗೆ ವಿರುದ್ಧವಾದ ತಂತ್ರಮಂತ್ರವಿಲ್ಲ. ತಾನು ಮಾಡುವುದನ್ನು ತತ್ಕಾಲದಲ್ಲೇ ದೇವ ತಿಳಿಸುತ್ತಾನೆ ಯಕೋಬ್ಯರಿಗೆ ಅದನ್ನು ಸೂಚಿಸುತ್ತಾನೆ ಸಮಯೋಚಿತವಾಗಿ ಆ ಇಸ್ರಯೇಲರಿಗೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ನಿಜವಾಗಿಯೂ ಯಾಕೋಬನ ಜನರ ಮಧ್ಯದಲ್ಲಿ ಶಕುನ ನೋಡುವವರು ಇಲ್ಲ. ಇಸ್ರೇಲಿನಲ್ಲಿ ಕಣಿ ಹೇಳುವವರು ಇಲ್ಲ. ಜನರು, ಯಾಕೋಬನ ಮತ್ತು ಇಸ್ರೇಲರ ಬಗ್ಗೆ ಹೀಗೆ ಹೇಳುವರು: ‘ದೇವರು ಮಾಡಿದ ಮಹಾಕಾರ್ಯಗಳನ್ನು ನೋಡಿರಿ!’ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ನಿಶ್ಚಯವಾಗಿ ಯಾಕೋಬನಲ್ಲಿ ಕಣಿಕೇಳುವದು ಇಲ್ಲ. ಇಸ್ರಾಯೇಲರಲ್ಲಿ ಶಕುನನೋಡುವದು ಇಲ್ಲ. ‘ನೋಡಿರಿ, ದೇವರು ಎಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ,’ ಎಂದು ಯಾಕೋಬನ ವಿಷಯವಾಗಿಯೂ, ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು. ಅಧ್ಯಾಯವನ್ನು ನೋಡಿ |